ಬಳ್ಳಾರಿ / ಕಂಪ್ಲಿ: ತಾಲೂಕಿನ ಸಣಾಪುರ ಗ್ರಾ. ಪಂ. ಯ ಅರಳಿಹಳ್ಳಿ ತಾಂಡದಲ್ಲಿ 2026-27ನೇ ಸಾಲಿನ ತಾಂಡ ಅಭಿವೃದ್ಧಿ ನಿಗಮದ ಸುಮಾರು 20 ಲಕ್ಷ ವೆಚ್ಚದಲ್ಲಿ ನಿರ್ಮಿಸಲಿರುವ ಸಿಸಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಸ್ಥಳೀಯ ಮುಖಂಡರು ಶಂಕುಸ್ಥಾಪನೆ ನೆರವೇರಿಸಿದರು.
ನಂತರ ಮುಖಂಡ ಕೆ.ಲಿಂಗಪ್ಪ ಮಾತನಾಡಿ, ಅರಳಿಹಳ್ಳಿ ತಾಂಡಕ್ಕೆ ಹೆಚ್ಚಿನ ಮುತುವರ್ಜಿ ವಹಿಸಿ, ಸಾಕಷ್ಟು ಅಭಿವೃದ್ಧಿ ಕಾರ್ಯಗಳೊಂದಿಗೆ ಸೌಲಭ್ಯಗಳನ್ನು ಕಲ್ಪಿಸುತ್ತಿದ್ದಾರೆ. ಈಗ ಸಿಸಿ ರಸ್ತೆ ಅಭಿವೃದ್ಧಿ ಚಾಲನೆ ಸಿಕ್ಕಿದೆ. ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿಯನ್ನು ಕಾಲ ಮಿತಿಯಲ್ಲಿ ಪೂರ್ಣಗೊಳಿಸಬೇಕು. ಕ್ಷೇತ್ರದಲ್ಲಿ ಜನಪರ ಸೇವೆಯೊಂದಿಗೆ ಮೂಲಸೌಕರ್ಯ ಕಲ್ಪಿಸಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಮುಖಂಡರಾದ ಪೇಂಟರ್ ಮಸ್ತಾನ್, ಎ.ಕೆ.ಗವಿಸಿದ್ದಪ್ಪ, ಇಟಗಿ ವಿರೇಶ ಸೇರಿದಂತೆ ಸ್ಥಳೀಯರಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















