ಕೊಳಲನೂದಿ ಕರೆದೆಯೇಕೆ ಶ್ಯಾಮನೇ.
ಮುರಳಿಯೂದಿ ಮೈಮರೆಸಿತೆ ಕಾಮನೆ.
ತನುಮನದಲಿ ತುಂಬಿಕೊಂಡೆಯೇಕೆ?
ಅಣುಅಣುವಲಿ ಬೆರೆತು ನಾನೀನಾದೆಯೇಕೆ?
ನಿನ್ನ ಈ ರಾಧೆಗೆ ನಿನದೆ ಸದಾ ಭ್ರಾಂತಿ.
ಹುಚ್ಚು ಮಾಡಿ ಮನಕೆ ಎಲ್ಲಿದೆ ಶಾಂತಿ
ಹೇ ಕೃಷ್ಣಾ ಎಲ್ಲಿರುವೆ ಮೋಹಿಸಿ ಪೀಡಿಸುವೆ.
ಹೇ ಕೇಶವಾ ಭಾವನೆಗಳ ಕೆರಳಿಸಿ ಕಾಡಿಸುವೆ.
ತಣ್ಣನೆ ರಾತ್ರಿಲಿ ಮೈನಡುಗವ ಚಳಿ
ಸಣ್ಣಗೆ ನರಳುತ ಓಡಿರಲು ಪ್ರೇಮದೋಕುಳಿ
ನಾಟ್ಯವಾಡಿ ಹಣೆಮೇಲೆ ಚಿನಕುರುಳಿ
ಲಾಸ್ಯವಾಡಿದೆ ನಗೆ ಕೆನ್ನೆಮೇಲಿನ ಗುಳಿ.
ಯಮುನೆ ಮಡಿಲಲಿದ್ದರೂ ತೀರದ ದಾಹ
ಬೆಳದಿಂಗಳ ತಂಪಿನಲಿರಲು ಸುಡುತಿದೆ ದೇಹ.
ಬೇಡಿದರೂ ಮೌನದಲಿ ಕುಳಿತಿರುವೆ ದೂರ
ಕಾಡದಿರೂ ಕೋಪದಿ ಮುಖ ತಿರುಗಿಸದೆ ಬಾರಾ.
ಕೃಷ್ಣನಿರದೆ ರಾಧೆ ಇರುವುದುಂಟೇ
ತೃಷೆಯಡಗದೆ ದೇಹ ಬದುಕಲುಂಟೇ
ಹುಸಿಮುನಿಸು ತೋರದೆ ಬರಬಾರದೇ
ನಸುನಗುತ ಒಮ್ಮೆ ಅಪ್ಪಬಾರದೇ.
✍️.. ಸ್ನೇಹದ ಸಂಕೋಲೆ ಪುಷ್ಪ




















