ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕಂಪ್ಲಿಯಲ್ಲಿ ಶ್ರೀ ಸತ್ಯನಾರಾಯಣ ಸ್ವಾಮಿ ದೇವಸ್ಥಾನದ 57ನೇ ವಾರ್ಷಿಕೋತ್ಸವ : ಲೋಕಲ್ಯಾಣಕ್ಕಾಗಿ ವಿಶೇಷ ಹೋಮ

ಬಳ್ಳಾರಿ / ಕಂಪ್ಲಿ : ಪಟ್ಟಣದ ಸತ್ಯನಾರಾಯಣ ಪೇಟೆಯಲ್ಲಿ 1969ರಲ್ಲಿ ನಿರ್ಮಾಣ ಮಾಡಲಾದ ಶ್ರೀ ಸತ್ಯನಾರಾಯಣ ಸ್ವಾಮಿ ದೇವಸ್ಥಾನದಲ್ಲಿ ಸತ್ಯನಾರಾಯಣ ಸ್ವಾಮಿಗೆ ವಿವಿಧ ಅಬಿಷೇಕ,ವಿಶೇಷ ಪೂಜೆ, ವಿವಿಧ ಹೋಮಗಳು ಶ್ರದ್ಧಾ ಭಕ್ತಿಯಿಂದ ಜರುಗಿದವು.
ಬೆಳಿಗ್ಗೆ ಅಮೃತ ಶಿಲೆಯ ಶ್ರೀ ಸತ್ಯನಾರಾಯಣ ಶಿಲಾ ಪ್ರತಿಮೆಗೆ ವಿವಿಧ ಅಭಿಷೇಕಗಳು ನೆರವೇರಿದ ನಂತರ ನೂತನ ವಸ್ತ್ರ, ವಿವಿಧ ಹೂಗಳು, ಚಿನ್ನಾಭರಣಗಳಿಂದ ಅಲಂಕರಿಸಿದ ಪುರೋಹಿತರಾದ ಗಂಗಾವತಿಯ ಸುಜ್ಞಾನಮೂರ್ತಿ, ಕಂಪ್ಲಿಯ ಗ್ರಾಮ ಪುರೋಹಿತ ಜೆ.ನಾಗಾರಾಚಾರ್ ಲೋಕ ಕಲ್ಯಾಣಾರ್ಥವಾಗಿ ನವಗ್ರಹ ಹೋಮ, ವಾಸ್ತುಹೋಮ, ಸೇರಿದಂತೆ ಇತರೆ ಹೋಮಗಳನ್ನು ನಡೆಸಿ, ಹೋಮದ ಕುಂಡಕ್ಕೆ ದೇವಸ್ಥಾನದ ಮುಖ್ಯಸ್ಥರಾದ ಜಿ.ವಿ.ಸತ್ಯನರಾಯಣಬಾಬು ದಂಪತಿಗಳು, ಜಿ.ಬಿ.ಕೋಟೇಶ ದಂಪತಿಗಳು ಪೂರ್ಣಾಹುತಿ ಸಲ್ಲಿಸಿದರು. ದೇವಸ್ಥಾನದ ಆವರಣದಲ್ಲಿ ಶ್ರೀ ಸತ್ಯನರಾಯಣ ಸ್ವಾಮಿಯ ಕಥೆಯ ಪ್ರವಚನ ಜರುಗಿತು. ನಂತರ ಸ್ವಾಮಿಗೆ ಮಹಾಮಂಗಳಾರತಿ, ತೀರ್ಥ ಪ್ರಸಾದ ವಿತರಣೆ ಜರುಗಿದ ನಂತರ ಆಗಮಿಸಿದ್ದ ಸಕಲ ಸದ್ಭಕ್ತರಿಗೆ ಅನ್ನಸಂತರ್ಪಣೆ ಜರುಗಿತು.
ಕಾರ್ಯಕ್ರಮದಲ್ಲಿ ದೇವಸ್ಥಾನ ಪದಾಧಿಕಾರಿಗಳು ಸೇರಿದಂತೆ ಪಟ್ಟಣದ ವಿವಿಧ ಸಮಾಜಗಳ ಮುಖಂಡರು, ಸಾರ್ವಜನಿಕರು ಭಾಗವಹಿಸಿದ್ದರು.

ವರದಿ : ಜಿಲಾನಸಾಬ್ ಬಡಿಗೇರ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!