ಬಳ್ಳಾರಿ / ಕಂಪ್ಲಿ : ತಾಲೂಕಿನ ಎಮ್ಮಿಗನೂರು ಗ್ರಾಮದಲ್ಲಿ ಜೂನ್ 20ರಂದು ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಪ್ರಯುಕ್ತ ಯೋಗ ಅಭ್ಯಾಸ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಎಮ್ಮಿಗುನೂರಿನ ಸರ್ಕಾರಿ ಬಾಲಕರ ವಿದ್ಯಾರ್ಥಿ ನಿಲಯದ ಆವರಣದಲ್ಲಿ ಹಮ್ಮಿಕೊಳ್ಳಲಾಗಿತ್ತು.
ರಂಗಭೂಮಿ ನಿರಂತರವಾಗಿ ಕಾರ್ಯಗತಗೊಳಿಸಲು ಗ್ರಾಮೀಣ ಭಾಗದ ಎಲ್ಲಾ ಕಡೆ ಕಲೆ ಸಾಹಿತ್ಯ ಸಂಸ್ಕೃತಿಗೆ ಬಹಳಷ್ಟು ಕೊಡಿಗೆ ನೀಡುವಂತಹ ಕೆಲಸ ಈ ಭಾಗದಲ್ಲಿ ಇರುವ ಡಾ. ಅಬ್ದುಲ್ ಕಲಾಂ ಎಸ್ ಪಿ ಚಾರಿಟೇಬಲ್ ಫೌಂಡೇಶನ್ ನಿರಂತರವಾಗಿ ಸಂಸ್ಕೃತಿಯನ್ನು ಉಳಿಸಿಕೊಂಡು ಬರುವಂತಹ ಕೆಲಸವನ್ನು ಮಾಡುತ್ತಿದೆ ಎಂದು ಭಜನೆ ಮತ್ತು ತತ್ವಪದಗಳ ಕಲಾವಿದರಾದ ಬಂಕದ ಸಿದ್ದಪ್ಪ ಹೇಳಿದರು.
ಈ ದಿನದಲ್ಲಿ ಕಲೆ ಸಾಹಿತ್ಯ ಸಂಸ್ಕೃತಿ ಜಾನಪದ ಗೀತೆ ತತ್ವಪದಗಳಿಗೆ ಮನ್ನಣೆ ಬೇಕಾಗಿದೆ ಎಂದು ಅಡಿಗೆ ಸಹಾಯಕರಾದ ಮಾರೇಶ ಅವರು ತಿಳಿಸಿದರು.
ಕಲೆ ಮತ್ತು ಸಾಹಿತ್ಯದ ಅಭಿರುಚಿಯನ್ನು ಪ್ರತಿಯೊಬ್ಬರು ಚಿಕ್ಕ ವಯಸ್ಸಿನಲ್ಲಿ ಅಳವಡಿಸಿಕೊಂಡು ಮುನ್ನುಗ್ಗುವ ಸಾಹಸವನ್ನು ಪ್ರತಿಯೊಬ್ಬರು ಅಳವಡಿಸಿಕೊಳ್ಳಬೇಕು ಎಂದು ಪಿ ಸಾದಾಕಲಿ ಅವರು ತಿಳಿಸಿದರು.
ಯೋಗ ಅಭ್ಯಾಸದಿಂದ ಸರ್ವ ರೋಗಗಳನ್ನು ನಿಯಂತ್ರಿಸುವ ಕೆಲಸವನ್ನು ಯೋಗದಿಂದ ಮಾತ್ರ ಸಾಧ್ಯ ಹಾಗೂ ಪ್ರತಿ ಕುಟುಂಬದಲ್ಲಿ ಅನಾರೋಗ್ಯವನ್ನು ದೂರ ಮಾಡಬೇಕು ಆರೋಗ್ಯಕರವಾಗಿ ಇರಬೇಕೆಂದರೆ ಯೋಗ ಅತ್ಯಂತ ಪ್ರಮುಖವಾಗಿರುವಂಥದ್ದು ಎಂದು ಡಾ. ಪ್ರಹ್ಲಾದ್ ಆರ್ ಹೈಲಿ ಅವರು ತಿಳಿಸಿದರು.
ಮಾನಸಿಕವಾಗಿ ದೈಹಿಕವಾಗಿ ಸದೃಢರಾಗಲು ಯೋಗ ಧ್ಯಾನವನ್ನು ಕೈಗೊಳ್ಳಬೇಕು ಎಂದು ಆಯುಷ್ಮಾನ್ ಇಲಾಖೆ ಯ ಅಧಿಕಾರಿ ಬಸವರಾಜ್ ತಿಳಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮಗಳು ಭಜನಾ ಮತ್ತು ತತ್ವಪದಗಳ ಕಲಾವಿದರಾದ ಬಸವರಾಜ್ ಪಾಂಡುರಂಗ, ರಾಜಾಭಕ್ಷಿ ಯೋಗ ನೃತ್ಯ ಪೀರ್ ಮೊಹಮ್ಮದ್ ತಂಡದವರು ತತ್ವಪದಗಳ ಟಿ. ಸಾಧಕಲಿ ತಂಡದವರು ಸಮೂಹ ನೃತ್ಯ ಚಾಂದ್ ವಿ ತಂಡದವರು ನೆರವೇರಿಸಿದರು. ಊರಿನ ಸರ್ವ ಸಮುದಾಯದ ಸದ್ಭಕ್ತರು ಕಲಾವಿದರು ಸೇರಿದಂತೆ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















