ಬಳ್ಳಾರಿ / ಕಂಪ್ಲಿ: ಕ್ಷೇತ್ರ ಸೇರಿದಂತೆ ನಾಡಿನ ಜನರ ನಾಡಿ ಮಿಡಿತ ಅರಿತಿರುವ ಶಾಸಕ ಜೆ.ಎನ್.ಗಣೇಶಗೆ ಸಚಿವ ಸ್ಥಾನ ನೀಡುವ ಮೂಲಕ ಜನರ ಸೇವೆಗೆ ಅನುವು ಮಾಡಿಕೊಡಬೇಕೆಂದು ರಾಮಸಾಗರ ಗ್ರಾಮದ ಗಂಗಾಮತ ಸಮಾಜದ ಅಧ್ಯಕ್ಷ ಬಿ.ಮಂಜುನಾಥ ಒತ್ತಾಯಿಸಿದರು.
ಅವರು ತಾಲೂಕಿನ ರಾಮಸಾಗರ ಗ್ರಾಮದಲ್ಲಿ ಶುಕ್ರವಾರ ಪತ್ರಕರ್ತರೊಂದಿಗೆ ಮಾತನಾಡಿ, ಜನನಾಯಕ ಜೆ.ಎನ್.ಗಣೇಶ ಅವರು ಶಾಸಕರಾದ ದಿನದಿಂದಲೂ ಕಳೆದ ಏಂಟು ವರ್ಷದಲ್ಲಿ ಸಾಕಷ್ಟು ಅನುದಾನ ತಂದು, ಗ್ರಾಮ ಸೇರಿದಂತೆ ಕ್ಷೇತ್ರದಲ್ಲಿ ಅಭಿವೃದ್ಧಿ ಜೊತೆಗೆ ಜನತೆಗೆ ಸೌಲಭ್ಯಗಳನ್ನು ಕಲ್ಪಿಸಿದ್ದಾರೆ. ಜನರ ಕಷ್ಟಗಳಿಗೆ ಸ್ಪಂದಿಸಿ, ಈಡೇರಿಸುವ ನಿಟ್ಟಿನಲ್ಲಿ ಶಾಸಕರ ಶ್ರಮ ದೊಡ್ಡದಿದೆ. ಸಚಿವ ಸ್ಥಾನ ದೊರೆತಲ್ಲಿ ಇನ್ನಷ್ಟು ಅಭಿವೃದ್ಧಿ ಸೇವೆಯೊಂದಿಗೆ ರಾಜ್ಯದ ಜನರ ಸಂಕಷ್ಟಕ್ಕೆ ಸಕಾಲದಲ್ಲಿ ಸ್ಪಂದಿಸಲಿದ್ದಾರೆ. ಆದ್ದರಿಂದ ಕಾಂಗ್ರೆಸ್ ಹೈಕಮಾಂಡ್, ರಾಜ್ಯದ ವರಿಷ್ಠರು, ಸಿಎಂ ಅವರು ಕಂಪ್ಲಿ ಶಾಸಕ ಜೆ.ಎನ್.ಗಣೇಶ್ಗೆ ಸಚಿವ ಸಂಪುಟದಲ್ಲಿ ಅವಕಾಶ ಮಾಡಿಕೊಡಬೇಕೆಂದರು.
ವರದಿ : ಜಿಲಾನಸಾಬ್ ಬಡಿಗೇರ್




















