ಬಳ್ಳಾರಿ / ಕಂಪ್ಲಿ: ಪಟ್ಟಣದಿಂದ ಗಂಗಾವತಿ ಕಡೆಗೆ ಸಾಗಿಸುತ್ತಿದ್ದ ಅನ್ನಭಾಗ್ಯ ಯೋಜನೆ ಹಲವಾರು ಮೂಟೆ ಅಕ್ಕಿ, ಸಾಗಾಣಿಕಿಗೆ ಬಳಸಿದ ಟ್ಯಾಕ್ಟರ್ ಹಾಗೂ ಅಕ್ಕಿ ಸಂಗ್ರಹಿಸಿ ಸಾಗಿಸುತ್ತಿದ್ದ ಇಬ್ಬರು ಮಹಿಳೆಯರನ್ನು ಪಟ್ಟಣದ ಗಂಗಾವತಿ ರಸ್ತೆಯ ಕಲ್ಮಠದ ಹತ್ತಿರ ಆಹಾರ ಇಲಾಖೆಯ ಆಹಾರ ನಿರೀಕ್ಷಕ ವಿರೂಪಾಕ್ಷಗೌಡ ಮತ್ತು 112 ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಶುಕ್ರವಾರ ಸಂಜೆ ಖಚಿತ ಮಾಹಿತಿ ಮೇರೆಗೆ ಕಂಪ್ಲಿ ಕಲ್ಮಠದ ಹತ್ತಿರ ಟ್ಯಾಕ್ಟರ್ ನಲ್ಲಿ ಅಕ್ರಮವಾಗಿ ಅನ್ನಭಾಗ್ಯ ಅಕ್ಕಿಯನ್ನು ಸಾಗಿಸುತ್ತಿರುವ ವಾಹನವನ್ನು ವಶಕ್ಕೆ ಪಡೆದಿದ್ದಾರೆ. ಟ್ಯಾಕ್ಟರ್ ನಲ್ಲಿ ಮುವತ್ತು ಅಧಿಕ ಮೂಟೆ ಅನ್ನಭಾಗ್ಯ ಅಕ್ಕಿಯನ್ನು ದುರುಗಮ್ಮ ಮತ್ತು ಮಾರೆಮ್ಮ ಎನ್ನುವವರು ಪಟ್ಟಣದ ಎಂಡಿ ಕ್ಯಾಂಪಿನಲ್ಲಿ ಸಂಗ್ರಹಿಸಿ ಗಂಗಾವತಿಗೆ ಸಾಗಿಸುವಾಗ ವಶಪಡಿಸಿಕೊಂಡಿದ್ದು, ಅಕ್ರಮ ಅನ್ನಭಾಗ್ಯ ಅಕ್ಕಿ, ವಾಹನ ಹಾಗೂ ಇಬ್ಬರು ಮಹಿಳೆಯರನ್ನು ವಶಪಡಿಸಿಕೊಂಡಿದ್ದು, ಕಂಪ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಸಂದರ್ಭದಲ್ಲಿ ಆಹಾರ ಇಲಾಖೆ ನಿರೀಕ್ಷಕ ವಿರುಪಾಕ್ಷಗೌಡ, ಪೊಲೀಸ್ ಸಿಬ್ಬಂದಿಗಳು ಇದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















