
ಕೊಟ್ಟೂರು : ಪಟ್ಟಣದ ಯುನಿಕ್ ಚಾರಿಟಬಲ್ ಟ್ರಸ್ಟ್ (ರಿ.) ಕಛೇರಿಯನ್ನು ಪ್ಯಾರಾ ಮಿಲಿಟರಿ ನಿವೃತ್ತ ಸೈನಿಕ ತಿಪ್ಪಜ್ಜಿ ಶಿವಕುಮಾರ ಗುರುವಾರ ಉದ್ಘಾಟಿಸಿದರು.
ಪಟ್ಟಣದ ತಿಪ್ಪಜ್ಜಿ ನೀಲಕಂಠಪ್ಪ ಹಾಗೂ ಟಿ.ಶಾಂತಮ್ಮ ದಂಪತಿಗಳಿಗೆ 6 ಜನ ಮಕ್ಕಳಿದ್ದು ,ಟಿ. ಶಿವಕುಮಾರ 2 ನೇ ಮಗನಾಗಿದ್ದು, ದೇಶ ಸೇವೆ ಮಾಡಬೇಕು ಎಂಬ ಹಂಬಲದಿಂದ 1988 ರಲ್ಲಿ ಪ್ಯಾರಾ ಮಿಲಿಟರಿ (CRPF) ಸೇರಿಕೊಂಡು, ಗುಜರಾತ್ ನಲ್ಲಿ ತರಬೇತಿ ಪಡೆದುಕೊಂಡು ಪಂಜಾಬ್ ಪ್ರಾಂತ್ಯದಿಂದ ವೃತ್ತಿ ಪ್ರಾರಂಭಿಸಿದೆ. ನಂತರ ಜಮ್ಮು ಕಾಶ್ಮಿರಕ್ಕೆ ವರ್ಗಾಯಿಸಿದರು. ಕುಟುಂಬದಲ್ಲಿ ಕಷ್ಟ ಹಾಗೂ ನಮ್ಮ ಬದುಕಿನ ಜೀವನ ಅನಿವಾರ್ಯತೆ ನನ್ನನ್ನು ದೇಶ ಸೇವೆ ಮಾಡುವಂತೆ ಮಾಡಿತು. ಟಿ.ವಿಜಯಲಕ್ಷ್ಮಿಯೊಂದಿಗೆ ಮದುವೆ ಮಾಡಿಕೊಂಡೆ ನನಗೆ ಶ್ರವಣಕುಮಾರ್ ಹಾಗೂ ಸೌಂದರ್ಯ ಎಂಬ ಇಬ್ಬರು ಮಕ್ಕಳಿದ್ದಾರೆ. ಅನೇಕ ವರ್ಷಗಳ ಕಾಲ ನನ್ನ ಮಡದಿಯೇ ನನ್ನ ಮಕ್ಕಳ ಯೋಗಕ್ಷೇಮ ನೋಡಿಕೊಂಡಿದ್ದಾರೆ. ಸೈನಿಕನಾಗಿ 15-20 ವರ್ಷ ಸೇವೆ ಮಾಡಿ ವಾಪಸ್ಸು ಬರಹುದಿತ್ತು ಆದರೆ ಅದು ತೃಪ್ತಿ ಅನಿಸಲಿಲ್ಲ ಅದಕ್ಕೆ 40 ವರ್ಷಗಳ ಕಾಲ ಭಾರತ ಮಾತೆ ಸೇವೆ ಮಾಡಿ 2026 ಫೆ. ತಿಂಗಳಲ್ಲಿ ನಿವೃತ್ತಿ ಹೊಂದಿದೆ. ಯುವಕರು ಹೆಚ್ಚು ಹೆಚ್ಚು ಸೈನ್ಯಕ್ಕೆ ಸೇರಬೇಕು ಎಂಬುದೇ ನನ್ನ ಉದ್ದೇಶ ಅಂಥವರಿಗೆ ನಮ್ಮ ಸಹಕಾರ ಇರುತ್ತದೆ. ಜಮ್ಮು ಕಾಶ್ಮೀರದಲ್ಲಿ 2014 ರಿಂದ ತುಂಬಾ ಬದಲಾವಣೆ ಆಗಿದೆ. ಮೋದಿ ಅಧಿಕಾರಕ್ಕೆ ಬಂದಮೇಲೆ ನಾವು ಗುಂಡು ಮದ್ದಿನ ಲೆಕ್ಕ ಕೊಡುವ ಅವಶ್ಯಕತೆಯಿಲ್ಲ, ನಮ್ಮ ಎದುರು ಶತ್ರುಗಳು ಬಂದರೆ ಗುಂಡು ಹಾರಿಸಿಬಿಡುವುದೇ ಮೊದಲ ಕೆಲಸ, ಮೊದಲಿನ ರೀತಿ ಉನ್ನತಾಧಿಕಾರಿಗಳ ಆದೇಶಕ್ಕೆ ಕಾಯುವ ಹಾಗಿಲ್ಲ, ನಾನು ಕೂಡ ‘ಸಿಂಧೂರ’ ಹಾಗೂ ‘ಕಾರ್ಗಿಲ್’ ಯುದ್ಧದಲ್ಲಿ ಭಾಗವಹಿಸಿದ್ದೇನೆ. ನನ್ನ ಮುಂದೆ ಹಾಗೂ ಅಕ್ಕಪಕ್ಕದಲ್ಲೇ ಗುಂಡುಮದ್ದುಗಳು ಬಿದ್ದಿವೆ. ಕೊಟ್ಟೂರೇಶ್ವರ ಸ್ವಾಮಿ ದಯೆಯಿಂದ ನಮಗೆ ಏನೂ ಆಗಿಲ್ಲ. ಯೋಧರ ಜೀವರಕ್ಷಣೆಗೆ ಬೇಕಾದ ಜೀವರಕ್ಷಕ ಕವಚಗಳನ್ನು ಕೇಂದ್ರ ಸರಕಾರ ಪೂರೈಕೆ ಮಾಡುತ್ತಿದೆ. ಸೈನಿಕರ ನಿರ್ಲಕ್ಷ್ಯ ಹಾಗೂ ಬೇಜವಾಬ್ದಾರಿ ತನದಿಂದಲೇ ಗುಂಡುಗಳು ಬಿದ್ದು ಸಾವನ್ನಪ್ಪಿದ್ದಾರೆ. ಒಟ್ಟಾರೆ ನಾವುಗಳು ಸಮಾಜಮುಖಿಯಾಗಿ ಜೀವಿಸೋಣ ಮತ್ತೊಬ್ಬರಿಗೆ ಕೈಲಾದಷ್ಟು ಸಹಾಯ ಸಹಕಾರ ಮಾಡಬೇಕೆಂದರು. ನಾವು ಮಾಡಿದಂತಹ ಸಹಾಯ ಸಹಕಾರ ನಮ್ಮನ್ನು ರಕ್ಷಿಸುತ್ತದೆ. ಕಾಶ್ಮಿರ ಪೈಲ್ಸ್ ಚಿತ್ರದ ಕಥೆ ಸುಳ್ಳೊ … ಸತ್ಯವೋ..ಎಂಬ ಬಗ್ಗೆ ಸದಸ್ಯರು ಪ್ರಶ್ನೆ ಕೇಳಿದಾಗ, ಅದು ಸತ್ಯ ನಮ್ಮ ಹಿಂದೂ ಮಹಿಳೆಯರನ್ನ ಹೀನಾಯವಾಗಿ ಚಿತ್ರಹಿಂಸೆ ನೀಡಿದ್ದಾರೆ. ಆ ಸಂದರ್ಭದಲ್ಲಿ ಜಮ್ಮು ಕಾಶ್ಮೀರದಲ್ಲಿ ಕೆಲಸ ಮಾಡುತ್ತಿದ್ದೆ. ಆಗಿನಂತೆ ಸಿಂಗಲ್ ವ್ಯಕ್ತಿ ಈಗ ಗಡಿಕಾಯುವುದಿಲ್ಲ 4-5 ಜನ ಗುಂಪಾಗಿ ಗಡಿ ರಕ್ಷಣೆ ಮಾಡುತ್ತೇವೆ. ಎಂದು ಯುನಿಕ್ ಚಾರಿಟಬಲ್ ಟ್ರಸ್ಟ್ ಸದಸ್ಯರೊಂದಿಗೆ ಯುದ್ಧರಂಗ ಭೂಮಿಯ ಅನುಭವಗಳನ್ನು ಹಂಚಿಕೊಂಡರು.
ಈ ಸಂದರ್ಭದಲ್ಲಿ ಟ್ರಸ್ಟ್ ಕಛೇರಿಗೆ ಸ್ಥಳವಕಾಶ ಮಾಡಿಕೊಟ್ಟ ರಾಘವೇಂದ್ರ ಭಂಡಾರಿ ಹಾಗೂ ಮಾಜಿ ಸೈನಿಕ ತಿಪ್ಪಜ್ಜಿ ಶಿವಕುಮಾರ ಇವರಿಗೆ ಟ್ರಸ್ಟ್ ನ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ಸನ್ಮಾನ ಮಾಡಿ ಅಭಿನಂದಿಸಿದರು.
- ಕರುನಾಡ ಕಂದ ಪತ್ರಿಕೆ




















