ಶಿವಮೊಗ್ಗ: ನಗರದ ಸಾಗರ ರಸ್ತೆಯ ವೀರೇಶ್ವರ ಪುಣ್ಯಾಶ್ರಮ ಸಂಸ್ಕೃತ ಪಾಠ ಶಾಲೆಯಲ್ಲಿ ಗಾನಲಹರಿ ೧೧೬ನೇ ಅಮಾವಾಸ್ಯೆಯ ಸಂಗೀತ ಸಂಜೆ ಕಾರ್ಯಕ್ರಮ ಆಯೋಜಿಸಲಾಗಿತ್ತು.
ರಾಜ್ಯ ಪ್ರಶಸ್ತಿ ಪುರಸ್ಕತ ಆರ್.ಬಿ. ಸಂಗಮೇಶ್ವರ ಗವಾಯಿಗಳು ಅಧ್ಯಕ್ಷತೆ ವಹಿಸಿದ್ದರು. ಹೊಸಮನೆ ಬಡಾವಣೆಯ ಶ್ರೀಮುದ್ದು ಗಣಪ ಭಜನಾ ಮಂಡಳಿಯಿಂದ ಭಜನಾ ಸೇವೆ ನಡೆಯಿತು.
ಆಶ್ರಮದ ಮಕ್ಕಳು ಪ್ರಾರ್ಥಿಸಿದರು. ಹುಬ್ಬಳ್ಳಿ ಹಿಂದೂಸ್ಥಾನಿ ಗಾಯಕ ಮಂಜುನಾಥ ಬಿ. ದೊಡ್ಡ ಮನಿ ಅವರು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ರಾಜ್ಯ ಪ್ರಶಸ್ತಿ ಪುರಸ್ಕತ ರಾಮಣ್ಣ ಭಜಂತ್ರಿ, ವೀರಭದ್ರಶಾಸ್ತ್ರಿ ವೇದ ಘೋಷ, ವಿನಾಯಕ ಭಟ್ ತಬಲ, ಸಿದ್ದಣ್ಣ ಬಡಿಗೇರ್ ಹಾರ್ಮೋನಿಯಂ ಜೊತೆ ಸಾಥ್ ನೀಡಿದರು.
ರೇವಣ ಸಿದ್ದಯ್ಯ ಹಿರೇಮಠ ಅವರು ನಿರೂಪಿಸಿದರು.
ವರದಿ ಕೊಡಕ್ಕಲ್ ಶಿವಪ್ರಸಾದ್




















