ಬಳ್ಳಾರಿ / ಕಂಪ್ಲಿ : ತಾಲ್ಲೂಕಿನ ದೇವಸಮುದ್ರ ಗ್ರಾಮ ಪಂಚಾಯತಿ ವ್ಯಾಪ್ತಿಯ ಹೊರವಲಯದಲ್ಲಿ ಪಟ್ಟಣದ ಶ್ರೀ ಕಲ್ಯಾಣಚೌಕಿ ಮಠದವರು ನಿರ್ಮಿಸಿರುವ ಶ್ರೀಕಲ್ಯಾಣ ಚೌಕಿಮಠ ಕಾಮಧೇನು ಗೋಶಾಲೆ, ಕಲ್ಯಾಣ ಕೃಷಿ ಆಶ್ರಮ ಮತ್ತು ಗುರುಕುಲ ಶಿಕ್ಷಣ ಲೋಕಾರ್ಪಣೆ ಫೆ.23ರಂದು ನಡೆಯಲಿದ್ದು, ಫೆ.21ರಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾಗಲಿವೆ.
ಫೆ.21ರಂದು ಬೆಳಿಗ್ಗೆ ಗೋಶಾಲೆ ಆವರಣದಲ್ಲಿ ನಿರ್ಮಿಸಿರುವ ಬೃಹತ್ ವೇದಿಕೆಯಲ್ಲಿ ಸುಮಾರು 100 ಕ್ಕೂ ಅಧಿಕ ದಂಪತಿಗಳಿಂದ ಇಷ್ಟಾರ್ಥ ಸಿದ್ಧಿಯಾಗ ಮತ್ತು ಮಧ್ಯಾಹ್ನ 12 ಗಂಟೆಗೆ ಧಾರ್ಮಿಕ ಸಭೆ ನಡೆಯಲಿದ್ದು, ವಿವಿಧ ಹರಗುರು ಚರಮೂರ್ತಿಗಳು ಭಾಗವಹಿಸಲಿದ್ದಾರೆ.
ಫೆ.22 ರಂದು ಸಾಲುಮರದ ತಿಮ್ಮಕ್ಕ ವೇದಿಕೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ಪ್ರಗತಿಪರ ಸಾವಯವ ಕೃಷಿಕರಿಂದ ಸಾವಯವ ಕೃಷಿ ಮತ್ತು ರೈತರಿಗಾಗಿ ವಿಚಾರ ಗೋಷ್ಟಿ ನಡೆಯಲಿದೆ. ಗೋಮಾತೆಯ ವೈಭವ ಮತ್ತು ಸೊಮೇಶ್ವರ ಶತಕ-ಗಮಕ ಕಾರ್ಯಕ್ರಮ ನಡೆಯಲಿದ್ದು, ಗ.ಕ ಪರಿಷತ್ತಿನ ಅಧ್ಯಕ್ಷರಾದ ಪಲ್ಲವಿ ಆರ್ ಭಟ್ ವಾಚನ ಮಾಡಲಿದ್ದು, ವಿದ್ಯಾಶ್ರೀ ಸಿದ್ಧೇಶ್ ವ್ಯಾಖ್ಯಾನಿಸಲಿದ್ದಾರೆ. ಗಂಗಾವತಿಯ ಎಸ್.ಜೆ.ಸದಾನಂದ ಶೇಟ್ ಅವರಿಂದ ಸಂಗೀತ ಕಾರ್ಯಕ್ರಮ ನಡೆಯಲಿದ್ದು, ಕುಮಾರಿ ಕಾವ್ಯ, ಸಾವಿತ್ರಿ ಹಿರೇಮಠ ಸಾಥ್ ನೀಡಲಿದ್ದಾರೆ.
ಫೆ.23ರಂದು ಬೆಳಿಗ್ಗೆ ಶ್ರೀಕಾಮಧೇನು ಗೋಶಾಲೆಯನ್ನು ಮಹಾರಾಷ್ಟ್ರದ ಕನ್ನೇರಿ ಮಠದ ಸಾವಯವ ಕೃಷಿ ಋಷಿ ಅದೃಶ್ಯ ಕಾಡಸಿದ್ಧೇಶ್ವರ ಮಹಾಸ್ವಾಮಿಗಳು ಲೋಕಾರ್ಪಣೆಗೊಳಿಸಲಿದ್ದಾರೆ
ಕಂಪ್ಲಿಯ ಶ್ರೀಕಲ್ಯಾಣಚೌಕಿಮಠದ ಕೆ.ಎಂ.ಬಸವರಾಜ ಶಾಸ್ತ್ರಿಗಳ ಸಾಧನೆಯ ಹಾದಿ ಕುರಿತ ಎಸ್.ವಿ.ಪಾಟೀಲ್ ಗುಂಡೂರು ರಚಿಸಿರುವ ಸ್ಮಾರಕ ಹೆಜ್ಜೆಗಳು ಗ್ರಂಥ ಲೋಕಾರ್ಪಣೆ ನಡೆಯಲಿದೆ.
ಮೂರು ದಿನಗಳ ವಿವಿಧ ಧಾರ್ಮಿಕ ಕಾರ್ಯಕ್ರಮಗಳಲ್ಲಿ ನಾಡಿನ ವಿವಿಧ ಮೂಲೆಯ ಹರಗರು ಚರಮೂರ್ತಿಗಳು, ಸಚಿವರು, ಶಾಸಕರು, ಸಂಸದರು ಹಾಲಿ ಮಾಜಿ ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ.
ವರದಿ : ಜಿಲಾನಸಾಬ್ ಬಡಿಗೇರ್




















