ಹಿಮಾಲಯದ ದೈವಿಕ ಪುಷ್ಪಗಳು
ಸೌಸುರಿಯ ಬಬ್ವಲ್ಲಟಾ ನಾಮಾಂಕನಗಳು
ಸೂರ್ಯಕಾಂತಿ ಹೂವಿನ ಕುಟುಂಬ ವರ್ಗಗಳು
ಮನೆಯಂಗಳದಿ ಶೋಭಿಸುತಿರುವ ಬ್ರಹ್ಮಕಮಲದ ಹೂಗಳು
ಎಲೆಗಳಲಿ ಮೂಡುವ ವಿಭಿನ್ನ ಹೂವು
ರಾತ್ರಿ ಅರಳಿ ಹಗಲು ಮುದುಡುವ ಹೂವು
ಘಮ ಘಮಿಸುವ ರಾತ್ರಿರಾಣಿ ಹೂವು
ವರ್ಷಕ್ಕೊಮ್ಮೆ ದರುಶನ ಕೊಡುವ ಹೂವು
ಅರ್ಪಿತವು ಬದ್ರಿನಾಥ ಕೇದಾರನಾಥರಿಗೆ
ಉಪಯುಕ್ತವು ರೋಗ ನಿರೋದಕಗಳಿಗೆ
ಬೇರಿನಾಂಶದ ತೈಲವು ದೇಹದ ಗಾಯಗಳಿಗೆ
ಪುಷ್ಪಗಳ ಕಶಾಯ ಮನಸಿನ ರೋಗಗಳಿಗೆ
ವಿಷ್ಣು ದೇವನ ಹೊಕ್ಕಳನು ಪ್ರತಿನಿಧಿಸುವ
ಲಕ್ಷ್ಮೀದೇವಿಯ ಸಂಪತ್ತನು ಸಂಕೇತಿಸುವ
ವಿಸ್ಮಯದ ಕೊಡುಗೆಯ ನಿಸರ್ಗಕೆ ವಂದಿಸುವ
ಸುಲಲಿತ ಕಾವ್ಯವನು ನಲ್ಮುಂಜಾವಲಿ ಅರ್ಪಿಸುವ
- ಲಲಿತಾ ಕೆ ಆಚಾರ್, ಬೆಂಗಳೂರು




















