ನಂಜನಗೂಡು : ಪಟ್ಟಣದ ದಳವಾಯಿ ಸರಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ 12ನೇ ಅಂತರಾಷ್ಟ್ರೀಯ ಧ್ಯಾನ, ಯೋಗ ದಿನಾಚರಣೆಯನ್ನು ಆಚರಿಸಲಾಯಿತು. ಮಕ್ಕಳಿಗೆ ಹಲವು ಯೋಗಭ್ಯಾಸಗಳನ್ನು, ಮತ್ತು ಧ್ಯಾನವನ್ನು ಪ್ರಾಯೋಗಿಕವಾಗಿ ಮಾಡಿಸಲಾಯಿತು. ಮಕ್ಕಳೆಲ್ಲರೂ ಉತ್ಸಾಹದಿಂದ ಯೋಗ ದಿನಾಚರಣೆಯಲ್ಲಿ ಪಾಲ್ಗೊಂಡಿದ್ದರು. ಶಾಲೆಯ ಮುಖ್ಯೋಪಾಧ್ಯಾಯರಾದ ರೇಚಣ್ಣ ಅವರು ಮಕ್ಕಳನ್ನು ಉದ್ದೇಶಿಸಿ ಮಾತನಾಡಿ ಯೋಗ ಹಾಗೂ ಧ್ಯಾನಾಭ್ಯಾಸವು ಜೀವನಕ್ಕೆ ಅತಿ ಉಪಯೋಗ ವಾಗಿದ್ದು ಮಕ್ಕಳು ಬಾಲ್ಯದಲ್ಲಿ ಧ್ಯಾನ ಯೋಗಭ್ಯಾಸವನ್ನು ಮಾಡಿದರೆ ಜೀವನ ಆರೋಗ್ಯದಿಂದ ಹಾಗೂ ಸುಖಮಯವಾಗಿರುತ್ತದೆ ಎಂದರು. ಜೂನ್ 21 ದೀರ್ಘಕಾಲದ ಹಗಲಾಗಿದ್ದು ಸೂರ್ಯ ನಮಸ್ಕಾರಕ್ಕೆ ಒಳ್ಳೆಯ ದಿನವೆಂದರು. ನೀವು ಪ್ರತಿನಿತ್ಯ ವಾಕಿಂಗ್ ಮಾಡುವುದು, ಯೋಗ ಮಾಡುವುದು, ಧ್ಯಾನ ಮಾಡುವುದನ್ನು ಅಭ್ಯಾಸ ಮಾಡಿಕೊಳ್ಳಿ ಎಂದು ಮಕ್ಕಳಿಗೆ ಮಾರ್ಗದರ್ಶನ ನೀಡಿದರು. ಈ ಸಂದರ್ಭದಲ್ಲಿ ಶಾಲೆಯ ದೈಹಿಕ ಶಿಕ್ಷಕರಾದ ಕಾಮಣ್ಣ ಸೇರಿದಂತೆ ಎಲ್ಲಾ ಸಹ ಶಿಕ್ಷಕಿಯರು ಹಾಜರಿದ್ದರು.
- ಕರುನಾಡ ಕಂದ ಸುದ್ದಿ




















