ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಬಸವಣ್ಣ ಮತ್ತು ಅನುಭವ ಮಂಟಪ

ಜಗತ್ತಿನ ಚರಿತ್ರೆಯಲ್ಲಿ ಸಾವಿರಾರು ದಾರ್ಶನಿಕರು, ಸಾಧಕರು ಭೂಮಂಡದಲ್ಲಿ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ,
ಅದರಲ್ಲೂ ಜಂಬೂ ದ್ವೀಪದಲ್ಲಿ ಕಾಯಕವೇ ಕೈಲಾಸ ಎಂದು ವೈಜ್ಞಾನಿಕ ಮಾನವತಾವಾದಿ ಚಿಂತಕರಾದ ಬಸವಣ್ಣನವರು ಅತ್ಯಂತ ಪ್ರಮುಖರು, ಸಾವಿರಾರು ವರ್ಷಗಳಿಂದ ಅಲಿಖಿತವಾಗಿ ಆಚರಣೆಯಲ್ಲಿದ್ದ ಅಂಧಕಾರ, ಅಸಮಾನತೆ, ಅಸ್ಪೃಶ್ಯತೆ, ಲಿಂಗ ತಾರತಮ್ಯ ವ್ಯಕ್ತಿಗತಪೂಜೆಯಂತಹ ನೂರಾರು ಅನಿಷ್ಠ ಪದ್ದತಿಗಳನ್ನು ಸವಾಲಾಗಿ ಸ್ವೀಕರಿಸಿ ಸಾಮಾಜಿಕ ಹಾಗೂ ಧಾರ್ಮಿಕ ಕ್ರಾಂತಿಯ ಮೂಲಕ ಜಾಗೃತಿ ಮೂಡಿಸಿದರು ಬಸವಣ್ಣನವರು ಬಿಜ್ಜಳನ ಪ್ರಧಾನ ಮಂತ್ರಿಯಾಗಿ ಜನೋಪಕಾರಿ ಕಾರ್ಯಕ್ರಮಗಳನ್ನು ಜಾರಿಗೆ ತರುವ ಮೂಲಕ ಜನಪ್ರಿಯರಾದರು, ಇದರ ನಡುವೆ ಅನುಭವ ಮಂಟಪ ಸ್ಥಾಪಿಸಿ ನೂರಾರು ಜಾತ್ಯಾತೀತ ವಚನಕಾರರ ಸೃಷ್ಟಿಗೆ ಕಾರಣೀಭೂತರಾದರು ತಳ ಸಮುದಾಯದ ಮದ್ದಳೆ ಬಾರಿಸುವ ಕುಟುಂಬದ ಅಲ್ಲಮಪ್ರಭುವನ್ನು ಅನುಭವ ಮಂಟಪದ ಶೂನ್ಯ ಪೀಠದ ಅಧ್ಯಕ್ಷರನ್ನಾಗಿ ಮಾಡಿದ ಮಹಾನ್ ಮಾನವತಾವಾದಿ ಬಸವಣ್ಣ ಎನ್ನುವುದಕ್ಕೆ ಇದೊಂದೇ ನಿದರ್ಶನ ಸಾಕಲ್ಲವೇ, ಬಸವಣ್ಣನವರು ಸಮ ಸಮಾಜವನ್ನು ಕಟ್ಟಿ ಬೆಳೆಸಿದ ಮಹಾನ್ ದಾರ್ಶನಿಕ…

ಬಸವಣ್ಣನವರು ಕೇವಲ ಕಾಲ್ಪನಿಕ ವ್ಯಕ್ತಿಯಲ್ಲ ಕರುನಾಡಿನ ಕಪ್ಪು ನೆಲದಲ್ಲಿ ವಾಸ್ತವಿಕವಾಗಿ ಜೀವನ ನಡೆಸಿದ ಮಹಾನ್ ಸಮಾಜ ಸುಧಾರಕ, ಧಾರ್ಮಿಕ ನಾಯಕ ಸಾವಿರಾರು ತಳ ಸಮುದಾಯದ ಜನರಿಗೆ ಲಿಂಗೈಕ್ಯ ನೀಡಿದ ಮಹಾನ್ ಸಮಾನತವಾದಿ.
ಇಂತಹ ಮಹಾನ್ ಚೇತನ ಭಕ್ತಿ ಭಂಡಾರಿ ಬಸವೇಶ್ವರರು ಏಪ್ರಿ ಲ್ 30, 1132 ರಲ್ಲಿ ಬಿಜಾಪುರ ಜಿಲ್ಲೆಯ ಬಾಗೇವಾಡಿಯ ಶೈವ ಬ್ರಾಹ್ಮಣ ಕುಟುಂಬದ ಮಾದಲಾಂಬಿಕೆ ಮತ್ತು ಮಾದರಸರ ಮಗನಾಗಿ ಜನಿಸಿದರು, ಬಾಲ್ಯದಲ್ಲಿ ಉಪನಯನವನ್ನು ತಿರಸ್ಕರಿಸಿ ಇಂತಹ ಆಚರಣೆ ನನಗೇಕೆ?” ಎಂದು ಪ್ರಶ್ನಿಸಿ, ವೈದಿಕ ಧರ್ಮದಲ್ಲಿನ ಅನಾಚಾರಗಳನ್ನು ದಿಕ್ಕರಿಸಿ ಮನೆ ಬಿಟ್ಟು ಮಲಪ್ರಭಾ ನದಿಗಳ ಪವಿತ್ರ ಸಂಗಮವಾದ ಕೂಡಲ ಸಂಗಮಕ್ಕೆ ತೆರಳಿ ಅಲ್ಲಿ ಜಾತ ವೇದ ಮುನಿಗಳ ಬಳಿ ಶಿಷ್ಯರಾಗಿ ಅಪಾರ ಪಾಂಡಿತ್ಯ ಗಳಿಸಿದರು, ಡಾ.ಪಿ ಬಿ.ದೇಸಾಯಿ ರವರು ” ಸಂಗಮೇಶ್ವರದ ಧಾರ್ಮಿಕ ವಾತಾವರಣ ಬಸವೇಶ್ವರ ಜೀವನದ ಮೇಲೆ ಅಚ್ಚಳಿಯದ ಪ್ರಭಾವ ಬೀರಿತು ಅವರ ದೃಷ್ಟಿ ಕೋನಗಳು ವಿಶಾಲಗೊಂಡವು ಅವರ ಜ್ಞಾನದಿಗಂತ ವಿಸ್ತರಿಸಿತು ಮತ್ತು ಅವರಿಗೆ ಜೀವನದ ದರ್ಶನದ ಪರಿಚಯವಾಯಿತು” ಎಂದಿದ್ದಾರೆ.
ಬಸವಣ್ಣನವರ ವಿದ್ವತ್ತಿನಿಂದ ರಾಜಧಾನಿ ಮಂಗಳವಾಡದ ಬಿಜ್ಜಳನ ಆಸ್ಥಾನದಲ್ಲಿ ವೃತ್ತಿ ಆರಂಭಿಸಿ ಪ್ರಾಮಾಣಿಕತೆ ಮತ್ತು ದಕ್ಷತೆಯಿಂದ ಆಡಳಿತದಲ್ಲಿ ಮನ್ನಣೆ ಗಳಿಸಿದರು, ಮುಂದೆ ಬಿಜ್ಜಳನ ಪ್ರಧಾನ ಮಂತ್ರಿಯಾಗಿಯೂ ಸೇವೆ ಸಲ್ಲಿಸಿದರು,
ಈ ನಡುವೆ ಸಮಾಜ ಸುಧಾರಣೆಯತ್ತ ತಮ್ಮ ಗಮನ ಹರಿಸಿ ಅದಕ್ಕಾಗಿ ಒಂದು ವೇದಿಕೆಯ ನ್ನು ಸಿದ್ಧಪಡಿಸಿದರು ಅದೇ ಅನುಭವ ಮಂಟಪ.
ಅನುಭವ ಮಂಟಪವು ಕೇವಲ ಆಧ್ಯಾತ್ಮಿಕ ಕೇಂದ್ರವಾಗಿರದೆ, ಶೋಷಣೆ ಮುಕ್ತ ಸಮಾಜದ ಕನಸು ಕಂಡ ನೂರಾರು ಶರಣರ ಸಂಗಮವಾಗಿತ್ತು. ಇಲ್ಲಿ ಕಾಯಕವೇ ಕೈಲಾಸ ಎಂದು ನಂಬಿದ್ದ ವಿವಿಧ ವೃತ್ತಿಯ ವಚನಕಾರರು ಸಕ್ರಿಯರಾಗಿದ್ದರು.
ಬಸವಣ್ಣನವರು ಪ್ರಧಾನ ಮಾರ್ಗದರ್ಶಕರಾಗಿ ಅನುಭವ ಮಂಟಪವನ್ನು ಮುನ್ನಡೆಸಿದರು ಇವರು ನೂರಾರು ವಚನಗಳನ್ನು ರಚಿಸಿದರು ಇವರ ವಚನಗಳ ಅಂಕಿತ ನಾಮ “ಕೂಡಲಸಂಗಮದೇವ”. ಹಿರಿಯ ಅಲ್ಲಮರು ಅನುಭವ ಮಂಟಪದ ‘ಶೂನ್ಯ ಪೀಠ’ದ ಅಧ್ಯಕ್ಷರಾಗಿದ್ದರು. ಇವರು ಅಪ್ರತಿಮ ಜ್ಞಾನಿ ಮತ್ತು ವೈರಾಗ್ಯ ಮೂರ್ತಿಯೆಂದು ಹೆಸರಾಗಿದ್ದರು, ಇವರ ಅಂಕಿತ “ಗುಹೇಶ್ವರ”.
ಚೆನ್ನಬಸವಣ್ಣ ಬಸವಣ್ಣನವರ ಸೋದರಳಿಯ.ಇವರು ಷಟಸ್ಥಲ ಜ್ಞಾನಕ್ಕೆ ಹೆಸರುವಾಸಿ. ಇವರ ಅಂಕಿತ “ಕೂಡಲ ಚೆನ್ನಸಂಗಮದೇವ”.
ಮಡಿವಾಳ ಮಾಚಿದೇವರು ಶರಣರ ವಸ್ತ್ರಗಳನ್ನು ಮಡಿ ಮಾಡುತ್ತಾ ಕಾಯಕ ಯೋಗಿಯಾಗಿದ್ದರು ಇವರ ಅಂಕಿತ “ಕಲಿ ದೇವರ ದೇವ”.
ಸಿದ್ಧರಾಮರು ಸೊನ್ನಲಿಗೆಯ (ಈಗಿನ ಸೋಲಾಪುರ) ಮಹಾ ಶಿವಯೋಗಿ. ಸಮಾಜ ಸೇವೆಯೇ ಶಿವಪೂಜೆ ಎಂದು ನಂಬಿದ್ದವರು. ಇವರ ಅಂಕಿತ “ಕಪಿಲ ಸಿದ್ಧ ಮಲ್ಲಿಕಾರ್ಜುನ”.
ಅಂಬಿಗರ ಚೌಡಯ್ಯರು ನದಿಯಲ್ಲಿ ದೋಣಿ ನಡೆಸುವ ಕಾಯಕಯೋಗಿ ನೇರ ಮತ್ತು ನಿಷ್ಠುರವಾದ ವಚನಗಳಿಗೆ ಇವರು ಪ್ರಸಿದ್ಧರಾಗಿದ್ದರು ಇವರ ಅಂಕಿತ ಇವರ ಹೆಸರೇ ಆಗಿದೆ (“ಅಂಬಿಗರ ಚೌಡಯ್ಯ”). ಮೋಳಿಗೆ ಮಾರಯ್ಯನವರು ಕಾಶ್ಮೀರದ ರಾಜನಾಗಿದ್ದರೂ ಎಲ್ಲವನ್ನೂ ತ್ಯಜಿಸಿ ಸೌದೆ ಮಾರುವ ಕಾಯಕ ಮಾಡುತ್ತಾ ಶರಣರಾದವರು. ಇವರ ಅಂಕಿತ “ನಿಃಕಳಂಕ ಮಲ್ಲಿಕಾರ್ಜುನ”, ಚಮ್ಮಾರ ಹರಳಯ್ಯ ದಂಪತಿಗಳು ಚಮ್ಮಾರ ಕಾಯಕದ ಶರಣರಾದರು. ಇವರ ಭಕ್ತಿ ಎಷ್ಟಿತ್ತೆಂದರೆ ತಮ್ಮ ತೊಡೆಯ ಚರ್ಮದಿಂದಲೇ ಬಸವಣ್ಣನವರಿಗೆ ಪಾದುಕೆ ಹೊಲಿದುಕೊಟ್ಟ ರೋಚಕ ಶರಣರು, ಹರಳಯ್ಯನವರ ವಂಶಸ್ಥರು ಈ ಪಾದುಕೆಗಳನ್ನು ತಲೆಮಾರುಗಳಿಂದ ಪೂಜಿಸುತ್ತಾ, ಅತ್ಯಂತ ಜಾಗರೂಕತೆಯಿಂದ ಕಾಪಾಡಿ ಕೊಂಡು ಬಂದಿದ್ದಾರೆ. ಇಂದಿಗೂ ಅನೇಕ ಭಕ್ತರು ಮತ್ತು ಚರಿತ್ರ ಸದ್ಬಕ್ತರು ಈ ಪವಾಡ ಸದೃಶ ರೋಚಕ ಪಾದುಕೆಗಳನ್ನು ವೀಕ್ಷಿಸಲು ಬಿಜ್ಜರಗಿ ಗ್ರಾಮಕ್ಕೆ ಭೇಟಿ ನೀಡುತ್ತಾರೆ. ಆ ಪಾದುಕೆಗಳು ಇಂದಿಗೂ ಕೆಡದಂತೆ ಇರುವುದು ಸೋಜಿಗವೇ ಸರಿ. ಸಮಕಾಲಿನ
ಮಾದಾರ ಚೆನ್ನಯ್ಯನವರನ್ನು ಹಿರಿಯ ಶರಣರು ತಮ್ಮ ಕುಲಗುರು ಎಂದು ಬಸವಣ್ಣರು ಗೌರವಿಸುತ್ತಿದ್ದರು ನೂಲಿವ ಚಂದಯ್ಯರೆಂಬ ಹಗ್ಗ ಹೊಸೆ ಯುವ ಕಾಯಕ ಮಾಡುತ್ತಿದ್ದ ನಿಷ್ಠಾವಂತ ಶರಣರಿದ್ದರು, ಇವರಲ್ಲದೆ ಅಲ್ಲದೆ ಹಡಪದ ಅಪ್ಪಣ್ಣ,ಹೊಲಯರ ಹೊನ್ನ ಯ್ಯರನ್ನು ಬಸವಣ್ಣನವರು “ಎನಗಿಂತ ಕಿರಿಯರಿಲ್ಲ, ಶಿವ ಭಕ್ತರಿಗಿಂತ ಹಿರಿಯರಿಲ್ಲ” ಎಂಬ ತತ್ವದಡಿ ಹೊನ್ನಯ್ಯನವರಂತ ಹ ಶರಣರನ್ನು ಅತ್ಯಂತ ಗೌರ ವದಿಂದ ನಡೆಸಿಕೊಳ್ಳುತ್ತಿದ್ದರು,
ಕಿನ್ನರಿಬೊಮ್ಮಯ್ಯ ಸೇರಿದಂತೆ ಸುಮಾರು 770 ಅಮರ ಗಣಂಗಳು (ಪ್ರಮುಖ ಶರಣರು) ಇದ್ದರೆಂದು ಹೇಳಲಾಗುತ್ತದೆ. ವಿಶೇಷವಾಗಿ ಅನುಭವ ಮಂಟಪದಲ್ಲಿ ಮಹಿಳಾ ವಚನ ಗಾರ್ತಿಯರಿಗೆ ಸಮಾನ ಅವ ಕಾಶವಿತ್ತು 12ನೇ ಶತಮಾನದಲ್ಲಿ ಮಹಿಳೆ ಅಬಲೆಯಲ್ಲ ಸಬಲೆ ಎಂದು ಗೌರವಿಸಿದ ಕೀರ್ತಿ ಬಸವಣ್ಣರಿಗೆ ಸಲ್ಲುತ್ತದೆ, ಅಂದಿನ ಕಟ್ಟುಪಾಡುಗಳನ್ನು ಮೀರಿ ಯಾವುದೇ ಸ್ಥಾನಮಾನ ವಿಲ್ಲದ ಸಂದರ್ಭದಲ್ಲಿ ಬಸವಣ್ಣನವರು ಪುರುಷರಂತೆ ಮಹಿಳೆಯರು ಸಮಾನರೆಂದು ಅವರ ಮೂಲಕ ವಚನಗಳನ್ನು ರಚಿಸಲು ಸದಾವಕಾಶ ಕಲ್ಪಿಸಿದರು, ಅನುಭವ ಮಂಟಪವು ಜಾತಿ, ಮತ ಮತ್ತು ಲಿಂಗ ಭೇದ ವಿಲ್ಲದೆ ಸರ್ವರಿಗೂ ಸರಿಸಮಾ ನ ಅವಕಾಶ ನೀಡಿದರು. ಅನೇಕ ಮಹಿಳಾ ವಚನಗಾರ್ತಿಯರು ಸಕ್ರಿಯವಾಗಿ ಭಾಗವಹಿಸಿ, ತಮ್ಮ ಅನುಭವದ ವಿಚಾರ ಧಾರೆಗಳನ್ನು ವ್ಯಕ್ತಪಡಿಸಿದ್ದರು. ಅನುಭವ ಮಂಟಪದಲ್ಲಿ ಅಕ್ಕ ಮಹಾದೇವಿ ಅತ್ಯಂತ ಪ್ರಸಿದ್ಧ ವಚನಗಾರ್ತಿ,ನೀಲಾಂಬಿಕೆ ಮತ್ತು ಗಂಗಾಂಬಿಕೆಯರು ವಚನಗಾರ್ತಿಯರಾಗಿದ್ದರು ಇವರಿಬ್ಬರೂ ಬಸವಣ್ಣನವರ ಧರ್ಮ ಪತ್ನಿರು, ಸತ್ಯಕ್ಕ ಕಾಯಕವೇ ಕೈಲಾಸ ಎಂದು ನಂಬಿದ್ದ ಶ್ರಮ ಜೀವಿ ವಚನಗಾರ್ತಿ, ಸೂಳೇ ಸಂಕವ್ವ,ಮುಕ್ತಾಯಕ್ಕ,ಆಯ್ದಕ್ಕಿ ಲಕ್ಕಮ್ಮ ಆಯ್ದಕ್ಕಿ ಮಾರಯ್ಯನ ಪತ್ನಿ.”ಕಾಯಕದಲ್ಲಿ ನಿರತನಾ ದೆಡೆ ಗುರುದರ್ಶನವಾದರೂ ಮರೆಯಬೇಕು” ಎಂಬ ಉನ್ನತ ಸಂದೇಶ ನೀಡಿದವರು. ಮೋಳಿಗೆ ಮಹಾದೇವಿಯೂ ಮೋಳಿಗೆ ಮಾರಯ್ಯನ ಪತ್ನಿ. ಇವರು ರಾಜ ವೈಭೋಗವನ್ನು ತೊರೆದು ಶರಣರ ಸಂಘ ದಲ್ಲಿ ಸರಳ ಜೀವನ ನಡೆಸಿದವರು.
ಅಕ್ಕಮ್ಮರನ್ನು ‘ಕಾಯಕದ ಅಕ್ಕಮ್ಮ’ ಎಂದೂ ಕರೆಯಲಾಗುತ್ತಿತ್ತು. ಕಮಲಮ್ಮ, ಗುಮ್ಮಳಾಪುರದ ಸಿದ್ಧಲಿಂಗಮ್ಮ ಸೇರಿದಂತೆ ಸುಮಾರು 30ಕ್ಕೂ ಹೆಚ್ಚು ಮಹಿಳಾ ವಚನಗಾರ್ತಿಯರು ಅನುಭವ ಮಂಟಪದಲ್ಲಿದ್ದರು ಇವರೆಲ್ಲರೂ ಅಂದಿನ ಕಾಲದಲ್ಲೇ ಸ್ತ್ರೀ ಸಮಾನತೆ ಮತ್ತು ಆಧ್ಯಾತ್ಮಿಕ ಸ್ವಾತಂತ್ರ್ಯಕ್ಕಾಗಿ ಧ್ವನಿ ಎತ್ತಿದ ಕ್ರಾಂತಿಕಾರಿ ವಚನಗಾರ್ತಿ ಯರು,ಅನುಭವ ಮಂಟಪಕ್ಕೆ ದಿನದಿಂದ ದಿನಕ್ಕೆ ಸಾವಿರಾರು ಸಂಖ್ಯೆಯಲ್ಲಿ ಬಸವಾದಿ ಶರಣರು ಧಾವಿಸಿ ತಮ್ಮ ತಮ್ಮ ಅನು ಭವದ ದಾಹವನ್ನು ಮನ ಬಿಚ್ಚಿ ವಚನಗಳ ಮೂಲಕ ಸಂದೇಶ ಗಳನ್ನು ಹಂಚಿದರು ಇದು ಅನುಭವ ಮಂಟಪಕ್ಕೆ ಮೆರಗು ನೀಡಿತು ಮಂಟಪದಲ್ಲಿ ಅಲ್ಲಮ ಪ್ರಭುವಿನ ಬಳಿ ನಿತ್ಯ ವಚನ ಕಾರರು ರಚಿಸಿದ ವಚನಗಳನ್ನು ಅಭಿ ವ್ಯಕ್ತಪಡಿಸುತ್ತಿದ್ದರು.
ಇದೇ ಕಾಲಘಟ್ಟದಲ್ಲಿ ಬಸವಣ್ಣ ನವರು ಅಂತರ್ಜಾತಿಯ ವಿವಾ ಹಗಳನ್ನು ಕೂಡ ನಡೆಸಿದರು ಇದರಿಂದ ಕ್ರೋಧಗೊಂಡ ಬಿಜ್ಜ ಳನ ಆಸ್ಥಾನದ ಮತೀಯವಾದಿಗಳು ಅನುಭವ ಮಂಟಪದ ಬಗ್ಗೆ ತಪ್ಪು ಸಂದೇಶವನ್ನು ರಾಜನಿಗೆ ರವಾನಿಸಿ ಬಸವಣ್ಣರನ್ನು ಮಂತ್ರಿ ಸ್ಥಾನದಿಂದ ವಜಾಗೊಳಿ ಸಿದರು, ಇದರಿಂದ ಕ್ರೋಧಗೊಂಡ ಶರಣರು ರಕ್ತ ಕ್ರಾಂತಿಗೆ ಮುಂದಾದರು ಕ್ರಿ.ಶ.1167-68ರ ಅವಧಿಯಲ್ಲಿ ನಡೆದ ಕ್ರಾಂತಿಯ ಪರಿ ಣಾಮವಾಗಿ ಅನುಭವ ಮಂಟಪವು ಪತನಗೊಂಡಿತು.
ಬಿಜ್ಜಳನ ಹತ್ಯೆ ಮತ್ತು ತದ ನಂತರ ಉಂಟಾದ ರಾಜಕೀಯ ಅಸ್ಥಿರತೆಯಿಂದಾಗಿ ಶರಣರು ಕಲ್ಯಾಣವನ್ನು ಬಿಟ್ಟು ಚದುರ ಬೇಕಾಯಿತು. ಕಲ್ಯಾಣದಲ್ಲಿ ನೂರಾರೂ ಬಸವಾದಿ ಶರಣರು ಬಿಜ್ಜಳನ ಸೈನಿಕರ ಕತ್ತಿಗೆ ಬಲಿ ಯಾದರು ಸಾವಿರಾರು ಜನ ದಿಕ್ಕಾಪಾಲಾಗಿ ಓಡಿದರು. ಇದೆ ಸಮಯದಲ್ಲಿ ವಿರೋಧಿಗಳು ಮತ್ತು ಸೈನಿಕರು ಶರಣರ ಮನೆಗಳಿಗೆ ಬೆಂಕಿ ಹಚ್ಚಿದಾಗ ಸಾವಿರಾರು ವಚನದ ಪ್ರತಿಗಳು (ತಾಳೆ ಗರಿ ಗಳು) ಸುಟ್ಟು ಹೋದವು.
ಮಡಿವಾಳ ಮಾಚಿದೇವ, ಚೆನ್ನ ಬಸವಣ್ಣನವರ ನೇತೃತ್ವದಲ್ಲಿ ಶರಣರು ಕೆಲವು ವಚನಗಳನ್ನು ರಕ್ಷಿಸಿದರು.
ಸುಮಾರು ಕ್ರಿ.ಶ.1154 ರಿಂದ 1167 ರವರೆಗೆ 12 ರಿಂದ 15 ವರ್ಷಗಳ ಕಾಲ ಅನುಭವ ಮಂಟಪವು ಅತ್ಯಂತ ಕ್ರಿಯಾ ಶೀಲವಾಗಿತ್ತು,ಬಸವಣ್ಣನವರ ತತ್ವಗಳಿಂದ ಪ್ರಭಾವಿತರಾಗಿ ಕಲ್ಯಾಣಕ್ಕೆ ಬಂದವರ ಸಂಖ್ಯೆ ಲಕ್ಷಾಂತರ ಇತ್ತು ಎಂದು ಅಭಿಪ್ರಾಯಿಸಲಾಗಿದೆ ಶರಣರ ವಚನಗಳಲ್ಲಿ ‘ಸಂಖ್ಯೆಯಿಲ್ಲದ ಶರಣರು’ ಎಂಬ ಉಲ್ಲೇಖಗಳು ಬರುತ್ತವೆ, ಅಂದರೆ ಕಲ್ಯಾಣದ ಕ್ರಾಂತಿ ಯಲ್ಲಿ ಭಾಗಿಯಾದ ಸಾಮಾನ್ಯ ಜನರ ಸಂಖ್ಯೆ ಅಪಾರವಾಗಿತ್ತು.
ಈ ಕಾಲಘಟ್ಟದಲ್ಲಿ ಸಾವಿರಾರು ವರ್ಷಗಳಿಂದ ಕಾರ್ಗತ್ತಲ ಕಪ್ಪು ನೆಲದ ಕಪ್ಪು ಜನರಿಗೆ ಬೆಳಕು ತೋರಿದ ಮಹಾನ್ ಮಾನವತಾವಾದಿ ಬಸವಣ್ಣ,
ಬಸವಣ್ಣನವರ ಸಿದ್ಧಾಂತಗಳನ್ನು ಸಮಾಜಕ್ಕೆ ಪರಿಚಯಿಸ ಲು19 ನೇಶತಮಾನದಲ್ಲಿ ಬಸವ ಜಯಂತಿಯನ್ನು ಸಾರ್ವಜನಿಕವಾಗಿ ಮತ್ತು ವ್ಯವಸ್ಥಿತವಾಗಿ ಆಚರಿಸಲು ಪ್ರಾರಂಭಿಸಿದ ಕೀರ್ತಿ ಹರ್ಡೇಕರ್ ಮಂಜಪ್ಪ ರವರಿಗೆ ಸಲ್ಲುತ್ತದೆ. ಹರ್ಡೇಕರ ಮಂಜಪ್ಪನವರು 1913ರಲ್ಲಿ ದಾವಣಗೆರೆಯಲ್ಲಿ ಮೊದಲ ಬಾರಿಗೆ ಸಾರ್ವಜನಿಕವಾಗಿ ಬಸವ ಜಯಂತಿಯನ್ನು ಆಚರಿಸಿದರು.
ಇದಕ್ಕೆ ಪೂರಕವಾಗಿ ಧಾರವಾಡದ ಮುರುಘಾ ಮಠದ ಅಂದಿನ ಪೀಠಾಧಿಪತಿಗಳಾಗಿದ್ದ ಮೃತ್ಯುಂಜಯ ಸ್ವಾಮಿಗಳ ಉಪದೇಶ ಮತ್ತು ಮಾರ್ಗದರ್ಶನದಂತೆ ಅವರು ಈ ಕೈಂಕರ್ಯ ಹಮ್ಮಿಕೊಂಡಿದ್ದರು.
ಇದರ ಉದ್ದೇಶ ಬಸವಣ್ಣನವರ ಸಮಾನತೆಯ ಸಂದೇಶಗಳನ್ನು ಮತ್ತು ವಚನ ಸಾಹಿತ್ಯದ ಮೌಲ್ಯಗಳನ್ನು ಜನ ಸಾಮಾನ್ಯ ರಿಗೆ ತಲುಪಿಸುವುದು ಇದರ ಮುಖ್ಯ ಉದ್ದೇಶವಾಗಿತ್ತು.
ಅಂದಿನಿಂದ ಈ ಆಚರಣೆಯು ಜನಪ್ರಿಯವಾಗುತ್ತಾ ಇಂದು ಕರ್ನಾಟಕ ಮತ್ತು ಪ್ರಪಂಚದಾದ್ಯಂತ ಅತ್ಯಂತ ವೈಭವದಿಂದ ಆಚರಿಸಲಾಗುತ್ತಿದೆ. ಇದಕ್ಕೂ ಮೊದಲು ಬಸವಣ್ಣನವರ ಜನ್ಮ ದಿನವನ್ನು ಸಾಂಪ್ರದಾಯಿಕವಾಗಿ ಮಠ-ಮಾನ್ಯಗಳಲ್ಲಿ ಆಚರಿಸಲಾಗುತ್ತಿತ್ತು, ಆದರೆ ಅದನ್ನು ಒಂದು ಸಾರ್ವಜನಿಕ ಹಬ್ಬವನ್ನಾಗಿ ರೂಪಿಸಿದವರು ಹರ್ಡೇಕರ್ ಮಂಜ ಪ್ಪ ನವರು. ಕರ್ನಾಟಕ ಸರ್ಕಾರವು ಬಸವ ಜಯಂತಿಯನ್ನು ಅಂದಿನ ಮಾನ್ಯ ಮುಖ್ಯಮಂತ್ರಿ ಎಸ್ ಎಂ ಕೃಷ್ಣರು ಮೇ 4.2003 ರಂದು ಬಸವಜಯಂತಿಯನ್ನು ಅಧಿಕೃತವಾಗಿ ಆಚರಿಸಿ ಸರ್ಕಾರಿ ರಜೆಯನ್ನಾಗಿ ಘೋಷಿಸಿದರು, ಅಂದಿನಿಂದ ಇಲ್ಲಿಯವರೆಗೂ ರಾಜ್ಯಾದ್ಯಂತ ಅತ್ಯಂತ ವೈಭವದಿಂದ ಆಚರಿಸುತ್ತಾ ಬಂದಿದೆ.
ಸಕಲರಿಗೂ ಬಸವ ಣ್ಣನವರ ಸಾಮಾಜಿಕ ಕ್ರಾಂತಿಯ ಬಗ್ಗೆ ಮತ್ತಷ್ಟು ಅರಿಯವಂತಾಗಬೇಕು.
ಇವನಾರವ ಇವನಾರವ ಇವನಾರವ
ನೆಂದೆನಿಸದಿರಯ್ಯ..
ಇವ ನಮ್ಮವ ಇವ ನಮ್ಮವನೆಂದೆನಿಸಯ್ಯ ಕೂಡಲಸಂಗಮದೇವ ನಿಮ್ಮ ಮನೆಯ ಮಗನೆಂದೆನಿಸಯ್ಯ….
ಶರಣು ಶರಣಾರ್ಥಿ.

ಲೇಖನ: ಡಾ.ಸುರೇಶ ಎಸ್,. ವಡಗಲಪುರ.
ಚಾಮರಾಜನಗರ.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!