ಮುದ್ದೇಬಿಹಾಳ ಸುದ್ದಿ : ಪ್ರಸ್ತುತ ಇಂದಿನ ಆಧುನಿಕ ತಂತ್ರಜ್ಞಾನ ಮತ್ತು ಸ್ಪರ್ಧಾತ್ಮಕ ಯುಗದಲ್ಲಿ ನಮ್ಮ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣದ ಜೊತೆಗೆ ಸಂಸ್ಕಾರ ಮುಖ್ಯ ಎಂದು ಕಾಂಗ್ರೆಸ್ ಮುಖಂಡರಾದ ವಾಯ್ ಹೆಚ್ ವಿಜಯಕರ್ ಹೇಳಿದರು.
ಮುದ್ದೇಬಿಹಾಳ ನಗರದ ಅಂಬೇಡ್ಕರ್ ಭವನದಲ್ಲಿ ನಡೆದ ಅಖಿಲ ಕರ್ನಾಟಕ ಹೆಳವ ಸಮಾಜ ವಿಜಯಪುರ ಜಿಲ್ಲಾ ಘಟಕದಿಂದ ಹಮ್ಮಿಕೊಂಡಿದ್ದ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದು ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಸಮಾರಂಭ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಪೂಜ್ಯ ಶ್ರೀ ಬಸವ ಭೃಂಗೇಶ್ವರ ಮಹಾ ಸ್ವಾಮಿಗಳು, ಹಾಗೂ ಬಸವರಾಜ ಗುರೂಜಿ ಯವರು ಜ್ಯೋತಿ ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
2025-26 ನೇ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದು ಉತ್ತೀರ್ಣರಾದ 28 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಜೊತೆಗೆ ನಿವೃತ್ತ ನೌಕರರಿಗೆ ಗೌರವಿಸಲಾಯಿತು.
ಜೊತೆಗೆ ಪ್ರಸ್ತುತ 10 ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಒಟ್ಟು 20 ವಿದ್ಯಾರ್ಥಿಗಳಿಗೆ ನಿಂಗಣ್ಣ ಬಿಳೆಬಾವಿಯವರು ಉಚಿತವಾಗಿ ನೀಡಿರುವ 2000 ರೂಪಾಯಿ ಮುಖಬೆಲೆಯ 03 ಪುಸ್ತಕಗಳನ್ನು ನೀಡಲಾಯಿತು.
ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಮೂಲಕ ಅತೀ ಹಿಂದುಳಿದ ಹೆಳವ ಸಮಾಜ ಮುಖ್ಯ ವಾಹಿನಿಗೆ ಬರುವಂತಾಗಬೇಕು ಎಂದು ದೇವರ ಹಿಪ್ಪರಗಿ ಮತಕ್ಷೇತ್ರದ ಬಿಜೆಪಿ ಮುಖಂಡ ಬಸನಗೌಡ ಯಡಿಯಾಪುರ ಮಾತನಾಡಿದರು. ಕರ್ನಾಟಕ ಎನ್ ಎಸ್ ಯು ಐ ರಾಜ್ಯ ಪ್ರಧಾನ ಕಾರ್ಯದರ್ಶಿ ಸದ್ದಾಂ ಕುಂಟೋಜಿ, ಪಿಎಸ್ಐ ಸಂಜಯ್ ತಿಪರಡ್ಡಿ, ಉಪನ್ಯಾಸಕರಾದ ಬಸವರಾಜ ಹಂಚಲಿ, ಜಿಲ್ಲಾಧ್ಯಕ್ಷರಾದ ಬಾಬು ಹೆಳವರ ಮಾತನಾಡಿದರು. ಗದಗ ಜಿಲ್ಲಾಧ್ಯಕ್ಷರಾದ ಕೆಂಚಪ್ಪ ಹೆಳವರ, ಕಲಬುರ್ಗಿ ಜಿಲ್ಲಾಧ್ಯಕ್ಷರಾದ ಸಾಯಬಣ್ಣ ಹೆಳವರ, ಯಾದಗಿರಿ ಜಿಲ್ಲಾಧ್ಯಕ್ಷರಾದ ಹಣಮಂತರಾಯ ಹಳಿಸಗರ,ಬಾಗಲಕೋಟೆ ಜಿಲ್ಲಾಧ್ಯಕ್ಷರಾದ ಅಶೋಕ್ ಹಾಲಿಗೇರಿ, ನಿಂಗಣ್ಣ ಬಿಳೇಬಾವಿ, ಪರಶುರಾಮ ಅಂಗಡಿ, ಮಲ್ಲಿಕಾರ್ಜುನ ಖಾನಾಪುರ, ಬಸವರಾಜ ಯಾಳಗಿ, ಶ್ರೀಮಂತ ಸೌಂದರ್ಗೆ, ಶರಣಪ್ಪ ಸಾರಥಿ ವೇದಿಕೆ ಮೇಲಿದ್ದರು.
ಈ ಸಂದರ್ಭದಲ್ಲಿ ನಿವೃತ್ತ ನೌಕರರಾದ ಪವಾಡೆಪ್ಪ ಹೆಳವರ,
ರಾಮಣ್ಣ ಬೀರಲದಿನ್ನಿ,
ಅಶೋಕ ಪವಾರ್,
ಸಂಗಮೇಶ ವಂದಾಲ,
ಭೀಮಣ್ಣ ಗುಡಿಮನಿ ಬಿಸಿಎಂ ಇಲಾಖೆ,
ಪರಸುರಾಮ ಹೆಳವರ,
ಮಂಜುನಾಥ ವಂದಾಲ,
ಸಿದ್ದು ಕಕ್ಕೇರಿ, ಹಿರಿಯರಾದ ಹೆಚ್ ಎನ್ ಗೋಗಿ, ಬಸಣ್ಣ ಹಟ್ಟಿ, ಮಹಾಂತೇಶ ಹೆಳವರ ಇಟಗಿ, ಕುಮಾರ ಮುಗಳೊಳ್ಳಿ, ಮಹಾಂತೇಶ ವಂದಾಲ, ಶಿವು ಹೆಳವರ ಲಕ್ಕುಂಡಿ, ಪ್ರಶಾಂತ ಹೆಳವರ ಲಕ್ಕುಂಡಿ, ಸತೀಶ ಮಡಿಕೇಶ್ವರ, ಚಂದಪ್ಪ ಕಕ್ಕೇರಿ,ದತ್ತು ಇಂಡಿ, ವೆಂಕಟೇಶ್ ಬೈರಾಮಡಗಿ, ಅಶೋಕ್ ಖಾನಾಪುರ ಸೇರಿದಂತೆ ಇತರರು ಇದ್ದರು.
ಸಂಗಮೇಶ ಐಹೊಳೆ ನಿರೂಪಿಸಿದರು, ಮಹಾಂತೇಶ ಹೆಳವರ ಇಟಗಿ ಹಾಗೂ ರಾಘವೇಂದ್ರ ಮಾಸ್ತರ ಸ್ವಾಗತಿಸಿ ವಂದಿಸಿದರು.
- ಕರುನಾಡ ಕಂದ ಸುದ್ದಿ




















