ಮತದಾರರ ಪಟ್ಟಿಯಲ್ಲಿ ಹೆಸರು ಉಳಿಸಿಕೊಳ್ಳಲು ತಹಶೀಲ್ದಾರ್ ಮನವಿ
ಅರಕಲಗೂಡು: ಕೇಂದ್ರ ಚುನಾವಣಾ ಆಯೋಗದ ನಿರ್ದೇಶನ ಮತ್ತು ಜಿಲ್ಲಾಧಿಕಾರಿಗಳ ಮಾರ್ಗದರ್ಶನದಂತೆ ಕರ್ನಾಟಕ ಸೇರಿ 16 ರಾಜ್ಯಗಳಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ – SIR ನಡೆಯುತ್ತಿದ್ದು, ಅರಕಲಗೂಡು ತಾಲೂಕಿನಲ್ಲೂ ಕಾರ್ಯ ಚಾಲನೆಯಲ್ಲಿದೆ.
ಈ ಕುರಿತು ಮನವಿ ಮಾಡಿರುವ ಅರಕಲಗೂಡು ತಹಶೀಲ್ದಾರ್ ಅವರು, ಅರಕಲಗೂಡು ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 2,36,667 ಮತದಾರರಿದ್ದಾರೆ. ಈ ಪೈಕಿ ಈಗಾಗಲೇ 2,09,195 ಮತದಾರರು ತಮ್ಮ ಎನ್ಯೂಮರೇಷನ್ ಫಾರ್ಮ್‌ಗಳನ್ನು BLO ಗಳಿಗೆ ನೀಡಿದ್ದು, ಡಿಜಿಟಲೀಕರಣಗೊಂಡಿದೆ. ಆದರೂ ಇನ್ನೂ 7,384 ಎನ್ಯೂಮರೇಷನ್ ಫಾರ್ಮ್‌ಗಳು ಮತದಾರರ ಬಳಿಯೇ ಉಳಿದಿವೆ.
“ದಯವಿಟ್ಟು ಕೊನೆ ದಿನದವರೆಗೆ ಕಾಯದೆ, ಕೂಡಲೇ ತಮ್ಮ ಎನ್ಯೂಮರೇಷನ್ ಫಾರ್ಮ್‌ಗಳನ್ನು ತಮ್ಮ ಬೂತ್ ಮಟ್ಟದ ಅಧಿಕಾರಿಗಳಿಗೆ (BLO) ನೀಡಿ, ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಇರುವುದನ್ನು ಖಾತ್ರಿಪಡಿಸಿಕೊಳ್ಳಿ. ಮತದಾರರ ಪಟ್ಟಿಯಲ್ಲಿದ್ದರೆ ಮಾತ್ರ ಎಲ್ಲಾ ಸರ್ಕಾರಿ ಸೌಲಭ್ಯಗಳು ದೊರೆಯಲಿವೆ” ಎಂದು ತಹಶೀಲ್ದಾರ್ ಅವರು SIR 2025 ಕ್ಕೆ ಎಲ್ಲರೂ ಸಹಕರಿಸಬೇಕೆಂದು ಕೋರಿದ್ದಾರೆ.
ವರದಿ ಸುಧೀಂದ್ರ ಡಿ




















