“ಸರಕಾರಿ ಶಾಲೆಗೆ ಮಕ್ಕಳನ್ನು ದಾಖಲಿಸಲು ಮನವಿ”
ಬನಹಟ್ಟಿ(ಬಾಗಲಕೋಟೆ) : ಇಲ್ಲಿನ ಸದಾಶಿವ ನಗರದ ಹಿರಿಯ ಪ್ರಾಥಮಿಕ ಶಾಲೆಗೆ ಈ ವರ್ಷ ಹೊಸದಾಗಿ ದಾಖಲಾದ ಎಲ್ಲಾ ಮಕ್ಕಳಿಗೆ ಉಚಿತವಾಗಿ ಟ್ರ್ಯಾಕ್ ಸೂಟ್ ಮತ್ತು ನೋಟ್ ಬುಕ್ ಗಳನ್ನು ಶಾಲೆಯ ಮುಖ್ಯ ಗುರುಮಾತೆ ಶ್ರೀಮತಿ ಎಸ್ ಎಸ್ ಗೊಬ್ಬಾಣಿ ವಿತರಿಸಿದರು. ಇನ್ನೂ ಸಹ ಹೊಸದಾಗಿ ಸದಾಶಿವ ನಗರದ ಹಿರಿಯ ಪ್ರಾಥಮಿಕ ಶಾಲೆಗೆ ದಾಖಲಾಗುವ ಎಲ್ಲ ಮಕ್ಕಳಿಗೂ ಸಹ ಉಚಿತವಾಗಿ ನೀಡುತ್ತೇವೆ, ಪಾಲಕರು ಪೋಷಕರು ನಮ್ಮ ಶಾಲೆಗೆ ತಮ್ಮ ಮಕ್ಕಳನ್ನು ದಾಖಲಿಸಬೇಕು, ಸರಕಾರಿ ಶಾಲೆಯಲ್ಲಿ ಸಿಗುವ ಉನ್ನತ ಗುಣಮಟ್ಟದ ಶಿಕ್ಷಣ ಪಡೆಯಬೇಕು ಎಂದು ತಿಳಿಸಿದರು. ಈ ಸಂಧರ್ಭದಲ್ಲಿ ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷ ರಾಜು ಬಿಜ್ಜರಗಿ, ಶಿಕ್ಷಕರಾದ ಎಸ್ ವೈ ಕೌಜಲಗಿ, ಎಸ್ ಎನ್ ಪೋಳ, ವಿ ಬಿ ಶಿಂಧೆ, ವಿ ಸಿ ಕೋಷ್ಠಿ, ಸಿ ಪಿ ರೋಡಕರ್ ಶಿಕ್ಷಕರು ಹಾಜರಿದ್ದರು.
- ಕರುನಾಡ ಕಂದ ಸುದ್ದಿ




















