ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಶಾಂತಿ ಸಭೆ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಬರದಂತೆ ಶಾಂತಿ ಸೌಹಾರ್ದದಿಂದ ರಂಜಾನ್ ಯುಗಾದಿ ಆಚರಿಸಿ : ಡಿ ವೈ ಎಸ್ ಪಿ ಮಾಲತೇಶ್ ಕೋನ ಬೇವು

ಸಿರುಗುಪ್ಪ – ಧಾರ್ಮಿಕ ಭಾವನೆಗಳಿಗೆ ಧಕ್ಕೆ ಬರದಂತೆ ಎಚ್ಚರಿಕೆಯಿಂದ ರಂಜಾನ್ ಮತ್ತು ಯುಗಾದಿ ಶಾಂತಿ ಸೌಹಾರ್ದದಿಂದ ಆಚರಿಸಬೇಕು ಎಂದು ಡಿವೈಎಸ್ ಪಿ ಮಾಲತೇಶ್ ಕೋನ ಬೇವು ಅವರು ಹೇಳಿದರು. ಒಂದೇ ಸಮಯದಲ್ಲಿ ರಂಜಾನ್ ಮತ್ತು ಯುಗಾದಿ ಹಬ್ಬ ಬಂದಿರುವುದರಿಂದ ಸಿರುಗುಪ್ಪ ನಗರದ ಪೊಲೀಸ್ ಠಾಣೆಯಲ್ಲಿ ರಂಜಾನ್ ಮತ್ತು ಯುಗಾದಿ ಹಬ್ಬಗಳ ಹಿನ್ನೆಲೆ ನಡೆದ ಶಾಂತಿ ಸಭೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಾ ಹಿಂದೂ ಮುಸ್ಲಿಂ ಸಮುದಾಯದವರಿಗೆ ಪವಿತ್ರವಾದ ರಂಜಾನ್ ಮತ್ತು ಯುಗಾದಿ ಎರಡು ಹಬ್ಬಗಳನ್ನು ಪ್ರತಿಯೊಬ್ಬರೂ ಸಡಗರ ಸಂಭ್ರಮ ಶಾಂತಿ ಸೌಹಾರ್ದತೆಯಿಂದ ಭಾವೈಕ್ಯತೆಯಿಂದ ಆಚರಿಸೋಣ ಎಲ್ಲರಿಗೂ ಹಬ್ಬದ ಶುಭಾಶಯಗಳು ಕೋರಿದರು. ಯಾವುದೇ ಕಿಡಿಗೇಡಿಗಳಿಂದ ಹರಡುವ ವದಂತಿಗಳಿಗೆ ಕಿವಿ ಗೊಡಬೇಡಿರಿ ರಸ್ತೆ ಸಂಚಾರ ಉಲ್ಲಂಘಿಸದೆ ನಿಯಮಾನುಸಾರ ಪಾಲಿಸಿರಿ ಅಹಿತಕರ ಘಟನೆ ಕಂಡು ಬಂದರೆ ನಿರ್ದಾಕ್ಷಿಣ್ಯ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಶಾಂತಿ ಸುವ್ಯವಸ್ಥೆ ಕಾಪಾಡಲು ಪೊಲೀಸರಿಗೆ ಸಹಕರಿಸಬೇಕು ಎಂದು ಸೂಚಿಸಲಾಯಿತು. ಸಾಮರಸ್ಯದಿಂದ ರಂಜಾನ್ ಯುಗಾದಿ ಹಬ್ಬಗಳನ್ನು ಆಚರಿಸುವದು ಶಾಂತಿ ಸಭೆಯ ಮುಖ್ಯ ಉದ್ದೇಶವಾಗಿದೆ ಎಂದು ಕರೆ ನೀಡಿದರು. ರಾಷ್ಟ್ರೀಯ ಹಬ್ಬಗಳ ಆಚರಣೆ ಶಾಂತಿ ಸಭೆಯ ಸದಸ್ಯರು ಸಮಾಜ ಸುಧಾರಕ ಅಲ್ ಹಾಜ್ ಅಬ್ದುಲ್ ನಬಿ ಚಿಸ್ತಿ ನಿಜಾಮಿ, ಖತೀಬ್ ಜಹೀರುದ್ದೀನ್ ಬಾಬು, ಸೌದಾಗರ್ ಜುಮ್ಮ ಸುನ್ನಿ ಮಸ್ಜಿದ್ ನಿಕಟ ಪೂರ್ವ ಅಧ್ಯಕ್ಷರು ಹಾಜಿ ಹಂಡಿ ಹುಸೇನ್ ಬಾಷಾ, ಸಾಮಾಜಿಕ ಕಾರ್ಯಕರ್ತ ಡಾ. ಮಹಮ್ಮದ್ ಅಲಿ, ಮಹಮ್ಮದ್ ನೌಶಾದ್ ಅಲಿ, ಲತೀಫ್ ಭಾಯಿ ಮೊಹಮ್ಮದ್ ಆಜಮ್ ಲಾಡ್ ಖಾನ್ ಮಸೀದಿಯ ಅಧ್ಯಕ್ಷರು ಎಸ್ ಮೊಹಮ್ಮದ್ ಫಜಲ್ ಹಾಜಿ ಚೌದ್ರಿ ಖಾಜಾ ಸಾಬ್ ಮುಲ್ಲಾ ಕಲೀಮ್ ಮಕಾಂದಾರ್ ಮೆಹಬೂಬ್ ಬಾಷಾ ದೇಶನೂರು ಹಾಜಿ ಹೋಟೆಲ್ ಅಬ್ದುಲ್ ಗಫೂರ್ ಇಬ್ರಾಹಿಂಪುರ್ ಹಮೀದ್ ಸಾಬ್ ಇನಾಯತ್ ಮುಲ್ಲಾ ದಾದಾ ಖಲಂದರ್ ವಕೀಲ್ ಅಮೀರ್ ಬಾಷಾ ಬಿ ಹಬೀಬ್ ಸಾಬ್ ಮೋದಿನ್ ಡೊಳ್ಳಿ ವಲಿ ರಜಾ ಮಹಮ್ಮದ್ ಅಜೀಮ್ ಅಂಜಾಲ್ ಖಾಜಾ ದೇಶನೂರು ಖಾಜಾ ಅಹಮ್ಮದ್ ಶರೀಫ್ ಡಿ ಮೌಲಾಲಿ ವೈ ಎಂ ಖಾದರ್ ಸಮೀರ್ ಕೆ. ಬೆಳಗಲ್ ಖಾಜಾಸಾಬ್ ಸಿಪಿಐ ಹನುಮಂತಪ್ಪ ಅವರು ಪಿಎಸ್ಐ ಪರಶುರಾಮ್ ಅವರು ಸರ್ವರನ್ನು ಸ್ವಾಗತಿಸಿ ಮಾತನಾಡಿದರು. ಪಿಎಸ್ಐ ಮಲ್ಲಯ್ಯ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಿರಿಯರು ಯುವಕರು ಭಾಗವಹಿಸಿ ಸಲಹೆ ಸೂಚನೆ ನೀಡಿದರು.

ವರದಿ : ಮಸೀದಿ ಅಬ್ದುಲ್ ಗೌಸ್, ಸಿರುಗುಪ್ಪ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!