ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಗುರುಪೂರ್ಣಿಮೆಯ ವಿಶೇಷ ದಿನ ಸಮಾಜ ಸೇವಕರಾದ ಪಿ ಎನ್ ಕೃಷ್ಣಮೂರ್ತಿ ಅವರಿಂದ ವಿಶೇಷ ಪೂಜೆ

ಅಜ್ಞಾನದ ಕತ್ತಲೆಯನ್ನು ಹೋಗಲಾಡಿಸಿ ಜ್ಞಾನದ ಬೆಳಕನ್ನು ತೋರುವ ಗುರುಗಳಿಗೆ ಗೌರವ ಸಲ್ಲಿಸಲು ಬಂದ ಪಿಎನ್ ಕೃಷ್ಣಮೂರ್ತಿ.

ಕೊರಟಗೆರೆಯಲ್ಲಿ ಗುರುಪೂರ್ಣಿಮೆಯ ವಿಶೇಷ ದಿನವಾದ ನಿನ್ನೆ ಪೂಜೆ ಸಲ್ಲಿಸಲು ಕ್ಷೇತ್ರಕ್ಕೆ ಆಗಮಿಸಿ ಪಿಎನ್ ಕೃಷ್ಣಮೂರ್ತಿ ಯವರು. ಸಾಯಿಬಾಬಾ ಮಂದಿರದಲ್ಲಿ ಪ್ರಾರ್ಥನೆ ಭಜನೆ ವಾಯು ಸೇವೆಯನ್ನು ಮಾಡಿ ಸ್ವಾಮಿಯ ಕೃಪೆಗೆ ಪಾತ್ರರಾಗಿ ಅಲ್ಲಿ ನೆರೆದಿದ್ದ ಸಾವಿರಾರು ಭಕ್ತರನ್ನು ಕಂಡು ಇದು ಪರಮಾತ್ಮನನ್ನು ನೆನೆಯುವ ದಾರಿಯಾಗಿದೆ. ಎಲ್ಲಾ ದಿನಗಳಲ್ಲಿ ಪೂಜೆ ಮಾಡುವುದರಿಂದ ಗುರುವಿಗೆ ಗೌರವ ಸಿಗುತ್ತದೆ. ಸಾಯಿ ಬಾಬಾ ಅವರ ಆಶೀರ್ವಾದ ಪಡೆದು ಎಲ್ಲರಿಗೂ ಶುಭವಾಗಲಿ. ಈ ಗುರುಪೂರ್ಣಿಮೆಯ ಗುರು ಜಪವು ಎಲ್ಲಾ ಭಕ್ತರಿಗೆ ಜೀವನದಲ್ಲಿ ಹೊಸ ಸೌಭಾಗ್ಯ ಮತ್ತು ಸಮೃದ್ಧಿ ನೀಡಲಿ ಎಂದು ಪೂಜೆ ಸಲ್ಲಿಸಿ ಪ್ರಸಾದ ವಿನಿಯೋಗಕ್ಕೆ ಎರಡು ಲಕ್ಷ ರೂ. ಗಳ ದೇಣಿಗೆಯನ್ನು ನೀಡಿ ಸಾಯಿಬಾಬ ಮಂದಿರ ಒಳಭಾಗಕ್ಕೆ ಪಿಓಪಿ ಅಲಂಕಾರ ಕೆಲಸ ಮಾಡಿಸುವುದಾಗಿ ಆಡಳಿತ ಮಂಡಳಿಗೆ ತಿಳಿಸಿದರು.
ಆಷಾಢ ಮಾಸದ ಪವಿತ್ರ ಹುಣ್ಣಿಮೆಯಂದು ಆಚರಿಸಲಾಗುವ ಗುರು ಪೂರ್ಣಿಮೆಯು ಭಾರತೀಯ ಪರಂಪರೆ ಹಾಗೂ ಆಧ್ಯಾತ್ಮಿಕ ಚಿಂತನೆಯಲ್ಲಿ ಅತ್ಯಂತ ಶ್ರೇಷ್ಠವಾದ ಪರ್ವ ದಿನವಾಗಿದೆ.

ಗುರು ಪೂರ್ಣಿಮೆಯ ದಿವ್ಯ ವಿಶೇಷತೆಯೆಂದರೆ ಇದು ಸಾಧಕರಿಗೆ ಜಪ, ಧ್ಯಾನ, ಸ್ವಾಧ್ಯಾಯ ಮತ್ತು ಕಠಿಣ ಆಧ್ಯಾತ್ಮಿಕ ಸಾಧನೆಗೆ ಅತ್ಯಂತ ಶ್ರೇಷ್ಠ ಹಾಗೂ ಫಲದಾಯಕ ಸಮಯವಾಗಿದೆ. ಈ ದಿನದಂದು ಆಶ್ರಮಗಳಲ್ಲಿ ಹಾಗೂ ಮಠಗಳಲ್ಲಿ ಗುರುಗಳ ಪಾದುಕಾ ಪೂಜೆ ನಡೆಸಿ, ಗುರುಮಂತ್ರ ಜಪ ಮಾಡುವುದರಿಂದ ಮನಸ್ಸಿನ ಕಲುಷಿತತೆ ನಿವಾರಣೆಯಾಗಿ ದಿವ್ಯ ಚೈತನ್ಯವು ಜಾಗೃತಗೊಳ್ಳುತ್ತದೆ. ಚಾತುರ್ಮಾಸ ವ್ರತ ಪ್ರಾರಂಭವಾಗುವ ಈ ಸಮಯದಲ್ಲಿ ಸನ್ಯಾಸಿಗಳು ಮತ್ತು ಸಾಧಕರು ಒಂದೆಡೆ ಕುಳಿತು ಜ್ಞಾನಚಿಂತನೆ ಹಾಗೂ ಆತ್ಮಾವಲೋಕನದಲ್ಲಿ ತೊಡಗುತ್ತಾರೆ.
ಎಂಬಂತೆ ಗುರುವನ್ನು ತ್ರಿಮೂರ್ತಿಗಳ ಸ್ವರೂಪವೆಂದು ಭಾವಿಸಿ, ಅವರ ಚರಣಕಮಲಗಳಿಗೆ ನಮಿಸಿ ಅನುಗ್ರಹ ಪಡೆಯುವುದೇ ಈ ದಿನದ ಮುಖ್ಯ ಉದ್ದೇಶ ಎಂದು ಹೇಳಿದರು. ಇಂದು ಸಾವಿರಾರು ಭಕ್ತರಿಗೆ ಸಮಾಜ ಸೇವಕರಿಂದ ಅನ್ನದಾಸೋಹವು ನೆರವೇರಿತು.
ಪೂಜೆ ಸಲ್ಲಿಸಲು ಪಿ ಎನ್ ಕೆ ಕುಟುಂಬದವರು, ಪವನ್ ಕುಮಾರ್, ಕಾಮರಾಜಣ್ಣ, ಮಂಜುನಾಥ್, ದೊಡ್ಡಯ್ಯ, ರಂಗನಾಥ್, ನರಸಿಂಹರಾಜು ಎಲ್ ಸೇರಿದಂತೆ ಇನ್ನೂ ಅನೇಕ ಮುಖಂಡರು ಭಾಗಿಯಾಗಿದ್ದರು.

ವರದಿ .ಪ್ರಸನ್ನ ಕುಮಾರ್ ಎಸ್ .ಕೊರಟಗೆರೆ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!