ವಿಜಯಪುರ ಜಿಲ್ಲೆಯ ಇಂಡಿ:ಪಂಚಮಸಾಲಿ ಸಮಾಜಕ್ಕೆ 2A ಮೀಸಲಾತಿ ಕಲ್ಪಿಸುವಂತೆ ಒತ್ತಾಯಿಸಿ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಶ್ರೀ.ಬಸವಮೃತ್ಯುಂಜಯ ಮಹಾಸ್ವಾಮಿಗಳ ನೇತೃತ್ವದಲ್ಲಿ ಬೆಂಗಳೂರು ಫ್ರೀಡಂ ಪಾರ್ಕಿನಲ್ಲಿ ನಡೆಯುತ್ತಿರುವ ಮೀಸಲಾತಿ ಹೋರಾಟದ 43 ನೇ ದಿನದ ಹೋರಾಟದಲ್ಲಿ ಇಂಡಿ ಮತಕ್ಷೇತ್ರದ ಜನಪ್ರಿಯ ಶಾಸಕರಾದ ಶ್ರೀ ಯಶವಂತರಾಯಗೌಡ ವಿ ಪಾಟೀಲ ರವರು ಭಾಗವಹಿಸಿ ಹೋರಾಟಕ್ಕೆ ತಮ್ಮ ಬೆಂಬಲ ಸೂಚಿಸಿದರು.
ಈ ಸಂದರ್ಭದಲ್ಲಿ ಶ್ರೀ.ಪ್ರಭಾಕರ ಬಗಲಿ, ಶ್ರೀ. ಶಾಂತುಗೌಡ ಬಿರಾದಾರ, ಶ್ರೀ.ನೀಲಕಂಠಗೌಡ ಪಾಟೀಲ, ಶ್ರೀ.ರಾಜುಗೌಡ ಪಾಟೀಲ, ಶ್ರೀ.ರವಿಗೌಡ ಪಾಟೀಲ, ಶ್ರೀ ಅಯ್ಯನಗೌಡ ಬಿರಾದಾರ, ಶ್ರೀ ಶಿವಪುತ್ರ ಮಲ್ಲೆವಾಡಿ, ಶ್ರೀ.ರಾಜು ಕುಲಕರ್ಣಿ ಹಾಗೂ ಅನೇಕ ಸಮಾಜದ ಮುಖಂಡರು ಉಪಸ್ಥಿತರಿದ್ದರು.
ವರದಿ:ಅರವಿಂದ್ ಕಾಂಬಳೆ