ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಮುಕ್ತಕ ಮಾಲೆ

ಹನಿಹನಿಯ ಚಿತ್ತಾರ ಭುವಿಯೊಡಲ ಸಾಕಾರ/
ಇನಿದನಿಯ ಕೇಳುತಲಿ ಖುಷಿಯದರ ಜನನ/
ಮನವಿಂದು ಕುಣಿದಿರಲು ಇಳೆತಂಪ ಪಸರಿರಲು/
ಗುನುಗುನುಗಿ ಹಾಡುನೀ – ಸಿರಿರಮಣಿಯೆ//

ಮಿಂಚುತಲಿ ಬಾನೆಲ್ಲ ಗುಡುಗಿನಲೆ ತೇಲುತಲಿ/
ಸಂಚನ್ನು ಹೂಡಿದ್ದ ಮಳೆರಾಯ ನಿನ್ನೆ/
ಸಿಂಚನದಿ ಭುವಿಯಲ್ಲಿ ಒಲವೆಂಬ ನವಭಾವ/
ವಂಚಿಸದೆ ತೋರಿಸಿಹ – ಸಿರಿರಮಣಿಯೆ//

ಬೆಳಗಾಗಿ ಬಾನಲ್ಲಿ ರವಿಯವನ ಕಿರಣವದು/
ಸೆಳೆಯುತಿದೆ ಗಾಳಿಯಲಿ ಹಕ್ಕಿಗಳ ಸಾಲು/
ಇಳೆನಿದಿರೆಯಿಂದೆದ್ದು ಸೊಬಗಿಂದ ನಸುನಗುತ/
ಕಳೆತುಂಬಿ ನಗುತಿಹಳು – ಸಿರಿರಮಣಿಯೆ//

ಹಸಿರೆಲ್ಲ ಹನಿಯಲ್ಲಿ ಮಿಂದೆದ್ದು ಹೊಳಪಾಗಿ/
ನಸುಕಿನಲಿ ಮುಗುಳುನಗೆ ಚೆಲ್ಲುತಿದೆ ನೋಡು/
ಮಿಸುಕಾಡಿ ನೀರಲ್ಲಿ ಮೀನಗಣ ಖುಷಿಯಿಂದ/
ರಸಭಾವ ಚಿಮ್ಮುತಿದೆ – ಸಿರಿರಮಣಿಯೆ//

✍🏻 ಅಶ್ವಿಜ ಶ್ರೀಧರ್, ಬೆಳ್ತಂಗಡಿ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!