
ಬೀದರ /ಬಸವಕಲ್ಯಾಣ: ಶ್ರೀ ಘನಲಿಂಗ ರುದ್ರಮುನಿ ಶಿವಾಚಾರ್ಯ ಗವಿಮಠದ ವತಿಯಿಂದ ಪ್ರತಿಷ್ಠಿತ ೨೦೨೬ರ ಅಭಿನವ ರೇಣುಕಾ ಶ್ರೀ ಪ್ರಶಸ್ತಿಗೆ ನಾಲ್ಕು ಜನ ಗಣ್ಯರನ್ನು ಆಯ್ಕೆ ಮಾಡಲಾಗಿದೆ.
ಪ್ರಶಸ್ತಿ ಪುರಸ್ಕೃತರು :
ನಿವೃತ್ತ ಉಪನ್ಯಾಸಕರು ಶ್ರೀ ಮಲ್ಲಿಕಾರ್ಜುನ ಧೂಳಯ್ಯಾ ಕಾಡಾದಿ ಮಠ ಬಸವಕಲ್ಯಾಣ ,
ಗ್ಯಾರಂಟಿ ನ್ಯೂಸ್ ಜಿಲ್ಲಾ ವರದಿಗಾರರು ಶ್ರೀ ಶಿವಯ್ಯ ಕರಬಸಯ್ಯ ಮಠಪತಿ ನಾರಾಯಣಪುರ ,
ಶ್ರೀ ಬಸವರಾಜ ಹನುಮಶೆಟ್ಟಿ ಮಾಲಿ ಪಾಟೀಲ ತ್ರಿಪೂರಾಂತ- ಬಸವಕಲ್ಯಾಣ ,
ಶ್ರೀ ಸದಾನಂದ ವೀರಯ್ಯಸ್ವಾಮಿ ಕಣಜೆ ಬಸವಕಲ್ಯಾಣ ,
ಈ ವಿಷಯವನ್ನು ಗವಿಮಠದ ಪೀಠಾಧಿಪತಿಗಳಾದ ಪೂಜ್ಯ ಡಾ. ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು ತಿಳಿಸಿದ್ದಾರೆ.
ದಿನಾಂಕ: ಮಾರ್ಚ್ ೧, ೨೦೨೬ ರಂದು
ಸಮಯ: ಸಂಜೆ ೪:೦೦ ಗಂಟೆಗೆ
ಸ್ಥಳ: ಗವಿಮಠದಲ್ಲಿ ಈ ಪ್ರಶಸ್ತಿ ಪ್ರಧಾನ ಸಮಾರಂಭವು ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಅಂಗವಾಗಿ ಜರುಗಲಿದೆ.
ಸಕಲ ಸದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶ್ರೀ ಜಗದ್ಗುರು ರೇಣುಕಾಚಾರ್ಯರ ಹಾಗೂ ಶ್ರೀ ಘನಲಿಂಗ ರುದ್ರಮುನಿ ಶಿವಯೋಗಿಗಳ ದರ್ಶನ ಪಡೆದು ಮಹಾಪ್ರಸಾದ ಸ್ವೀಕರಿಸಿ ಪುನೀತರಾಗಬೇಕೆಂದು ಗವಿಮಠ ಟ್ರಸ್ಟ್ ವತಿಯಿಂದ ಕೋರಲಾಗಿದೆ.
ವರದಿ: ಶ್ರೀನಿವಾಸ ಬಿರಾದಾರ



















