ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಎರಡು ಹೊತ್ತು ಊಟ, ಒಂದು ಮೊಬೈಲ್ ಮತ್ತು ಅನಿಶ್ಚಿತ ಭವಿಷ್ಯ

ಕೊರೋನೋತ್ತರ ಅವಧಿಯ ಶಾಲಾ-ಕಾಲೇಜುಗಳಲ್ಲಿ ಗಮನಾರ್ಹವಾದ ಪ್ರವೃತ್ತಿಯನ್ನು ಗಮನಿಸಬಹುದು. ವಿದ್ಯಾರ್ಥಿಗಳಿಗೆ ಎರಡು ಹೊತ್ತು ಊಟ ಮತ್ತು ಅನ್ಸಿಮಿಟೆಡ್ ಇಂಟರ್ನೆಟ್ ಡಾಟಾ ಸಹಿತ ಮೊಬೈಲನ್ನು ನೀಡಿದರೆ, ಅವರಷ್ಟು ಸುಖಿಗಳು ಯಾರು ಇಲ್ಲ ಎಂದು ತೋರುವ ಹಾಗೆ ಕಾಣಿಸುತ್ತಾರೆ. ಆದರೆ ಅವರು ತಮ್ಮ ಕಲಿಕೆಯ ಮತ್ತು ಭವಿಷ್ಯದ ಬಗ್ಗೆ ಚಿಂತನೆ ಅಥವಾ ಅವರ ಗುರಿಗಳನ್ನು ನೆನೆಸಿಕೊಳ್ಳುತ್ತಿದ್ದಾರೆಯೇ ಎಂಬುದು ಕಾಲೇಜಿನ ಬೋಧಕರಿಗೆ ಮತ್ತು ಪಾಲಕರಿಗೆ ಮುಂದಿನ ಅತಿದೊಡ್ಡ ಪ್ರಶ್ನೆ, ತೋರಿಕೆಗೆ ವಿದ್ಯಾರ್ಥಿಗಳು ಉಲ್ಲಾಸ ಹಾಗೂ ಸಂತೋಷದಿಂದ ಇದ್ದಾರೆ ಎಂಬುದಾಗಿದ್ದರೂ, ಅವರ ಹಿಂದೆ ಬೋಧಕರ ಹಾಗೂ ಹೆತ್ತವರ ಮನದಲ್ಲಿ ಮೌನ ಹಾಗೂ ಸಂಕಟವು ಉಳಿದಿರುತ್ತದೆ.

ಕಳೆದ ಎರಡೂರು ವರ್ಷಗಳ ಹಿಂದೆ ಲಾಕ್ ಡೌನ್ ಸಮಯದಲ್ಲಿ ಮೊಬೈಲ್‌ಗಳು ಭೌತಿಕ ತರಗತಿಗಳಿಗೆ ಪರ್ಯಾಯವಾದ ವ್ಯವಸ್ಥೆಯಾಗಿತ್ತು. ಮೊಬೈಲ್ ಗಳಲ್ಲಿ ಕಿರು ವಿಡಿಯೋಗಳು, ಆಥೈನ್ ಗೇಮ್‌ಗಳು, ರೀಲ್ಸ್ಗಳು ಹಾಗೂ ಇತರೆ ತ್ವರಿತ ಮನರಂಜನಾ ವಿಧಾನಗಳಿಗೆ ವಿದ್ಯಾರ್ಥಿಗಳು ಮಾರು ಹೋಗಿದ್ದರು ಮತ್ತು ತಮ್ಮ ಹೆಚ್ಚಿನ ವೇಳೆಯನ್ನು ಇದರೊಂದಿಗೆ ಕಳೆದಿರುವುದು ನಮ್ಮೆಲ್ಲರ ಅನುಭವಕ್ಕೆ ಬಂದಿದೆ. ಇದರ ಪರಿಣಾಮ ಪುಸ್ತಕಗಳು ಮರೆಯಾಗುವುದು ಮತ್ತು ವಿದ್ಯಾರ್ಥಿಗಳು ಓದುವುದನ್ನು ಮರೆಯುವುದು ಸಾಮಾನ್ಯವಾಗಿದೆ. ಶೈಕ್ಷಣಿಕ ಹಿನ್ನೆಡೆ, ಭವಿಷ್ಯತ್ತಿನ ಯೋಜನೆ ಇಲ್ಲದಿರುವುದು, ಜೀವನ ಕೌಶಲದ ಕೊರತೆ. ಕೌಟುಂಬಿಕ ಸಂಬಂಧಗಳ ಮತ್ತು ಗೌರವಕ್ಕೆ ಹಾನಿ ಹೀಗೆ ಹತ್ತು ಹಲವು ದೋಷಗಳು ನಮ್ಮ ಅರಿವಿಗೆ ಬಂದಿವೆ. ಇಂದು ಮೊಬೈಲ್ ಜೊತೆ ಸಂತೋಷವಾಗಿರುವ ಇಂದಿನ ಪೀಳಿಗೆ ನಾಳೆ ಎಲ್ಲೋ ಬೇಗನೆ ಕಳೆದು ಹೋಗೋದಂತು ಖಾತರಿ ಹಾಗೂ ಕಳೆಯುವ ಆತಂಕದಲ್ಲಿ ಇಂದು ನಾವಿದ್ದೇವೆ.

ಒಂದು ದಿನದ ಬಹುತೇಕ ಸಮಯವನ್ನು ಮೊಬೈಲ್ ಗೇಮ್ ಗಳಲ್ಲಿ, ಸಾಮಾಜಿಕ ಮಾಧ್ಯಮಗಳಲ್ಲಿ, ಯೂಟ್ಯೂಬ್, ರೀಲ್ಸ್‌ಗಳಲ್ಲಿ,ಅಶ್ಲೀಲ ವಿಡಿಯೋ ನೋಡುವುದರಲ್ಲಿ ಸಮಯವನ್ನು ಕಳೆಯುವ ಇಂದಿನ ಯುವ ಪೀಳಿಗೆಗೆ ಆನೈನ್‌ನಲ್ಲಿ ಏನು ಜಯ ಗಳಿಸಿದ್ದೇವೆ ಮತ್ತು ಸಾಧಿಸಿದ್ದೇವೆ ಎಂಬ ಹುಸಿ ಖುಷಿಯಲ್ಲಿ ದಿನಗಳನ್ನು ಕಳೆಯುತ್ತಿರುವುದು ನಾವು ಇಂದು ಕಾಣುತ್ತಿದ್ದೇವೆ. ಆದರೆ ನೈಜ ಜೀವನದಲ್ಲಿ ವಿದ್ಯಾಭ್ಯಾಸ, ಎದುರಾಗುವ ಪರೀಕ್ಷೆಗಳು, ಭವಿಷ್ಯತ್ತಿನ ಯೋಜನೆ ಮತ್ತು ಯೋಚನೆ ಇನ್ನೂ ಮುಂತಾದವುಗಳಲ್ಲಿ ಅಸಹಾಯಕರಾಗಿದ್ದಾರೆ. ಪೋಷಕರು ಕೊರೋನ ಅವಧಿಯಲ್ಲಿ ಭೌತಿಕ ತರಗತಿಗಳಿಗೆ ಪರ್ಯಾಯವೆಂದು ಮೊಬೈಲ್‌ಗಳನ್ನು ತಮ್ಮ ಮಕ್ಕಳಿಗೆ ಕೊಡಿಸಿ ವಿದ್ಯಾರ್ಥಿಗಳು ಅದರಲ್ಲಿ ತಲ್ಲೀನರಾಗಿರುವುದನ್ನು ನೋಡಿ ತೃಪ್ತರಾಗಿದ್ದಿರಬಹುದು. ಆದರೆ ಆ ಬಳಿಕ ತಮ್ಮ ಮಕ್ಕಳು ಅವರ ವಿದ್ಯಾಭ್ಯಾಸದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಇಲ್ಲ ಹಾಗೂ ತಮ್ಮ ಹೊಣೆಗಾರಿಕೆಗೆ ಸಿದ್ಧರಿಲ್ಲ ಎಂಬುದನ್ನು ಅರಿತ ಮೇಲೆ ಆತಂಕಗೊಂಡಿರುವುದು ನೋಡಿದ್ದೇವೆ ಮತ್ತು ಪೋಷಕರಾಗಿ ನಾವು ಅನುಭವಿಸಿದ್ದೇವೆ. ಮತ್ತೊಂದೆಡೆ ಮೊಬೈಲ್ ಬಳಕೆಯಿಂದ ಆನೈನ್ ಕೋರ್ಡ್ಗಳು ಅಥವಾ ಕೌಶಲ್ಯವನ್ನು ಬಳಸಿ ವಿದ್ಯಾಜ್ಞಾನ: ಆತ್ಮವಿಶ್ವಾಸ ಮತ್ತು ಭವಿಷ್ಯದ ಸ್ಪಷ್ಟತೆಯನ್ನು ಪಡೆಯುತ್ತಾರೆ ಎಂಬುದು ಸತ್ಯವಾದರೂ, ತಂತ್ರಜ್ಞಾನವು ಬಲವರ್ಧಕವಾಗುತ್ತಾ ಅಥವಾ ಅವರ ಜೀವನಕ್ಕೆ ನಿರ್ಬಂಧಕವಾಗುತ್ತಾ ಎಂಬುದು ಮೊಬೈಲ್ ಬಳಕೆಯ ಮೇಲೆ ಅವಲಂಬಿತವಾಗಿರುತ್ತದೆ. ಮೊಬೈಲ್ ಬಳಕೆ ಎಷ್ಟು, ಏನು ಮತ್ತು ಹೇಗೆ ಎಂಬುದನ್ನು ಮರೆತರೆ ಅದು ಎಷ್ಟು ಮಾರಕ ಎಂಬುದನ್ನು ಯೋಚಿಸುವ ಅಗತ್ಯತೆಯು ಇದೆ.

ಒಮ್ಮೆ ನಾನು ಉಪ್ಪಿನಂಗಡಿಯಿಂದ ಬೆಂಗಳೂರಿಗೆ ಬಸ್ಸಿನಲ್ಲಿ ಪ್ರಯಾಣಿಸುತ್ತಿರುವಾಗ ಪಕ್ಕದ ಸೀಟಿನಲ್ಲಿ ಒಂದು ದಂಪತಿ ಮತ್ತು ಇಬ್ಬರು ಮಕ್ಕಳು ಕೂತಿದ್ದರು. ಉಪ್ಪಿನಂಗಡಿಯಿಂದ ಕುಣಿಗಲ್‌ವರೆಗೆ ಸುಮಾರು ನಾಲೈದು ತಾಸುಗಳಷ್ಟು ಈ ಇಬ್ಬರು ಮಕ್ಕಳು ತಮ್ಮ ತಮ್ಮ ಮೊಬೈಲ್‌ಗಳಲ್ಲಿ ಬ್ಯುಸಿಯಾಗಿ ಒಬ್ಬರಿಗೊಬ್ಬರು ಮಾತನಾಡದೆ ಮೊಬೈಲ್ಗಳಲ್ಲಿ ತಲ್ಲೀನರಾಗಿರುವ ದೃಶ್ಯ ಈಗಲೂ ನನ್ನ ಮನಸ್ಸಿನಲ್ಲಿದೆ. ಈ ಸಮಯದಲ್ಲಿ ಹೆತ್ತವರ ಮತ್ತು ಮಕ್ಕಳೊಡನೆ ಇರುವ ಸಂಬಂಧಕ್ಕೆ ಅರ್ಥವೇ ಇಲ್ಲದಾಗಿದೆ.

ಕೇರಳದ ತಿರುವನಂತಪುರಂನಲ್ಲಿ ಮೊಬೈಲ್ ಗಳಿಗೆಗೆ ಅಂಟಿಕೊಂಡ ಹನ್ನೊಂದನೇ ತರಗತಿಯ ವಿದ್ಯಾರ್ಥಿ ಆತ್ಮಹತ್ಯೆ ಶರಣಾಗಿರುವುದು ದಿ ಹಿಂದೂ ಪತ್ರಿಕೆಯಲ್ಲಿ ವರದಿಯಾಗಿದೆ. (ಜೂನ್ 5, 2022)

ಕರ್ನಾಟಕ ರಾಜ್ಯ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಇಲಾಖೆಯ ಸರ್ವೆ, 20223ರ ಪ್ರಕಾರ ಕರ್ನಾಟಕದಲ್ಲಿ ಸುಮಾರು 1.73 ಲಕ್ಷ ವಿದ್ಯಾರ್ಥಿಗಳು ಅತಿಯಾದ ಮೊಬೈಲ್ ಬಳಕೆಯಿಂದ ಉಂಟಾಗುವ ದುಷ್ಪರಿಣಾಮಗಳಿಗೆ ಬಲಿಪಶುಗಳಾಗಿದ್ದಾರೆ ಎಂಬ ಅಂಕಿ ಅಂಶ ದಿ ಹಿಂದೂ ಪತ್ರಿಕೆಯಲ್ಲಿ ವರದಿಯಾಗಿದೆ. (ಅಕ್ಟೋಬರ್ 22, 2023)

ಮೊಬೈಲ್‌ಗೆ ಬಲಿಯಾದ ವಿದ್ಯಾರ್ಥಿ, ತನ್ನ ತಂದೆ-ತಾಯಿಗಳು ಪ್ರಶ್ನಿಸಿದ್ದಕ್ಕೆ ಮನೆ ತೊರೆದು ಹೋಗಿರುವ ಮತ್ತು ಆರು ತಿಂಗಳ ನಂತರ ಆ ವಿದ್ಯಾರ್ಥಿ ಉಡುಪಿಯ ಬೀದಿಗಳಲ್ಲಿ ಅನಾಥವಾಗಿ ಅಲೆದಾಡುತ್ತಿದ್ದಿದ್ದು ಟೈಮ್ ಆಫ್ ಇಂಡಿಯಾ . ( 19,2025)

ಮಧ್ಯ ಪ್ರದೇಶದ ಯುವಕನು ಮೊಬೈಲ್‌ನಲ್ಲಿನ ಪಬ್ಬಿಗೇಮ್ಗೆ ಬಲಿಯಾಗಿ ತನ್ನ ತಂದೆಯ ಉಳಿತಾಯದ 16ಲಕ್ಷ ಹಣವನ್ನು ಹಾನಿ ಮಾಡಿದ್ದು ಮತ್ತು ಪಬ್ಬಿ ಗೇಮ್‌ ನಿಂದ ಕೆಲ ಮಕ್ಕಳು ತಮ್ಮ ಪ್ರಾಣ ಕಳೆದುಕೊಂಡಿರುವ ಸುದ್ದಿಗಳು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಮೊಬೈಲ್ ಪ್ರಭಾವದಿಂದ ಅನೇಕ ವಿದ್ಯಾರ್ಥಿಗಳು ಶಾಲಾ-ಕಾಲೇಜುಗಳಿಂದ ಡ್ರಾಪ್‌ಟ್‌ಗಳಾಗಿರುವ ವರದಿಯನ್ನು ನಾವು ಓದಿರುತ್ತೇವೆ. ಹೀಗೆ ವಾಟ್ಸಾಪ್, ಯೂಟ್ಯೂಬ್, ಫೇಸ್ಟುಕ್, ರೀಲ್ಸ್ ಹಾಗೂ ಇತರೆ ಸಾಮಾಜಿಕ ಮಾಧ್ಯಮಗಳಿಗೆ ಅಂಟಿಕೊಂಡು ತಮ್ಮನ್ನು ತಾವೇ ಕಳೆದುಹೋಗುವುದು ಶಾಲಾ-ಕಾಲೇಜುಗಳಲ್ಲಿ ಸಾಮಾನ್ಯವಾಗಿ ಇಂದು ಕಂಡು ಬರುವ ದೃಶ್ಯವಾಗಿದೆ. ಕಾಲೇಜಿನ ಕ್ಯಾಂಪಸ್‌ನಲ್ಲಿ ಈ ದೃಶ್ಯಗಳ ವಿರುದ್ಧ ಶಿಕ್ಷಕರು ಪ್ರತಿಭಟಿಸಿದರೆ ಅವರು ಖಳನಾಯಕರಾಗುತ್ತಾರೆ ಮತ್ತು ವಿದ್ಯಾರ್ಥಿಗಳು ಹಲ್ಲೆಗೆ ತುತ್ತಾಗಿರುವ ವರದಿಯನ್ನು ಅನೇಕ ಪತ್ರಿಕೆಗಳಲ್ಲಿ ವರದಿಯಾಗಿರುವುದನ್ನು ನೋಡಿರುತ್ತೇವೆ. ಈ ಮೇಲಿನ ಸನ್ನಿವೇಶಗಳನ್ನು ಗಮನಿಸುವುದಾದರೆ ಪ್ರಸ್ತುತ ಮೊಬೈಲ್ ಜೀವನದ ತಾತ್ಕಲಿಕ ಸಂತೋಷದಿಂದ ಭವಿಷ್ಯತ್ತಿನ ಜವಾಬ್ದಾರಿಯ ನಮ್ಮ ವಿದ್ಯಾರ್ಥಿಗಳು ಕುರುಡರಾಗಿ ಪರಿವರ್ತನೆಗೊಳ್ಳುವದಂತೂ ನಿಜ. ಅತಿಯಾದ ಮೊಬೈಲ್ ಬಳಕೆಯಿಂದ ಇಂದಿನ ಯುವ ಪೀಳಿಗೆ ಸಂವೇದನರಹಿತರಾಗಿ, ಮಾನಸಿಕ ಮತ್ತು ದೈಹಿಕ ಅಸ್ವಸ್ಥರಾಗಿ, ಕಲಿಕೆಯಲ್ಲಿ ಹಿಂದುಳಿದು ತೀರ್ಮಾನ ಕೈಗೊಳ್ಳುವಿಕೆಯಲ್ಲಿ ಆಸಕ್ತರಾಗಿ, ಮಾನಸಿಕ ಖಿನ್ನತೆಗೆ ಒಳಗಾಗಿ, ಒತ್ತಡಗಳನ್ನು ನಿಭಾಯಿಸುವಲ್ಲಿ ವಿಫಲರಾಗಿ, ಮನೆ ತೊರೆದು ಹಾಗೂ ಆತ್ಮಹತ್ಯೆ ಇನ್ನಿತರ ನಿರ್ಧಾರಗಳನ್ನು ಕಳೆದು ಮುಂದಿನ ಜೀವನದ ಬಗ್ಗೆ ಯೋಚನೆ ಹಾಗೂ ಯೋಜನೆ ಮಾಡಲಾರದೆ, ಕೌಟುಂಬಿಕ ಹಾಗೂ ಇತರೆ ಸಂಬಂಧಗಳ ಮೌಲ್ಯವನ್ನು ಮರೆತು ಜೀವನದಲ್ಲಿ ವಿಫಲರಾಗುತ್ತಾರೆ. ಕೊರೋನೋತ್ತರ ಅವಧಿಯ ವಿದ್ಯಾರ್ಥಿಗಳು ತಂತ್ರಜ್ಞಾನದಲ್ಲಿ ಪರಿಣಿತರಾಗಿರುತ್ತಾರೆ. ಆದರೆ ಕಲಿಕೆಗೆ ಹಾಗೂ ಭವಿಷ್ಯಕ್ಕೆ ಬೇಕಾಗುವುದನ್ನು ನಿರ್ಲಕ್ಷಿಸಿ ಮಾರಕವಾದದ್ದನ್ನು ಪಡೆದುಕೊಳ್ಳುವುದರಿಂದ ಅವರು ನಾಳೆಯ ಹೊಣೆಗಾರಿಕೆಯಿಂದ
ತಪ್ಪಿಸಿಕೊಳ್ಳುತ್ತಾರೆ. ಇದರ ಪರಿಣಾಮ ಮುಂದಿನ ಪೀಳಿಗೆಯನ್ನು ಕಳೆದುಕೊಳ್ಳುವ ನತದೃಷ್ಟ ಹೆತ್ತವರು ಮತ್ತು ಕುಟುಂಬ, ಶಿಕ್ಷಕರು, ಅಧಿಕಾರಿಗಳು, ಮತ್ತು ರಾಜಕಾರಣಿಗಳು ನಾವಾಗಿರುತ್ತೇವೆ.
ಮೊಬೈಲ್‌ಗಳನ್ನು ಎಷ್ಟು, ಹೇಗೆ, ಏನು, ಮತ್ತು ಎಲ್ಲಿ ಬಳಸಬೇಕೆಂಬ ಅರಿವನ್ನು ಮೂಡಿಸಲು ಅನೇಕ ಶಿಬಿರಗಳು, ವಿಶೇಷ ತರಗತಿಗಳು, ಹಾಗೂ ಚರ್ಚೆಗಳಲ್ಲಿ ವಿದ್ಯಾರ್ಥಿಗಳಿಗೆ ಭಾಗವಹಿಸುವಂತೆ ಪ್ರೇರೇಪಿಸಿ ನಿಜವಾದ ಅರ್ಥವನ್ನು ವಿದ್ಯಾರ್ಥಿಗಳಿಗೆ ಮಾಡಿಸಬೇಕು. ಪೋಷಕರು ಯಾವ ವಯಸ್ಸಿನಲ್ಲಿ ಮಕ್ಕಳಿಗೆ ಮೊಬೈಲ್‌ಗಳನ್ನು ನೀಡಬೇಕೆಂಬುದು ಬಹಳ ಮುಖ್ಯವಾದ ವಿಷಯ. ಶಾಲಾ-ಕಾಲೇಜುಗಳಲ್ಲಿ ಶಿಕ್ಷಕರು ಸಹ ವಿದ್ಯಾರ್ಥಿಗಳಿಗೆ ಮೊಬೈಲ್ ಆಧಾರಿತ ಪಾಠ ಮತ್ತು ಚಟುವಟಿಕೆಗಳನ್ನು ಮಾಡಿಸುವ ಮೊಬೈಲ್‌ಗಳನ್ನು ತರುವ ಅವಶ್ಯಕತೆ ಬಗ್ಗೆ ಮುಕ್ತವಾಗಿ ವಿದ್ಯಾರ್ಥಿಗಳೊಂದಿಗೆ ಚರ್ಚಿಸಬೇಕು. ಹೆಚ್ಚಿನ ಅಮೃತವು ವಿಷವಾದಂತೆ ಹೆಚ್ಚಿನ ಮೊಬೈಲ್ ಬಳಕೆಯೂ ಸಹ ವಿಷವಾಗುವ ಮೊದಲು ಪೋಷಕರು ಮತ್ತು ಕುಟುಂಬ ಹಾಗೂ ಶಿಕ್ಷಕ ವರ್ಗ ಸಹ ಜಾಗೃತೆಯನ್ನು ವಹಿಸಬೇಕಾದ ಅನಿವಾರ್ಯತೆ ಈಗ ಇದೆ. ಇದನ್ನು ನಿರ್ಲಕ್ಷಿಸಿದರೆ ಮುಂದೊಂದು ದಿನ ಮಧ್ಯಪಾನ ಹಾಗೂ ಇತರೆ ದುಷ್ಟಟಗಳನ್ನು ತೊಲಗಿಸುವ ಕೇಂದ್ರಗಳ ಹಾಗೆ ಮೊಬೈಲ್‌ಗಳಿಂದ ದೂರವಿರುವ ತರಬೇತಿ ಕೇಂದ್ರಗಳನ್ನು ತೆರೆಯುವ ದಿನಗಳು ದೂರವಿಲ್ಲ. ಇಂತಹ ಸನ್ನಿವೇಶ ಮುಂದೆ ಬಾರದಿರಲಿ ಎಂಬುದನ್ನು ಆಶಿಸೋಣ.

  • ಶ್ರೀ ಬಾಲಾಜಿ ಎಂ ಪಿ ಸಹಾಯಕ ಪ್ರಾಧ್ಯಾಪಕರು ಆಂಗ್ಲ ಭಾಷೆ ವಿಭಾಗ,
    ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕಂಪ್ಲಿ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!