ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಹೊಸ ಚಲನಚಿತ್ರ “ ಬಿ ಜಿ ಎಮ್ ” ಗೆ ಮುಹೂರ್ತ

ಬೆಂಗಳೂರು : ಶ್ರೀ ಚಕ್ರ ಫಿಲಂಸ್ ಲಾಂಛನದಲ್ಲಿ ತಯಾರಾಗುತ್ತಿರುವ “ಬಿ ಜಿ ಎಮ್” ನೂತನ ಕನ್ನಡ ಚಲನಚಿತ್ರದ ಮುಹೂರ್ತ ಸಮಾರಂಭವು ಬೆಂಗಳೂರಿನ ಶ್ರೀ ಬಂಡೆ ಮಹಾಂಕಾಳಿ ದೇವಸ್ಥಾನದಲ್ಲಿ ನೆರವೇರಿತು.
ಹೊಸ ಕಲಾವಿದರಾದ ದಿನಿ, ಪೂಜಾ, ಮಲ್ಲಿಕಾರ್ಜುನ ಅವರು ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿದ್ದು, ಇನ್ನುಳಿದಂತೆ ವಿಜಯ್ ಚಂಡೂರ್, ರಘು ರಾಮನಕೊಪ್ಪ, ಶಶಿ ಹಾಸನ್, ಪಿಳ್ಳಪ್ಪ, ವೇದಾ ಹಾಸನ್, ಲಕ್ಷಿತಾ ಗಂಗಾವತಿ, ತೇಜಸ್ ಚಿತ್ರದ ಪ್ರಮುಖ ಪಾತ್ರದಲ್ಲಿದ್ದಾರಲ್ಲದೆ ಹೊಸ ಕಲಾವಿದರ ಜೊತೆ ಹಿರಿಯ ಕಲಾವಿದರೂ ಈ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
“ಬಿ ಜಿ ಎಮ್’ ಚಿತ್ರವು ತ್ರಿಕೋನ ಪ್ರೇಮ ಕಥೆಯಾಗಿದ್ದು ರಾಮಾಯಣದ ರಾಮ, ಸೀತೆ, ರಾವಣನ ಮನಸ್ಥಿತಿಗಳನ್ನು ಇಟ್ಟುಕೊಂಡು ಮದುವೆಯ ಪ್ರಾಮುಖ್ಯತೆ ಏನು ಅನ್ನುವುದರ ಕುರಿತು ವಿಭಿನ್ನವಾದ ಕಥೆ ಹೆಣೆದು ಚಿತ್ರ ನಿರ್ದೇಶನ ಮಾಡುತ್ತಿದ್ದಾರೆ ಬಳ್ಳಾರಿ ಮೂಲದ ರಮೇಶ್ ಭೀಮರಾಯಪ್ಪ ಅವರು.
ಇವರಿಗೆ ಉತ್ತಮ ತಾಂತ್ರಿಕ ವರ್ಗ ದೊರಕಿದ್ದು, ಚಿತ್ರ ಸಾಹಿತಿ ಕಿನ್ನಾಳ್ ರಾಜ್ ಅವರು ಚಿತ್ರಕಥೆ-ಸಂಭಾಷಣೆ-ಸಾಹಿತ್ಯ ಬರೆದಿದ್ದಾರೆ.
ಸಂಗೀತ ನಿರ್ದೇಶನ ಆಕಾಶ್ ಪರ್ವ, ಛಾಯಾಗ್ರಹಣ ಸುವೀಶ್, ಸಂಕಲನ ವೆಂಕಿ, ಯುಡಿವಿ.ಡಿಐ ಕಿಶೋರ್ ಅಕ್ಕನ್ನ, ಸಿಜಿ ಗುರು ಬೆಳ್ತಂಗಡಿ, ವಿಎಫ್ ಎಕ್ಸ್ ನಂದು ಜೆ, ಪತ್ರಿಕಾ ಸಂಪರ್ಕ ಆರ್.ಚಂದ್ರಶೇಖರ್, ಡಾ.ಪ್ರಭು ಗಂಜಿಹಾಳ, ಡಾ.ವಿರೇಶ್ ಹಂಡಿಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಚಿತ್ರದ ಚಿತ್ರೀಕರಣವು ಏಪ್ರಿಲ್ ಮೊದಲ ವಾರದಿಂದ ಕಲ್ಯಾಣ ಕರ್ನಾಟಕದ ಹಲವೆಡೆ ಬಳ್ಳಾರಿ ಸುತ್ತಮುತ್ತ ಹಾಗೂ ಬೆಂಗಳೂರಿನಲ್ಲಿ ನಡೆಯಲಿದೆ.

  • ಕರುನಾಡ ಕಂದ ಪತ್ರಿಕೆ.
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!