ಬಳ್ಳಾರಿ : ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಹಾಗೂ ಮಿತ್ರಾ ಟೆಕ್ನಾಲಜೀಸ್ ಜಂಟಿಯಾಗಿ “ಹೊಸ ಕಾರ್ಮಿಕ ಸಂಹಿತೆ-2025ರ ಜಾಗೃತಿ ಕಾರ್ಯಾಗಾರವು ಸಂಸ್ಥೆಯ ಸಭಾಂಗಣದಲ್ಲಿ ಇಂದು ನಡೆಯಿತು.
ಇಎಸ್ಐಸಿನ ನಿವೃತ್ತ ಅಧಿಕಾರಿ ಶೇಖ್ ಹನೀಫ್, ಇಎಸ್ಐಸಿ ಮತ್ತು ಇಪಿಎಫ್ಒಗಳ ಹೊಸ ನಿಯಮ ಗಳು ಮತ್ತು ಉದ್ಯೋಗಿಗಳ ಸಾಮಾಜಿಕ ಭದ್ರತೆ, ಕಾನೂನುಬದ್ದ ಸೌಲಭ್ಯಗಳು ಹಾಗೂ ವೇತನ ಪಾವ ತಿಯ ದಾಖಲೆಗಳ ನಿರ್ವಹಣಾ ವ್ಯವಸ್ಥೆಯ ಕುರಿತು ಮಾಹಿತಿ ನೀಡಿದರು.
ಸಂಸ್ಥೆಯ ಅಧ್ಯಕ್ಷ ಅವ್ವಾರ್ ಮಂಜುನಾಥ್ ಪ್ರಾಸ್ತಾವಿಕವಾಗಿ ಮಾತನಾಡಿ, ಹೊಸ ಕಾರ್ಮಿಕ ಸಂಹಿತೆ-2025ರ ಕುರಿತು ಕೈಗಾರಿಕಾ ಮತ್ತು ಉದ್ಯೋಗ ಕ್ಷೇತ್ರದಲ್ಲಿ ಇರುವ ಮಾನವ ಸಂಪ ನ್ಮೂಲ ವಿಭಾಗದ ಪ್ರತಿಯೊಬ್ಬರೂ ತಿಳಿದುಕೊಂಡು, ಅರ್ಥ ಮಾಡಿಕೊಳ್ಳಬೇಕು. ಈ ಮೂಲಕ ಕೆಲಸಗಾರರಿಗೆ ಹೆಚ್ಚಿನ ಪ್ರಮಾಣದಲಿ ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ (ರಿ.)
ಕೇಂದ್ರ ಸರ್ಕಾರದ ಸೌಲಭ್ಯಗಳು ಸಿಗುವಂತೆ ಮುಂಜಾಗ್ರತೆಗಳನ್ನು ಕೈಗೊಳ್ಳಲು ಅನುಕೂಲವಾ ಗಲಿದೆ ಎಂದರು.
ಸಂಸ್ಥೆಯ ಗೌರವ ಕಾರ್ಯದರ್ಶಿ ಕೆ.ಸಿ. ಸುರೇಶ ಬಾಬು ವಂದನಾರ್ಪಣೆ ಸಲ್ಲಿಸಿದರು.
ಹಿರಿಯ ಉಪಾಧ್ಯಕ್ಷ ಎಸ್. ದೊಡ್ಡನಗೌಡ, ಉಪಾಧ್ಯಕ್ಷ ಸೊಂತಾ ಗಿರಿಧರ್, ಜಂಟಿ ಕಾರ್ಯದರ್ಶಿ, ಡಾ. ಮರ್ಜೆಡ್ ಮಲ್ಲಿಕಾ ರ್ಜುನಗೌಡ, ವಿ. ರಾಮಚಂದ್ರ, ಖಜಾಂಚಿಗ ಳಾದ ಸಿ.ಎಸ್. ಸತ.ನಾರಾಯಣ. ಈವೆಂಟ್
ಕಮಿಟಿ ಚೇರ್ಮನ್ ನೇಕಾರ್ ನಾಗರಾಜ್, ಪತ್ರಿಕಾ ಹಾಗೂ ಮಾಧ್ಯಮ ಕಮಿಟಿ ಚೇರ್ಮನ್ ಟಿ. ಶ್ರೀನಿವಾಸರಾವ್, ಮ್ಯಾಗ್ವಿನ್ ಕಮಿಟಿ ಚೇರ್ಮನ್ ಕೌಡಕಿ ಹನುಮೇಶ್, ಬುಸ್ಮಾದ ಮರಿ ಸ್ವಾಮಿರೆಡ್ಡಿ, ಖಾಸಗಿ ಶಾಲೆಗಳ ಮಾನವ ಸಂಪ ನ್ಮೂಲ ವಿಭಾಗದ ಮುಖ್ಯಸ್ಥರು, ವಿವಿಧ ಕೈಗಾರಿಕೆ ಸಂಘ ; ಸಂಸ್ಥೆಗಳ ಮುಖ್ಯಸ್ಥರು ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















