ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ದುರ್ಗಮ್ಮ ದೇವಿಯ ಸಿಡಿಬಂಡಿ ರಥೋತ್ಸವಕ್ಕೆ ಸಿರುಗುಪ್ಪದಿಂದ ಜೊತೆ ಎತ್ತುಗಳ ಮೆರವಣಿಗೆ

ಬಳ್ಳಾರಿ : ಬಳ್ಳಾರಿಯ ಅಧಿದೇವತೆ ದುರ್ಗಮ್ಮ ದೇವಿಯ ಸಿಡಿಬಂಡಿ ರಥೋತ್ಸವಕ್ಕೆ ಸಿರುಗುಪ್ಪದ ಗಾಣಿಗರ ಸಮಾಜದಿಂದ ಕಳುಹಿಸಲಾಗುವ ಒಂದು ಜೊತೆ ಎತ್ತುಗಳ ಮೆರವಣಿಗೆಯನ್ನು ಪಟ್ಟಣದಲ್ಲಿ ನಡೆಸಲಾಯಿತು.

ಸಿಡಿಬಂಡಿಗೆ ಮೂರು ಜೋಡಿ ಎತ್ತುಗಳನ್ನು ಹೂಡಲಾಗುತ್ತದೆ. ಇದರಲ್ಲಿ ಎರಡು ಜೊತೆ ಬಳ್ಳಾರಿಯ ಗಾಣಿಗರ ಸಮುದಾಯದ್ದಾದರೆ, ಒಂದು ಜೊತೆ ಸಿರುಗುಪ್ಪ ಗಾಣಿಗರ ಸಮಾಜದ್ದಾಗಿರುತ್ತದೆ. ಇದು ಹಿಂದಿನಿಂದಲೂ ನಡೆದು ಬಂದಿರುವ ಪರಂಪರೆ.

ಸಿಡಿಬಂಡಿಗೆ ಒಂದು ತಿಂಗಳಿಗೆ ಮೊದಲೇ ಸಿರುಗುಪ್ಪದ ಗಾಣಿಗ ಸುಮುದಾಯದವರು ಬಾಗಲಕೋಟೆಯಿಂದ ಉತ್ತಮ, ಆರೋಗ್ಯಂಥ ಕಿಲಾರಿ ಎತ್ತುಗಳನ್ನು ತರುತ್ತಾರೆ. ಸಿಡಿಬಂಡಿ ಎಳೆಯಲು ಬೇಕಾದ ಎತ್ತರದ ನಿಲುವಿನೊಂದಿಗೆ ಆಕರ್ಷಕವಾಗಿ ಕಾಣುವ ಜೋಡಿ ಎತ್ತುಗಳನ್ನು ಈಗಾಗಲೇ ₹1.50 ಲಕ್ಷ ನೀಡಿ ಖರೀದಿಸಲಾಗಿದೆ. ಅವುಗಳಿಗೆ ತಾಲೀಮು ನೀಡಲಾಗಿದೆ.

ಸಿಡಿಬಂಡಿ ಒಂದು ದಿನ ಮುಂಚಿತವಾಗಿ ಜೋಡಿ ಎತ್ತುಗಳನ್ನು ಸಿಂಗರಿಸಿ, ನಗರದ ಕನ್ನಿಕಾ ಪರಮೇಶ್ವರಿ ದೇವಸ್ಥಾನದ ಆರಾಧ್ಯಕರ ಮನೆಗಳಲ್ಲಿ ಪೂಜೆ ಮಾಡಿಸಿ, ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಗುತ್ತದೆ. ನಂತರ ಬಳ್ಳಾರಿಗೆ ಲಾರಿ ಮೂಲಕ ಕಳುಹಿಸಲಾಯಿತು.

ವರದಿ : ಜಿಲಾನಸಾಬ್ ಬಡಿಗೇರ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!