
ಬಳ್ಳಾರಿ : ಬಳ್ಳಾರಿಯ ಶ್ರೀ ಸತ್ಯ ಸಾಯಿ ಮಂದಿರದಲ್ಲಿ ಶ್ರೀ ವಿಶ್ವಬಂಧು ನಾಗೇಶ್ ಗುರುಜಿಯವರ ಮಾರ್ಗದರ್ಶನದಲ್ಲಿ ಸ್ವಾಮಿ ವಿವೇಕಾನಂದ ಅಂತರಾಷ್ಟ್ರೀಯ ಯೋಗ ಅಕಾಡೆಮಿ ವತಿಯಿಂದ ಜೂರಿ ಪರೀಕ್ಷೆ ನಡೆಯಿತು.
ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳ ಆಯುಷ್ ಇಲಾಖೆ ಮುಖ್ಯಸ್ಥರಾದ ಡಾ. ಪಣೀಂಧರ್ ಉದ್ಘಾಟಿಸಿದರು.
ಈ ಪರೀಕ್ಷೆಯಲ್ಲಿ 12 ಮಂದಿ ಶಿಕ್ಷಕರು ತೀರ್ಪುಗಾರರಾಗಿ ಆಯ್ಕೆಯಾದರು. ಬಳ್ಳಾರಿ ಜಿಲ್ಲೆಯ ಜಿಲ್ಲಾ ಪತಂಜಲಿ ಯೋಗಸಮಿತಿ ಸದಸ್ಯರಾದ ಇಸ್ವಿ ಪಂಪಾಪತಿ ಹಾಗೂ ಡಾ. ಎಪಿಜೆ ಅಬ್ದುಲ್ ಕಲಾಂ ವಸತಿ ಶಾಲೆಯ ದೈಹಿಕ ಶಿಕ್ಷಕರಾದ ರಂಗಪ್ಪ, ಸೇರಿ 12 ಮಂದಿ ಶಿಕ್ಷಕರು ಯೋಗಾಸನ ಸ್ಪರ್ಧೆಗಳ ತೀರ್ಪುಗಾರರಾಗಿ ಆಯ್ಕೆಯಾಗಿದ್ದು, ರಾಜ್ಯದ ಯಾವುದೇ ಯೋಗಾಸನ ಸ್ಪರ್ಧೆಗಳಲ್ಲಿ ತೀರ್ಪುಗಾರರಾಗಿ ಕಾರ್ಯ ನಿರ್ವಹಿಸಲು ಅರ್ಹತೆ ಪಡೆದಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿಶ್ವ ಬಂಧು ನಾಗೇಶ್ ಗುರೂಜಿ ಮಾತನಾಡಿ ಇಂದಿನ ದಿನಗಳಲ್ಲಿ ಮನೆಯಲ್ಲಿ ದೊಡ್ಡವರು ಮಾತ್ರವಲ್ಲದೆ ಮಕ್ಕಳೂ ಕೂಡ ಮೊಬೈಲ್ ಟ್ಯಾಬ್ಲೆಟ್ ನಂತಹ ದೊಡ್ಡ ಸ್ಕ್ರೀನ್ ಗಳ ಎದುರು ಬ್ಯೂಸಿ ಆಗುತ್ತಿರುವುದು ತುಂಬಾನೇ ವಿಷಾದದ ಸಂಗತಿಯಾಗಿದ್ದು ಇದರ ಬದಲಾವಣೆಗಾಗಿ ಯೋಗಾ ಶಿಬಿರಗಳನ್ನು ಹಮ್ಮಿಕೊಳ್ಳಬೇಕು, ಶಿಬಿರಗಳ ತರಗತಿಗಳನ್ನು ನಡೆಸಿರುವ ಅನುಭವ ಮತ್ತು ಯೋಗ ಸೂತ್ರಗಳ ಬಗ್ಗೆ ಆಳವಾದ ಜ್ಞಾನವನ್ನು ಹೊಂದಿದ ಪರಿಣಿತಿ ತಂಡವಾಗಿದ್ದು, ಯಾವುದೇ ಪಕ್ಷಪಾತವಿಲ್ಲದೆ ನಿಷ್ಪಕ್ಷಪಾತ ತೀರ್ಪು ನೀಡಿ ಯೋಗ ಕ್ಷೇತ್ರದಲ್ಲಿ ಗುಣಮಟ್ಟದ ತೀರ್ಪುಗಾರರ ಅಗತ್ಯತೆ ಬಗ್ಗೆ ತಿಳಿಸಿದರು. ಪರೀಕ್ಷೆಯಲ್ಲಿ ಉತ್ತೀರ್ಣರಾದ ಶಿಕ್ಷಕರಿಗೆ ಅಭಿನಂದಿಸಿ ಶುಭ ಹಾರೈಸಿದರು.
ಕಾರ್ಯಕ್ರಮದ ಆಯೋಜಕರಾಗಿ ಶ್ರೀ ಚಿದಂಬರಾವ್ (ಪತಂಜಲಿ ಯೋಗ ಸಮಿತಿ ಸಂಚಾಲಕರು, ರಾಜ್ಯ ಜೂರಿ ಸದಸ್ಯರು ಹಾಗೂ ರೆಫ್ರಿ) ಮತ್ತು ಎ. ರಾಘವೇಂದ್ರ (ಎಸ್ಆರ್ಕೆ ಯೋಗ ಕೇಂದ್ರ ಕುರೇಕುಪ್ಪ ಕಾರ್ಯಾಧ್ಯಕ್ಷರು, ಗ್ಲೋಬಲ್ ಯೋಗ ಸಮಿತಿಯ ರಾಜ್ಯ ಸಂಯೋಜಕರು, ರಾಜ್ಯ ಜೂರಿ ಸದಸ್ಯರು ಹಾಗೂ ರೆಫ್ರಿ) ಕಾರ್ಯ ನಿರ್ವಹಿಸಿದರು.
ಮುಖ್ಯ ಅತಿಥಿಗಳಾಗಿ ಪಂಪಾಪತಿ ಮತ್ತು ಪ್ರಕಾಶ್ (ರಾಜ್ಯ ಸಮಿತಿ ಸದಸ್ಯರು, ಪತಂಜಲಿ ಯೋಗ ಸಮಿತಿ ಬಳ್ಳಾರಿ), ಹತ್ತಿಕಾಳು ವಿರುಪಾಕ್ಷಪ್ಪ (ಗೌರವ ಅಧ್ಯಕ್ಷರು, ಜಿಲ್ಲಾ ಪತಂಜಲಿ ಯೋಗ ಸಮಿತಿ), ಅಶೋಕ್ ದಿನ್ನಿ (ಅಧ್ಯಕ್ಷರು, ಭಾರತ ಸ್ವಾಭಿಮಾನ ಟ್ರಸ್ಟ್), ಶ್ರೀ ವಸ್ತ್ರದ್ (ಗೌರವ ಅಧ್ಯಕ್ಷರು, ಗ್ಲೋಬಲ್ ಯೋಗ ಸಮಿತಿ ಬಳ್ಳಾರಿ) ಹಾಗೂ ಶ್ರೀ ರಮೇಶ್ ಕೆ (ಅಧ್ಯಕ್ಷರು, ಗ್ಲೋಬಲ್ ಯೋಗ ಸಮಿತಿ ಬಳ್ಳಾರಿ) ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಂಗವಾಗಿ ಯೋಗ ಸ್ಪರ್ಧೆಯೂ ನಡೆಯಿತು.
ಕಾರ್ಯಕ್ರಮದ ಪ್ರಯುಕ್ತ ಯೋಗ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು ಈ ಸ್ಪರ್ಧೆಯಲ್ಲಿ
ಭಾರತ ಯೋಗ ಮಯೂರ ಅವಾರ್ಡ್ ಪಡೆದವರು
ಸಿ. ಕೆ ಪ್ರಕಾಶ್ (ಬಳ್ಳಾರಿ ಜಿಲ್ಲಾ ಯೋಗ ಪತಂಜಲಿಯ ಉಪಾಧ್ಯಕ್ಷರು) ಶ್ರೀಮತಿ ರಾಜಶ್ರೀ, ರಾಜೇಂದ್ರ ರೆಡ್ಡಿ ಭಾಗವಹಿಸಿದ್ದರು.
ಎಸ್ಆರ್ಕೆ ಯೋಗ ತಂಡ ಹಾಗೂ ಹರಗಿನದೋಣಿ ಯೋಗ ತಂಡದ ಮಕ್ಕಳಿಂದ ನಡೆದ ಯೋಗ ಪ್ರದರ್ಶನ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.
ವರದಿ : ಜಿಲಾನಸಾಬ್ ಬಡಿಗೇರ್



















