ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಸನ್ಮಾರ್ಗದ ಉಪದೇಶ ಸಾರಿದ ಮಹಾಯೋಗಿ ವೇಮನರು : ಬಸವಲಿಂಗನಗೌಡ

ಕಂಪ್ಲಿ : ಮಹಾಯೋಗಿ ವೇಮನರು ತಮ್ಮ ಪದ್ಯಗಳ ಮೂಲಕ ಮನುಕುಲದ ಉನ್ನತಿಗೆ ಸನ್ಮಾರ್ಗದ ಉಪದೇಶ ನೀಡಿದ್ದಾರೆ ಎಂದು ಹೇಮ ವೇಮ ಕಂಪ್ಲಿ ಫಿರ್ಕಾ ರೆಡ್ಡಿ ಜನ ಸಂಘದ ಅಧ್ಯಕ್ಷ ಇಟಗಿ ಬಸಲಿಂಗನಗೌಡ ಹೇಳಿದರು.
ಪಟ್ಟಣದ ಬಳ್ಳಾರಿ ರಸ್ತೆಯ ಇಂಡಿಯನ್ ಪೆಟ್ರೋಲ್ ಬಂಕ್ ಬಳಿಯಲ್ಲಿರುವ ಹೇಮ ವೇಮ ಫಿರ್ಕಾ ರೆಡ್ಡಿ ಜನ ಸಂಘದ ಕಛೇರಿಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ವೇಮನ ಜಯಂತ್ಯೋತ್ಸವ ಕಾರ್ಯಕ್ರಮ ನೆರವೇರಿಸಿದ ನಂತರ ಮಾತನಾಡಿ, ಸಾಮಾನ್ಯ ವ್ಯಕ್ತಿ ತನ್ನ ಬದುಕಿನ ಸಾಧನೆ, ಪರಿಶ್ರಮಗಳಿಂದ ಮಾತ್ರ ಮಹಾಯೋಗಿಯಾಗಲು ಸಾಧ್ಯ. ಅಂತಹ ಸಾಧಕರಲ್ಲಿ ವೇಮನು ಸಹ ಒಬ್ಬರು ಆಗಿದ್ದಾರೆ. ಮಹಾಯೋಗಿ ವೇಮನರು ಲೋಕ ಶಾಂತಿಯನ್ನು ಸಾರಿದ ಮಹಾತ್ಮರು. ಅವರ ಜೀವನದ ಮೂಲಕ ಮನುಕುಲಕ್ಕೆ ಮಹತ್ತರ ಸಂದೇಶವನ್ನು ನೀಡಿದರು ಎಂದರು.
ಈ ಸಂದರ್ಭದಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಪಿ.ವೆಂಕಟರೆಡ್ಡಿ, ಮುಖಂಡರಾದ ಟಿ.ವಿ.ಸುದರ್ಶನರೆಡ್ಡಿ, ವೀರನರೆಡ್ಡಿ, ಭಾಸ್ಕರ್ ರೆಡ್ಡಿ, ವೈ.ಶರಣಗೌಡ, ಕೇಶವರೆಡ್ಡಿ, ಡಾ.ಪಿ.ಅಶೋಕ್ ಹಾಂದ್ರಾಳ್, ವೆಂಕಟೇಶ, ರಾಜಶೇಖರ, ಪ್ರಭಾಕರ, ಮಾಧವ, ಕೃಷ್ಣ ರೆಡ್ಡಿ, ದುರ್ಗಾ ಪ್ರಸಾದ್, ಸಂದೀಪ, ಸುಧಾಕರ, ಮಂಜುನಾಥ, ಲಕ್ಷ್ಮಿರೆಡ್ಡಿ ಸೇರಿದಂತೆ ಇತರರು ಇದ್ದರು.

ತಹಶೀಲ್ದಾರ್ ಕಛೇರಿ:
ಇಲ್ಲಿನ ತಹಶೀಲ್ದಾರ್ ಕಛೇರಿಯ ಸಭಾಂಗಣದಲ್ಲಿ ವೇಮನ ಜಯಂತಿ ಸಂಭ್ರಮ ಸಡಗರದಿಂದ ಆಚರಿಸಿದರು.
ತಹಶೀಲ್ದಾರ್ ಜೂಗಲ್ ಮಂಜುನಾಯಕ ಮಾತನಾಡಿ, ವೇಮನರು ಜಾತಿ, ಧರ್ಮಗಳನ್ನು ಮೀರಿ ಲೋಕ ಶಾಂತಿ ಸಾರಿದರು. ಆದರ್ಶದ ಜೀವನವನ್ನು ನಡೆಸಿ ಸಮಾಜಕ್ಕೆ ಅನುಕರಣೀಯ ತತ್ವಗಳನ್ನು ತಮ್ಮ ವಚನಗಳ ಮೂಲಕ ಬೋಧಿಸಿದರು. ಅವರ ಜೀವನದ ಆದರ್ಶಗಳನ್ನು ಸಮಾಜಕ್ಕೆ ಹಾಗೂ ಮುಂದಿನ ಪೀಳಿಗೆಗೆ ತಿಳಿಸುವ ಉದ್ದೇಶದಿಂದ ಸರ್ಕಾರ ಮಹನೀಯರ ಜಯಂತಿಗಳನ್ನು ಆಚರಿಸುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಪುರಸಭೆ ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷ ಟಿ.ವಿ.ಸುದರ್ಶನರೆಡ್ಡಿ, ಹೇಮ ವೇಮ ಕಂಪ್ಲಿ ಫಿರ್ಕಾ ರೆಡ್ಡಿ ಜನ ಸಂಘದ ಅಧ್ಯಕ್ಷ ಇಟಗಿ ಬಸಲಿಂಗನಗೌಡ, ಪ್ರಧಾನ ಕಾರ್ಯದರ್ಶಿ ವೆಂಕಟರೆಡ್ಡಿ, ವಿವಿಧ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಹಾಗು ರೆಡ್ಡಿ ಸಮಾಜದವರು ಭಾಗವಹಿಸಿದ್ದರು.

ವರದಿ : ಜಿಲಾನಸಾಬ್ ಬಡಿಗೇರ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!