ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ವ್ಯಕ್ತಿಗಿಂತ ವ್ಯಕ್ತಿತ್ವಕ್ಕೆ ಬೆಲೆ ಕೊಡಿ : ಎಸ್‌ ಎನ್‌ ಸೇತುರಾಂ

ಬೆಂಗಳೂರು: ವ್ಯಕ್ತಿಗಿಂತಲೂ ನಾವು ನಿಜವಾಗಿಯೂ ಬೆಲೆ ಕೊಡಬೇಕಾದ್ದು ವ್ಯಕ್ತಿತ್ವಕ್ಕೆ, ಯಾರದೇ ಪರಿಚಯವಾಗಬೇಕಾದ್ದು ಅವರ ವ್ಯಕ್ತಿತ್ವ, ಸಾಧನೆಗಳಿಂದಲೇ ಹೊರತು ಅವರ ಕೌಟುಂಬಿಕ ಹಿನ್ನೆಲೆಯಿಂದ ಅಲ್ಲ, ಹೀಗೆಂದು ನುಡಿದವರು ಪ್ರಖ್ಯಾತ ವಾಗ್ಮಿ ಎಸ್‌ ಎನ್‌ ಸೇತುರಾಂ. ಅವರು ಮಾತಿನ ಮನೆಯ 124ನೆಯ ಕಾರ್ಯಕ್ರಮದಲ್ಲಿ ವ್ಯಕ್ತಿ-ವ್ಯಕ್ತಿತ್ವ ಕುರಿತಾಗಿ ತಮ್ಮ ಸುದೀರ್ಘ ವಿಚಾರಧಾರೆ ಹರಿಸಿ, ತಮ್ಮ ಮಾತಿನ ಮೋಡಿಯಿಂದ ನೆರೆದವರನ್ನು ಆಕರ್ಷಿಸಿದರು.
ಆರಂಭದಲ್ಲಿ ಸ್ವಾಗತ ಮತ್ತು ಪ್ರಾಸ್ತಾವಿಕ ನುಡಿಗಳನ್ನಾಡಿದ ಮಾತಿನಮನೆಯ ರಾ ಸು ವೆಂಕಟೇಶ ಅವರು ಸೇತುರಾಂ ಅವರು ನಟರಾಗಿ, ನಿರ್ದೇಶಕರಾಗಿ, ಬರಹಗಾರರಾಗಿ ಮತ್ತು ವಾಗ್ಮಿಗಳಾಗಿ ನಾಡಿನಾದ್ಯಂತ ತಮ್ಮ ನೇರ ಮತ್ತು ನಿಷ್ಟುರ ಮಾತುಗಳಿಗೆ ಹೆಸರಾದವರೆಂದು ತಿಳಿಸಿ, ಬರುವ ಮಾರ್ಚ್‌ 8 ರಂದು ಮಾತಿನಮನೆಗೆ ಆರು ವರ್ಷಗಳು ತುಂಬಲಿದೆಯೆಂದೂ ಹಾಗೂ ಅಂದೇ 125ನೆಯ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ಆಚರಿಲಾಗುವುದೆಂದೂ ತಿಳಿಸಿದರು.
ಕಾರ್ಯಕ್ರಮದ ಕೊನೆಯಲ್ಲಿ ಮಾತಿನಮನೆಯ ಪರವಾಗಿ ಶ್ರೀ ಸೇತುರಾಂ ಅವರನ್ನು ಗೌರವಿಸಲಾಯಿತು.
ನಾಡಗೀತೆಯೊಂದಿಗೆ ಆರಂಭವಾದ ಕಾರ್ಯಕ್ರಮದ ನಿರೂಪಣೆಯನ್ನು ಶ್ರೀಮತಿ ರಾಧಾ ಕೇಶವ್‌ ನಿರ್ವಹಿಸಿದರು.

ವರದಿ: ಕೊಡಕ್ಕಲ್ ಶಿವಪ್ರಸಾದ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!