ಸನಾತನ ಸಂಸ್ಕೃತಿ ವಿಧಿವಿಧಾನಗಳ ಸಂದರ್ಭದಲಿ
ಮಂಡಲಗಳು ಮೂಡುವುವು ಪುರೋಹಿತರ ಹಸ್ತದಲಿ
ವರ್ಣರಂಜಿತ ಕಳೆಯು ಹರಿದ್ರ ಕುಂಕುಮಗಳಲಿ
ಹರಸುವರು ಭಕ್ತರನು ಪೂಜಾ ಕೈಂಕರ್ಯಗಳಲಿ
ಆದರಿಲ್ಲಿ ಮೂಡಿದೆ ಕೇವಲ ಬಿಳಿಯ ಕಾಗದದಲಿ
ಪುತ್ರಿಯ ಕೈಚಳಕದಿ ಸೀಸದಕಡ್ಡಿಯ ಬಳಕೆಯಲಿ
ಬರುತಲಿದೆ ಇಂದಿನ ಸುಲಲಿತ ಕಾವ್ಯ ಚಿತ್ತಾರದಲಿ
ಕಿವಿಮಾತ ತಿಳಿಸಲು ಶುಭೋದಯದ ಜೊತೆಯಲಿ
ಮಕ್ಕಳಿಗೆ ಬಣ್ಣ ತುಂಬಿಸಲು ವಿಶೇಷ ಉಪಾಸನೆ
ಮೊಬೈಲ್ ಗೀಳನು ಮರೆಸಲು ಸರಳ ಸಾಧನೆ
ರೂಢಿಸಿಕೊಳ್ಳಲು ಏಕಾಗ್ರತಾ ಮನೋಭಾವನೆ
ದೂರಮಾಡಲು ಒತ್ತಡ ಬೆಳೆಸಿಕೊಳ್ಳಲು ಚಿಂತನೆ
- ಲಲಿತಾ ಕೆ ಆಚಾರ್, ಬೆಂಗಳೂರು




















