ಮೂಲೆಯಲಿ ಕಂಡೆ ಕೇಸರಿಯ ಕಿತ್ತಳೆ ಸಿಪ್ಪೆಯನು
ಕತ್ತರಿಸಿ ಜೋಡಿಸಿದೆ ಕಟ್ಟೆಯಲಿ ಅದನು
ಅಡ್ಡಲಾಗಿ ಇಟ್ಟೆ ಬಿದಿರು ಕಡ್ಡಿಯೊಂದನು
ಅಲಂಕರಿಸಿದೆ ಜೊತೆಗೆ ಕುಂಬಳ ಬೀಜಗಳನು
ನೋಡುತಲಿ ಅರಳಿತೊಂದು ಸುಲಲಿತ ಚಿತ್ತಾರವು
ಪದ ಪುಂಜಗಳ ಜೋಡಿಸಲು ಮೂಡಿತೊಂದು ಕಾವ್ಯವು
ಹೇಳಿತು ತಲುಪಿಸಲು ಸುಮನಗಳಿಗೆ ಸುಮನವು
ಬರುತಲಿದೆ ನಲ್ಮೆಯ ಒಲ್ಮೆಯ ಶುಭೋದಯವು
- ಲಲಿತಾ ಕೆ ಅಚಾರ್, ಬೆಂಗಳೂರು




















