ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಗಾಂಧೀಜಿ ಮತ್ತು ಅಂಬೇಡ್ಕರ್ ಚಳವಳಿಯಿಂದ ಸ್ಪೂರ್ತಿ ಪಡೆದು ಯಶಸ್ಸು ಕಂಡ ಭಾರತದ ಪ್ರಮುಖ ಚಳುವಳಿಗಳು.

ಭಾರತದಲ್ಲಿ ಹೋರಾಟ, ಚಳುವಳಿ, ಆಂದೋಲನ, ಜನಪರ ಚಿಂತನೆಗಳು ಸ್ವತಂತ್ರ ಪೂರ್ವದಲ್ಲೆ ಬೇರೂರಿತ್ತು. ಹಿಂದಿನಿಂದಲೂ ವಿವಿಧ ಆಯಾಮಗಳಲ್ಲಿ ಚಳುವಳಿಗಳು ಘಟಿಸಿವೆಯಾದರೂ, ಆಧುನಿಕ ಭಾರತದ ಚರಿತ್ರೆಯಲ್ಲಿ ಮಹಾತ್ಮಗಾಂಧೀಜಿ ಮತ್ತು ಬಾಬಾ ಸಾಹೇಬ್ ಅಂಬೇಡ್ಕರ್ ರವರ ಹೋರಾಟಗಳು ಜನಮನ್ನಣೆ ಗಳಿಸಿದ್ದವು,
ನಂತರದ ದಿನ ಮಾನಗಳಲ್ಲಿ ಗಾಂಧೀಜಿ ಮತ್ತು ಡಾ.ಬಿ.ಆರ್. ಅಂಬೇಡ್ಕರ್ ಹೆಸರಲ್ಲಿ ಜನಪರ ವೇದಿಕೆಗಳು, ಆಂದೋಲನಗಳು ಮತ್ತು ಚಳುವಳಿ ಗಳು ಹಾಗೂ ಸಂಘ-ಸಂಸ್ಥೆ ಗಳನ್ನು ಕಟ್ಟುವ ಮೂಲಕ ಜನ ವಿರೋಧಿ ನೀತಿಗಳ ವಿರುದ್ಧ ಅಲ್ಲಲ್ಲಿ ಪ್ರತಿಭಟನೆಗಳು ಸಂಭವಿಸುತ್ತಿವೆ. ಆದರೆ ಇಂದು ಜಾಗತಿಕ ಮಟ್ಟದಲ್ಲಿ ಚರ್ಚೆಗೆ ನಾಂದಿಯಾಗಿರುವುದು ಲಕ್ಷಾಂತರ ಸಂಖ್ಯೆಯಲ್ಲಿ ಬೆಂಬಲಿಸುತ್ತಿರುವ ಕಾಕ್ರೋಚ್ ಜನತಾ ಪಾರ್ಟಿ.

ಹಿಂದೆ 19ನೇ ಶತಮಾನದ ಮೊದಲಾರ್ಧದಲ್ಲಿ ಬ್ರಿಟಿಷರ ವಿರುದ್ಧ ಅಹಿಂಸಾತ್ಮಕ ಚಳುವಳಿಯ ಮೂಲಕ ಯಶಸ್ಸು ಸಾಧಿಸಿದ ಗಾಂಧೀಜಿಯವರ ಸತ್ಯಾಗ್ರಹ ಮತ್ತು ಅಹಿಂಸೆಯ ಅಸ್ತ್ರಗಳು ಬ್ರಿಟಿಷರ ವಿರುದ್ಧ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತವೆ ಎಂಬುದನ್ನು ಭಾರತೀಯರಿಗೆ ಸಾಭೀತುಪಡಿಸಿದವು. ಜನ ವಿರೋಧಿ ನೀತಿಗಳಿಗೆ ಕೇವಲ ಮನವಿಗಳ ಮೂಲಕ ಪರಿಹಾರ ಸಿಗದು ಪ್ರತಿಭಟನೆ, ಚಳುವಳಿಗಳು ಉಗ್ರರೂಪ ತಾಳಿದಾಗ ಮಾತ್ರ ತಾರ್ಕಿಕ ಅಂತ್ಯ ಕಾಣುವುದನ್ನು ಹಿಂದಿನ ಅನೇಕ ಚಳವಳಿಗಳು ಸಾಭೀತು ಮಾಡಿವೆ.
ಕಳೆದ 2020 ಸೆಪ್ಟೆಂಬರ್‌ನಲ್ಲಿ ಕೇಂದ್ರ ಸರ್ಕಾರ ಮೂರು ಹೊಸ ಕೃಷಿ ಕಾಯ್ದೆಗಳನ್ನು ಜಾರಿಗೆ ತಂದಿತು.
ಇದನ್ನು ವಿರೋಧಿಸಿ ಸರ್ಕಾರದ ವಿರುದ್ಧ ಭಾರತೀಯ ಇತಿಹಾಸದಲ್ಲೇ ಅತ್ಯಂತ ದೀರ್ಘ ಮತ್ತು ಪ್ರಮುಖ ವಾದ ಜನಪರ ಹೋರಾಟಗಳಲ್ಲಿ ಒಂದಾಗಿತ್ತು.

ರಾಕೇಶ್ ಟಿಕಾಯತ್ (ಭಾರತೀಯ ಕಿಸಾನ್ ಯೂನಿಯನ್ – ನಾಯಕ),
ದರ್ಶನ್ ಪಾಲ್ (ಕ್ರಾಂತಿಕಾರಿ ಕಿಸಾನ್ ಯೂನಿಯನ್),
ಜಗಜಿತ್ ಸಿಂಗ್ ದಲ್ಲೇವಾಲ್ (ಬಿ.ಕೆ.ಯು.ಸಿದ್ಧುಪುರ್),ಯದುವೀರ್ ಸಿಂಗ್,
ಜೋಗಿಂದರ್ ಸಿಂಗ್,ಉಗ್ರಹಾನ್ (ಬಿ.ಕೆ.ಯು ಉಗ್ರಹಾನ್),ಹರ್ಪಾಲ್ ಸಿಂಗ್ ಸಂಘಾರು ಸೇರಿ ಸಂಯುಕ್ತ ಕಿಸಾನ್ ಮೋರ್ಚಾ (ಎಸ್.ಕೆ.ಎಂ.)ರೈತ ಸಂಘಟನೆಗಳ ಒಕ್ಕೂಟದ ಅಡಿಯಲ್ಲಿ ಚಳವಳಿ ನಡೆಯಿತು.
ಪಂಜಾಬ್, ಹರಿಯಾಣ ಮತ್ತು ಯುಪಿಯ ರೈತ ಸಂಘಟನೆಗಳು
‘ದೆಹಲಿ ಚಲೋ’ ಕರೆ ನೀಡಲಾಗಿ ನವೆಂಬರ್ 2020ರಲ್ಲಿ ಲಕ್ಷಾಂತರ ರೈತರು ದೆಹಲಿಗೆ ಪಾದಯಾತ್ರೆ ಕೈಗೊಂಡು ದೆಹಲಿ ಗಡಿಗಳಾದ ಸಿಂಘು,ಟಿಕ್ರಿ ಮತ್ತು ಗಾಜಿಪುರ ಗಡಿಗಳಲ್ಲಿ ಬೀಡುಬಿಟ್ಟು, ಧರಣಿ ನಡೆಸಿದರು. ಶಾಂತಿಯುತ ಪ್ರತಿಭಟನೆಯಲ್ಲಿ ಚಳಿ,ಮಳೆ,ಬಿಸಿಲನ್ನು ಲೆಕ್ಕಿಸದೆ ರೈತರು ಒಂದು ವರ್ಷಕ್ಕೂ ಹೆಚ್ಚು ಕಾಲ ರಸ್ತೆಗಳಲ್ಲೇ ಅಡುಗೆ ಮಾಡಿ
ಕಾಯ್ದೆಯ ವಿರುದ್ಧ ರೈತರು ಹೋರಾಟ ಮುಂದುವರಿಸಿದರು. ಇದು ಜಗತ್ತಿನ ಗಮನ ಸೆಳೆಯಿತು.
ಜನವರಿ 26,2021 ಗಣರಾಜ್ಯೋತ್ಸವರಂದು ರೈತರು ‘ಟ್ರಾಕ್ಟರ್ ರಾಲಿ’ ಮಾಡುವ ಮೂಲಕ ದೆಹಲಿಯ ಕೆಂಪು ಕೋಟೆ ಬಳಿ ದೊಡ್ಡಮಟ್ಟದಲ್ಲಿ ಧರಣಿ ನಡೆಸಿದರು. ಇದಕ್ಕೆ ಮಣಿದ ಸರ್ಕಾರ
ಸಂಸದೀಯ ಚರ್ಚೆಗಳು ಹಾಗೂ ಸಂಧಾನಗಳು ಮೂಲಕ ರೈತ ನಾಯಕರ ನಡುವೆ ಹಲವು ಸುತ್ತಿನ ಮಾತು ಕತೆಗಳು ನಡೆದರೂ ಫಲಪ್ರದವಾಗಲಿಲ್ಲ.
ಚಳುವಳಿಯಲ್ಲಿ ಭಾಗವಹಿಸಿದ ರೈತರು ಅನೇಕ ರೋಗರುಜಿನಗಳು, ರಸ್ತೆ ಅಪಘಾತಗಳು ಹಾಗೂ ಇತರ ಕಾರಣಗಳಿಂದಾಗಿ ಸುಮಾರು 700 ಕ್ಕೂ ಹೆಚ್ಚು ರೈತರು ತಮ್ಮ ಪ್ರಾಣವನ್ನೇ ಕಳೆದುಕೊಂಡರು. ಮುಂದೆ ರೈತ ಹೋರಾಟಕ್ಕೆ ಅಂತರರಾಷ್ಟ್ರೀಯ ಮಟ್ಟದಲ್ಲಿಯೂ ವ್ಯಾಪಕ ಬೆಂಬಲ ವ್ಯಕ್ತವಾಯಿತು. ಇದರ ಪರಿಣಾಮವಾಗಿ 19 ನವೆಂಬರ್ 2021ರಂದು ಪ್ರಧಾನ ಮಂತ್ರಿ ಮೋದಿಯವರು ರೈತ ವಿರೋಧಿ ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆಯುವುದಾಗಿ ಘೋಷಿಸಿದರು.
ಡಿಸೆಂಬರ್ 2021ರಲ್ಲಿ ಸಂಸತ್ತಿನ ಎರಡೂ ಮನೆಗಳಲ್ಲೂ ಈ ಕಾಯ್ದೆಗಳನ್ನು ಅಧಿಕೃತವಾಗಿ ರದ್ದುಗೊಳಿಸಲಾಯಿತು.ಈ ಹೋರಾಟದಲ್ಲಿ ಪ್ರಾಣ ಕಳೆದುಕೊಂಡ ರೈತರಿಗೆ ಯಾವುದೇ ನ್ಯಾಯ ಸಿಗಲಿಲ್ಲ.
ಮುಂದೆ ಕೇಂದ್ರ ಬಿಜೆಪಿ ಮೈತ್ರಿ ಸರ್ಕಾರ ಮತ್ತೊಂದು ವಿವಾದಾತ್ಮಕ ಎನ್.ಆರ್.ಸಿ ಮತ್ತು ಪೌರತ್ವ ತಿದ್ದುಪಡಿ ಕಾಯ್ದೆ ತರಲು ಸರ್ಕಾರ ಮುಂದಾಗಿತ್ತು.
ಈ ಕಾಯ್ದೆಯ (ಸಿ.ಎ.ಎ.)
ವಿರುದ್ಧದ ಚಳವಳಿ ಬೃಹತ್ ಮಟ್ಟದಲ್ಲಿ ನಡೆದ ಜನಪರ ಪ್ರತಿಭಟನೆಗಳಲ್ಲಿ ಒಂದಾಗಿತ್ತು.
ಉಮರ್ ಖಾಲಿದ್,ಜಮೀಲಾ ಅಕ್ತರ್, ಲದೀದಾ ಫರ್ಜಾನಾ (ಜಾಮಿಯಾಮಿಲ್ಲಿಯಾ ಇಸ್ಲಾಮಿಯಾ ಮತ್ತು ಜೆ.ಎನ್.ಯು ವಿದ್ಯಾರ್ಥಿಗಳು).
ಚಂದ್ರಶೇಖರ್ ಆಜಾದ್‘ ರಾವ ಣ್’(ಭೀಮ್ ಆರ್ಮಿ ಮುಖ್ಯಸ್ಥ ) ಸಾಮಾಜಿಕ ಕಾರ್ಯಕರ್ತರಾದ ಹರ್ಷ್ ಮಂದರ್(ಮಾಜಿ ಐ.ಎ.ಎಸ್‌ ಅಧಿಕಾರಿ),
ಯೋಗೇಂದ್ರ ಯಾದವ್ (ಸ್ವರಾಜ್ ಅಭಿಯಾನ).
ತೀಸ್ತಾ ಸೆತಲ್ವಾದ್ ಮತ್ತು ಮೇಧಾಪಾಟ್ಕರ್.ರಾಮಚಂದ್ರ ಗುಹಾ(ಇತಿಹಾಸ ತಜ್ಞ-ಬೆಂಗಳೂರಿನಲ್ಲಿ ಪ್ರತಿಭಟನೆ ವೇಳೆ ಬಂಧಿಸಲ್ಪಟ್ಟಿದ್ದರು).
ದೆಹಲಿಯ ಶಾಹೀನ್ ಬಾಗ್‌ ನಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಸಾರ್ವಜನಿಕವಾಗಿ ಗುರುತಿಸಿ ಕೊಳ್ಳದ ಮುಸ್ಲಿಂ ಮಹಿಳೆಯರು ಕೂಡ ಚಳವಳಿಗೆ ಬೆಂಬಲವಾಗಿ ಬೀದಿಗಿಳಿದು ನಡೆಸಿದ ಪ್ರತಿಭಟನೆ ಜಾಗತಿಕ ಮಟ್ಟದಲ್ಲಿ ಗಮನ ಸೆಳೆಯಿತು.
ದೆಹಲಿಯ ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ (ಜೆ.ಎಂ.ಐ),ಅಲಿಗಢ ಮುಸ್ಲಿಂ ಯೂನಿವರ್ಸಿಟಿ (ಎಂ.ಎಂಯು),ಜೊತೆ.ಎನ್.ಯು ಮತ್ತು ಜಾದವ್‌ ಪುರ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು ಮುಂಚೂಣಿಯಲ್ಲಿದ್ದರು.
ದೇಶದಾದ್ಯಂತ ನಡೆದ ಪ್ರತಿಭಟನೆಗಳ ವೇಳೆ ಹಲವು ಹಿಂಸಾತ್ಮಕ ಘಟನೆಗಳು,ಲಾಠಿ ಚಾರ್ಜ್,
ಗೋಲಿಬಾರ್ ಮತ್ತು ಕೋಮು ಗಲಭೆಗಳು ನಡೆದವು. ಪೊಲೀಸರ ಗುಂಡೇಟು,ಕಲ್ಲು ತೂರಾಟ ಮತ್ತು ಕಾಲ್ತುಳಿತದಿಂದಾಗಿ ದೇಶಾದ್ಯಂತ 25ಕ್ಕೂ ಹೆಚ್ಚುಚ ಜನರು ಜೀವ ಕಳೆದುಕೊಂಡರು,
ರಾಷ್ಟ್ರವ್ಯಾಪಿ ಎನ್.ಆರ್.ಸಿ ಪ್ರತಿಭಟನೆಯ ಕಾವು ಹೆಚ್ಚಾದಂ ತೆ ಕೇಂದ್ರ ಸರ್ಕಾರವು ತಕ್ಷಣವೇ ಇಡೀ ದೇಶಕ್ಕೆ ಎನ್.ಆರ್.ಸಿ ಜಾರಿಗೊಳಿಸುವ ಯಾವುದೇ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ ಎಂದು ಸ್ಪಷ್ಟನೆ ನೀಡಿತು.
ಕಳೆದ ಹತ್ತು ವರ್ಷ ಗಳಿಂದ ಕೇಂದ್ರ ಸರ್ಕಾರವು
ನಡೆಸಿಕೊಂಡು ಬಂದಿರುವ ನೀಟ್ ಮತ್ತು ಇತರೆ ಪರೀಕ್ಷೆಗಳ ಸೋರಿಕೆ ಪ್ರತಿಭಾವಂತ ಪ್ರಾಮಾಣಿಕ ಬಡ ವಿದ್ಯಾರ್ಥಿಗಳಿಗೆ ಸಾಕಷ್ಟು ಅನ್ಯಾಯವಾಗುತ್ತಿತ್ತು ಇದರಿಂದ 21 ಅಮಾಯಕ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದರು. (ನೀಟ್ ಪರೀಕ್ಷೆಯಿಂದ ಬೇಸತ್ತು) ಸರ್ಕಾರ ನಡೆಸುವ ಪರೀಕ್ಷೆಗಳ ಅನ್ಯಾಯದ ವಿರುದ್ಧ ಜೆ.ಎನ್. ಯು.ವಿದ್ಯಾರ್ಥಿ ಮುಖಂಡ ರೋಹಿತ್ ವೇಮಲ ಮಾದರಿಯಲ್ಲಿ ವಿದೇಶದಲ್ಲಿ ವ್ಯಾಸಂಗ ಮಾಡುತ್ತಿದ್ದ ಕ್ರಾಂತಿಕಾರಿ,ಕಣ್ಮ ಣಿ,ಯುವಕರ ಐಕಾನ್ ರಾಜಕೀ ಯ ರಣನೀತಿಜ್ಞ ಸಾಮಾಜಿಕ ಕಾರ್ಯಕರ್ತ ಹಾಗೂ ಭಾರತೀಯ ಯುವಕರು ಮತ್ತು ವಿದ್ಯಾರ್ಥಿಗಳಲ್ಲಿ ಭಾರಿ ಸಂಚಲನ ಮೂಡಿಸಿದ ಕಾಕ್ರೋಚ್ ಜನತಾ ಪಾರ್ಟಿ ಚಳವಳಿಯ ಸಂಸ್ಥಾಪಕ ಅಭಿಜೀತ್ ದೀಪ್ಕೆ ಸಾಮಾಜಿಕ ಜಾಲತಾಣದ ಮೂಲಕ ನಡೆಸಿದ ಹೋರಾಟ ರೋಚಕವಾಗಿತ್ತು. ದೀಪ್ಕೆ ಮೂಲತಃ ಮಹಾರಾಷ್ಟ್ರದ ಮಹಾರ್ ಕುಡಿ.
ಇವರು ಛತ್ರಪತಿ ಸಂಭಾಜಿನಗರ (ಔರಂಗಾಬಾದ್) ಪುಣೆಯಲ್ಲಿ ಪತ್ರಿಕೋದ್ಯಮ ವಿಭಾಗದಲ್ಲಿ ಪದವಿ ಪಡೆದ ನಂತರ, ಅಮೆರಿಕದ ಬೋಸ್ಟನ್ ವಿಶ್ವವಿದ್ಯಾಲಯದಲ್ಲಿ ಸಾರ್ವಜನಿಕ ಸಂಪರ್ಕ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿದ್ದಾರೆ. ಇವರು ಡಿಜಿಟಲ್ ರಾಜಕೀಯ ರಣನೀತಿ ಹಾಗೂ ಅಭಿಯಾನ ರೂಪಿಸುವುದರಲ್ಲಿ ನಿಪುಣರಾಗಿದ್ದು,2020 ರಿಂದ 2023 ರವರೆಗೆ ಆಮ್ ಆದ್ಮಿ ಪಾರ್ಟಿ ಜಾಲತಾಣ ತಂಡದಲ್ಲಿ ಕಾರ್ಯ ನಿರ್ವಹಿಸಿದ ಅನುಭವವಿತ್ತು. ಪರೀಕ್ಷಾ ಅಕ್ರಮಗಳು ಮತ್ತು ನಕಲಿ ಪದವಿ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ನ ನ್ಯಾಯಮೂರ್ತಿಗಳು
ಯುವಕರನ್ನು ವ್ಯಂಗ್ಯವಾಗಿ ಹೇಳಿಕೆ ನೀಡಿದ್ದರ ಪರಿಣಾಮವಾಗಿ ‘ಕಾಕ್ರೋಚ್ ಜನತಾ ಪಾರ್ಟಿ’ ಅಭಿಯಾನವನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಾರಂಭಿಸಿದರು.
ಇವರ ಎಐ ತಂತ್ರಜ್ಞಾನದ ಬಳಕೆಯ ಫಲವಾಗಿ ಈ ಅಭಿಯಾನವು ಅತ್ಯಂತ ವೇಗವಾಗಿ ಲಕ್ಷಾಂತರ ಯುವಕರನ್ನು ತಲುಪಿದರು,
ಇದು ಭಾರತದ ಝೆನ್-ಜಿ ಚಳವಳಿಯಾಗಿ ಮಾರ್ಪಟ್ಟಿತು.
ಸಂಘಟಿತ ಸಾವಿರಾರು ವಿದ್ಯಾರ್ಥಿಗಳು ನೀಟ್ ಪರೀಕ್ಷೆ ಯ ಅಕ್ರಮದ ವಿರುದ್ಧವಾಗಿ ಹೋರಾಟಕ್ಕೆ ಧುಮುಕಿದರು. ಅಮೆರಿಕದಲ್ಲಿ ಕುಳಿತು ಚಳುವಳಿ ರೂಪಿಸಿದ ವಿದ್ಯಾರ್ಥಿ ನಾಯಕ ಅಭಿಜೀತ್ ದೀಪ್ಕೆ ವಿದೇಶದಿಂದಲೇ ಸಲಹೆ ನೀಡುತ್ತಾ ವಿಧ್ಯಾರ್ಥಿಗಳನ್ನು ಚಳವಳಿಗೆ ಹುರಿದುಂಬಿಸಿದರು. ಮುಂದೆ ತಾನೆ ಖುದ್ದಾಗಿ ಭಾರತಕ್ಕೆ ಹಿಂತಿರುಗಿ ಸಾಂವಿಧಾನಿಕ ಚೌಕಟ್ಟಿನೊಳಗೆ ಸಂವಿಧಾನ ವಿರೋಧಿ ಚಟುವಟಿಕೆ ಗಳು,ನೀಟ್-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ಶಿಕ್ಷಣ ಕ್ಷೇತ್ರ ದಲ್ಲಿನ ಅಕ್ರಮಗಳ ವಿರುದ್ಧ ದೆಹಲಿಯ ಜಂತರ್-ಮಂತರ್‌ ನಲ್ಲಿ ‘ಸಂಸತ್ ಚಲೋ’ ಪ್ರತಿಭಟನೆಯ ನೇತೃತ್ವ ವಹಿಸಿ ದರು.ವಿದ್ಯಾರ್ಥಿಗಳ ಚಳುವಳಿಗೆ ಸಾಮಾಜಿಕ ಕಾರ್ಯಕರ್ತ ಹಾಗೂ ಪ್ರಸಿದ್ಧ ವಿಜ್ಞಾನಿಗಳಾದ ಸೋನಂ ವಾಂಗ್ಚುಕ್ ರು 17 ದಿನಗಳ ವರೆಗೆ ಉಪವಾಸ ಸತ್ಯಾಗ್ರಹ ಆರಂಭಿಸಿದರು.
ನಟ ಪ್ರಕಾಶ್ ರಾಜ್ ಇತರ ಪ್ರಗತಿಪರರು ಚಳುವಳಿಯನ್ನು ಬೆಂಬಲಿಸಿದರು.
ವಿದ್ಯಾರ್ಥಿ ಚಳುವಳಿಯು ಇಡೀ ದೇಶಕ್ಕೆ ವ್ಯಾಪಿಸಿತು.
ಶಾಂತಿಯುತವಾಗಿ ಪ್ರತಿಭಟನೆ ಮಾಡುತ್ತಿದ್ದ ಅಮಾಯಕ ವಿದ್ಯಾರ್ಥಿಗಳ ಮೇಲೆ ದೆಹಲಿ ಪೋಲಿಸರು ಲಾಠಿ ಚಾರ್ಜ್,
ಜಲಪಿರಂಗಿ ಮತ್ತಿತರ ಕ್ರಮಗಳ ಮೂಲಕ ಅಮಾನುಷವಾಗಿ ನಡೆದುಕೊಂಡರು. ಹಾಗೂ ಅಮಾಯಕ ವಿದ್ಯಾರ್ಥಿಗಳ ಮೇಲೆ ದೂರು ದಾಖಲಿಸಿ ಅವರ ಭವಿಷ್ಯಕ್ಕೆ ಇಲಾಖೆ ಮಾರಕವಾಗಿದೆ,ಇಂತಹ ಘಟನೆಗಳನ್ನು ಖಂಡಿಸಿ ಕೆಲ ಪ್ರಗತಿಪರ ಪ್ರಸಿದ್ಧ ಸ್ಟಾರ್ ಸಿನಿಮಾ ನಟ, ನಟಿಯರು,
ವಕೀಲರು,ಮೌಲ್ವಿಗಳು,ಪಾದ್ರಿಗಳು,ವಿದ್ವಾಂಸರು ಚಳವಳಿಗೆ ಪ್ರತ್ಯೇಕ ಮತ್ತು ಪರೋಕ್ಷವಾಗಿ ಬೆಂಬಲಿಸಿದರು.
ಇದೊಂದು ಪ್ರತಿಭಟನೆ ಎನ್.ಡಿ.ಎ. ಮೈತ್ರಿ ಕೂಟದ ಕೇಂದ್ರ ಸರ್ಕಾರವನ್ನೆ ಅಲುಗಾಡಿಸಿತು. ಸತತ 12 ವರ್ಷಗಳ ಅವಧಿಯಲ್ಲಿ ಅಕ್ರಮದಲ್ಲಿ ಭಾಗಿಯಾಗಿದ್ದ ಸಂಬಂಧಿಸಿದ ಅಧಿಕಾರಿಗಳ ಮೇಲೆ ಸರ್ಕಾರ ಕ್ರಮ ಕೈಗೊಳ್ಳಲಿಲ್ಲ. ಆದರೆ ಕಾಕ್ರೋಚ್ ವಿಧ್ಯಾರ್ಥಿಗಳ 2026ರ ದೆಹಲಿ ಚಲೋ ಹೋರಾಟ ಕೇಂದ್ರದ ಶಿಕ್ಷಣ ಮಂತ್ರಿ ಶ್ರೀ ಧರ್ಮೆಂದ್ರ ಪ್ರಧಾನ್ ರನ್ನು ರಾಜೀನಾಮೆ ಮತ್ತು ನೀಟ್ ಪರೀಕ್ಷೆಯ ಅಕ್ರಮದಲ್ಲಿ ಭಾಗಿಯಾಗಿದ್ದ ಅಧಿಕಾರಿಗಳಿಗೆ ಶಿಕ್ಷೆ ಕೊಡಿಸಿದ ಮೊದಲ ಚಳುವಳಿ ಇದಾಗಿತ್ತು. ಮತ್ತು ನೊಂದ ವಿದ್ಯಾರ್ಥಿಗಳಿಗೆ ನ್ಯಾಯ ಕೊಡಿಸಿ ಹಾಗೂ ಪಾರ್ಲಿಮೆಂಟ್ ನಲ್ಲಿ ಪರೀಕ್ಷೆಗಳ ಅಕ್ರಮ ತಡೆಗೆ ಬಿಲ್ ಜಾರಿಗೆ ತರುವಂತೆ ಮಾಡಿದ ಅಭಿಜೀತ್ ದೀಪ್ಕೆ ತಂಡಕ್ಕೆ ಅಭಿನಂದನೆಗಳು.

  • ಡಾ.ಸುರೇಶ್
    ಎಸ್, ವಡಗಲಪುರ.
    ಸಮಾಜಮುಖಿ ಚಿಂತಕರು.
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!