ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಪಟ್ಟಣದ ನಿವಾಸಿಯಾಗಿರುವ ಮಂಜುಳಾ ಪಟ್ಟಣದ ಕಾರ್ಮೆಲ್ ಕ್ರಿಶ್ಚಿಯನ್ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಾಗ ಪೋಷಕರು ಹಾಗೂ ಸಾರ್ವಜನಿಕರ ಮನಸೆಳೆದು ಹಲವಾರು ಜನರಿಂದ ಲಕ್ಷಾಂತರ ರೂಪಾಯಿ ಸಾಲ ಪಡೆದು ವಂಚಿಸಿ ಈಗ ಸುಮಾರು ಎರಡು ತಿಂಗಳಿನಿಂದ ಕಾಣೆಯಾಗಿದ್ದು, ತಲೆಮರೆಸಿಕೊಂಡು ಪರಾರಿಯಾಗಿರುತ್ತಾಳೆ.
ಕೆಲವರಿಂದ ಚೆಕ್ ನೀಡಿ ಹಣ ಪಡೆದಿರುತ್ತಾಳೆ. ಪಟ್ಟಣ ಠಾಣೆಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿರುವುದಿಲ್ಲ. ಈಕೆಯನ್ನು ಎಲ್ಲಿಯಾದರೂ ಕಂಡರೆ ಸಾರ್ವಜನಿಕರು ತಕ್ಷಣ ನಂಜನಗೂಡು ಪೊಲೀಸ್ ಠಾಣೆಗೆ ದೂರು ನೀಡಬೇಕೆಂದು ಮೋಸ ಹೋದ ಸಾರ್ವಜನಿಕರು ಕೋರಿಕೊಂಡಿದ್ದಾರೆ ಹಾಗೂ ನಂಜನಗೂಡು ಪಟ್ಟಣ ಪೊಲೀಸರು ನಮಗೆ ನ್ಯಾಯ ನೀಡಬೇಕೆಂದು ಕೋರಿಕೊಂಡಿದ್ದಾರೆ.
- ಕರುನಾಡ ಕಂದ ಸುದ್ದಿ




















