ಲಿಂಗಸೂರು:- ಗುಲಬರ್ಗಾ ವಿದ್ಯುತ್ ಸರಬರಾಜು ಕಂಪನಿ ನಿಯಮಿತ ಲಿಂಗಸೂಗೂರು ವತಿಯಿಂದ ಶ್ರೀ ಬಿ.ಎಸ್. ಬಾಗೇವಾಡಿ (ಹಿರಿಯ ಸಹಾಯಕ) ಕಾ&ಪಾ ಉಪ ವಿಭಾಗ ಜೆಸ್ಕಾಂ ಲಿಂಗಸೂಗೂರು “ವಯೋನಿವೃತ್ತಿ ಬೀಳ್ಕೊಡುಗೆ ಸಮಾರಂಭ “ ಇಂದು ಸಂಜೆ ತುಂಬಾ ಅದ್ದೂರಿಯಾಗಿ ನೆರವೇರಿತು.
ಅಧ್ಯಕ್ಷತೆಯನ್ನು ಕೆಂಚಪ್ಪ ಕಾರ್ಯ ನಿರ್ವಹಕ ಅಭಿಯಂತರರು ಲಿಂಗಸೂಗೂರು ಅವರು ವಹಿಸಿಕೊಂಡಿದ್ದರು.
ಈ ಸಂದರ್ಭದಲ್ಲಿ ಬಿ.ಎಸ್ ಬಾಗೇವಾಡಿ ಹಿರಿಯ ಸಹಾಯಕರು,ಎಚ್.ಎನ್ ನಟರಾಜ,ಮಂಜುನಾಥ ಸಹಾಯಕರು,ದೇವರಾಜ, ಅಮರಪ್ಪ,ಸೋಮಪ್ಪ, ನಾಗರಡ್ಡಿ ಗುತ್ತಿಗೆದಾರರ ಸಂಘದ ಅದ್ಯಕ್ಷರು, ಬಸವರಾಜ ಕೊಟ್ನೆಕಲ್ ನಿವೃತ್ತ ಶಾಖಾಧಿಕಾರಿಗಳು, ನಾರಾಯಣಪ್ಪ ನಿವೃತ್ತ ಲೆಕ್ಕಾಧಿಕಾರಿಗಳು, ಬಂದೇನವಾಜ,ರಾಘವೇಂದ್ರ ಪ್ರಭಾರಿ ಶಾಖಾಧಿಕಾರಿಗಳು ಸಿಂಧನೂರು, ಶಿವಪ್ಪ ಗುರುಗುಂಟಿ ಸಾಹಿತಿಗಳು,ಮೌನೇಶ ಸ್ಥಳೀಯ ಸಮಿತಿಯ ಕಾರ್ಯದರ್ಶಿ,ರಾಮಕೃಷ್ಣ, ಚನ್ನಪ್ಪ ಕೆ.ಹೊಸಹಳ್ಳಿ,ಗಿರೀಶ ಗೌಡ ಸಮಾಜ ಸೇವಕರು, ಹಾಗೂ ಜೆಸ್ಕಾ ಹಾಗೂ ಕೆ.ಪಿ.ಟಿ.ಸಿ.ಎಲ್. ಅಧಿಕಾರಿಗಳು ಸಿಬ್ಬಂದಿವರ್ಗದವರು ಈ ಶುಭ ಸಮಾರಂಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.



















