ಪರಂಗಿ ಹಣ್ಣಿನ ಉದರದಿ ತುಂಬಿದ್ದ ಮಣಿಗಳು
ನಡುವಲಿ ನಕ್ಷತ್ರ ಕೇಸರಿ ಸಿಪ್ಪೆಯ ತುಣುಕುಗಳು
ಕೂಷ್ಮಾಂಡದಲಿ ಅಡಗಿದ್ದ ಶ್ವೇತ ವರ್ಣದ ತಿಲಕಗಳು
ಕರ್ಬೂಜ ಫಲದ ತಿರುಳ ಮಾಲೆಯಲಿನ ಬೀಜಗಳು
ಸಮಗ್ರ ಪಕಳೆಗಳ ಜೋಡಣೆಯಲಿ ಸೃಜನಶೀಲ ಪ್ರಖರ
ಕಲಾಭಾವ ಕೈಂಕರ್ಯದಲಿ ಅರಳಿರುವ ಸುಲಲಿತ ಚಿತ್ತಾರ
ಕವಿಮನ ಪದಪುಂಜಗಳ ಪೋಣಿಸಲು ಕಾವ್ಯದಾ ಹಾರ
ಕಲಾಭಿಮಾನಿಗಳ ಶುಭ ಹೊನಲಿಗಿದು ಮಹಾಪೂರ
- ಲಲಿತಾ ಕೆ ಆಚಾರ್ ಬೆಂಗಳೂರು




















