ಮಾ.4-5 ಬಸವಕಲ್ಯಾಣದಲ್ಲಿ ನಡೆಯುತ್ತಿರುವ ರಾಷ್ಟ್ರಿಯ ಲಿಂಗಾಯತ ಮಹಾ ಅಧವೇಶನಕ್ಕೆ ಔರದ ತಾಲೂಕಿನಿಂದ ಸುಮಾರು 10 ಸಾವಿರ ಜನರು ಪಾಲ್ಗೊಳ್ಳೂವ ನಿರೀಕ್ಷೆ ಇದೆ ಎಂದು ಜಾಗತಿಕ ಲಿಂಗಾಯತ ಮಹಾಸಭಾ ಅಧ್ಯಕ್ಷ ಪ್ರಕಾಶ ಘೂಳೆ ತಿಳಿಸಿದರು.
ಔರದ ತಾಲೂಕಿನ ಖಾಸಗಿ ಶಿಕ್ಷಣ ಸಂಸ್ಥೆಗಳ ಸುಮಾರು 30 ಕ್ಕು ಅಧಿಕ ಬಸ್ಸುಗಳ ವ್ಯವಸ್ಥೆ ಮಾಡಲಾಗಿದೆ. ಹಾಗೂ ಪ್ರತಿ ಗ್ರಾಮದ ಜನರು ತಮ್ಮ ತಮ್ಮ ವಾಹನಗಳನ್ನು ತೆಗೆದುಕೊಂಡು ಬರುತ್ತಿದಾರೆ. ಇ ಸಮಾವೇಶಕ್ಕೆ ಬರುತ್ತಿರುವ ಜನರಿಗೆ ವಸತಿ ಹಾಗೂ ಪ್ರಸಾದ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಲಿಂಗಾಯತ ಸಮಾಜದ ಹಿರಿಯರಾದ ಡಾ||ಕಲ್ಲಪ್ಪ ಉಪ್ಪೆ, ರವೀಂದ್ರ ಮೀಸೆ, ಬಂಡೆಪ್ಪಾಕಂಟೆ, ಶರಣಪ್ಪಾ ಪಂಚಾಕ್ಷರಿ, ತಮಣಜೈ, ಶರಣಪ್ಪಾ ಪಾಟೀಲ, ಸಂಜುಕುಮಾರ ಜುಮ್ಮಾ, ಧನರಾಜ ರಾಗ ಇನ್ನಿತರ ಮುಖಂಡರು ಭಾಗಿಯಾಗಿದ್ದರು
ವರದಿ:ಅಮರ ಮುಕ್ತೆದಾರ




















