ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಪ್ರತಿ ಮೂರು ವರ್ಷಕ್ಕೊಮ್ಮೆ ನಡೆಯುವ ತೆಗ್ಗಿ ಗ್ರಾಮದೇವತೆಗಳ ಜಾತ್ರಾ ಮಹೋತ್ಸವ- ೨೦೨೬

ತೆಗ್ಗಿ ಗ್ರಾಮದೇವತೆಗಳಿಗೆ ಉಡಿ ತುಂಬಿ, ಆಶೀರ್ವಾದ ಪಡೆದ ಮಾಜಿ ಶಾಸಕ ಪಟ್ಟಣಶೆಟ್ಟರ ಕುಟುಂಬ

ಬಾಗಲಕೋಟೆ/ ಗುಳೇದಗುಡ್ಡ ತಾಲೂಕಿನ ತೆಗ್ಗಿ ಗ್ರಾಮದಲ್ಲಿ ಪ್ರತಿ ಮೂರು ರ‍್ಷಕ್ಕೊಮ್ಮೆ ನಡೆಯುವ ಗ್ರಾಮದೇವತೆಗಳಾದ ದ್ಯಾಮವ್ವಮ್ಮ ಮತ್ತು ದರ‍್ಗವ್ವಮ್ಮರ ಜಾತ್ರಾ ಮಹೋತ್ಸವದಲ್ಲಿ ಬುಧವಾರ ತೆಗ್ಗಿ ಗ್ರಾಮದಲ್ಲಿ ದೇವತೆಗಳ ಉಡಿ ತುಂಬುವ ಕರ‍್ಯಕ್ರಮದಲ್ಲಿ ಬಾದಾಮಿ ಮತಕ್ಷೇತ್ರದ ಮಾಜಿ ಶಾಸಕರಾದ ಎಂ. ಕೆ. ಪಟ್ಟಣಶೆಟ್ಟರ ಅವರು ಕುಟುಂಬ ಪರಿವಾರ ಸಮೇತ ಪಾಲ್ಗೊಂಡು ಗ್ರಾಮದೇವತೆಗಳಿಗೆ ಭಕ್ತಿಯಿಂದ ಉಡಿ ತುಂಬಿ ದೇವತೆಗಳ ಆಶೀರ್ವಾದ ಪಡೆದರು.

ದೇವತೆಗಳ ಉಡಿ ತುಂಬಿದ ಮಾಜಿ ಶಾಸಕರಾದ ಎಂ. ಕೆ. ಪಟ್ಟಣಶೆಟ್ಟರ ಅವರು ಮಾತನಾಡಿ, ನಮ್ಮ ಗ್ರಾಮೀಣ ಪರಿಸರದಲ್ಲಿ ನಡೆಯುವ ಜಾತ್ರೆಗಳು ವೈಶಿಷ್ಟ್ಯಪೂರ್ಣವಾಗಿವೆ ಗ್ರಾಮದಲ್ಲಿ ನಡೆಯುವ ಜಾತ್ರೆಗಳ ಸಮಯದಲ್ಲಿ ಬಂಧು ಬಳಗದವರು, ಮಹಿಳೆಯರು ಕೂಡಿಕೊಂಡು, ಗ್ರಾಮದ ದ್ಯಾಮವ್ವ ಮತ್ತು ದುರಗವ್ವ ದೇವತೆಯರಿಗೆ ಉಡಿ ತುಂಬುವ ಪರಂಪರೆ ಕನ್ನಡ ನಾಡಿನ ಸಂಸ್ಕೃತಿಯ ಪ್ರತೀಕವಾಗಿದೆ. ಈ ಜಾತ್ರೆಗಳು ನಮ್ಮ ನಾಡಿನ ಸಂಪ್ರದಾಯ ಮತ್ತು ಪರಂಪರೆಗಳ ಮಹತ್ವವನ್ನು ಮುಂದಿನ ಜನಾಂಗದವರಿಗೆ ನೀಡಲು ಪೂರಕವಾಗಿವೆ ಎಂದು ಹೇಳಿದರು.

ಉಡಿ ತುಂಬುವ ಕಾರ್ಯಕ್ರಮದಲ್ಲಿ ಗ್ರಾಮ ದೇವತೆಯ ಅರ್ಚಕರು, ಗ್ರಾಮದ ಗುರು ಹಿರಿಯರು, ಬಾಬದ ಮನೆಯವರು, ಆರತಿ ಹಿಡಿದ ಮಹಿಳೆಯರು, ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಪಾಲ್ಗೊಂಡಿದ್ದರು.

  • ಕರುನಾಡ ಕಂದ ಪತ್ರಿಕೆ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!