ಕೊಟ್ಟೂರು : ಪಟ್ಟಣದ ತಾಲೂಕು ಸಮುದಾಯ ಆರೋಗ್ಯ ಕೇಂದ್ರಕ್ಕೆ ದಿನಾಂಕ 29 – 07- 2026 ನೇ ಬುಧವಾರ ದಂದು ವಿಜಯನಗರ ಜಿಲ್ಲಾ ತನಿಖಾಧಿಕಾರಿಗಳಾದ ಡಾ.ರಾಧಿಕಾ ,ಡಾ. ದೇವೇಂದ್ರ, ಶಿವಪ್ಪ ಸೀನಿಯರ್ ಹೆಲ್ತ್ ಇನ್ಸ್ಪೆಕ್ಟರ್ ರವರು ಸಮುಧಾಯ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದರು. ಈ ಸಮಯದಲ್ಲಿ ಕೊಟ್ಟೂರಿನ ಕೆಲವು ಸಂಘಟನೆಯ ಪದಾಧಿಕಾರಿಗಳು ಸೇರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ನಡೆಯುವ ಆಗು ಹೋಗುಗಳ ಬಗ್ಗೆ ಮತ್ತು ಔಷಧಿಗಳ ಬಗ್ಗೆ ಮತ್ತು ಕೆಲವು ಸಿಬ್ಬಂದಿಗಳು ರೋಗಿಗಳೊಂದಿಗೆ ನಡೆದುಕೊಳ್ಳುವ ದುರ್ನಡತೆಗಳ ಬಗ್ಗೆ ತನಿಖಾಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಯಿತು.
ಈ ಚರ್ಚೆಯಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ತಾಲೂಕು ಸಂಚಾಲಕರಾದ ಟಿ. ಹನುಮಂತಪ್ಪ ವಕೀಲರು ಹಾಗೂ ದಲಿತ ಮುಖಂಡರಾದ ಚಂದ್ರಶೇಖರ ಹಾಗೂ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುಡಿಯಾರ್ ಮಲ್ಲಿಕಾರ್ಜುನ ಹಾಗೂ ಇತರರು ಸೇರಿದಂತೆ ಕೊಟ್ಟೂರು ತಾಲೂಕಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಗುತ್ತಿಗೆಯ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ಡಾ. ಸುಲೋಚನಾ ಇವರನ್ನು ಹಾಗೂ ಕಿರಣ್ ಕುಮಾರ್ ಸ್ಟಾಫ್ ನರ್ಸ್ ಇವರನ್ನು ಕರ್ತವ್ಯದಿಂದ ವಜಾಗೊಳಿಸುವುದರ ಬಗ್ಗೆ ತನಿಖಾಧಿಕಾರಗಳಾದ ಡಿಎಲ್ಒ ಡಾ. ರಾಧಿಕಾ ರವರಿಗೆ ಮನವಿ ಪತ್ರ ಸಲ್ಲಿಸಿ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಟಿ. ಹನುಮಂತಪ್ಪ ವಕೀಲರು ಮಾತನಾಡಿ ಕೊಟ್ಟೂರು ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಗುತ್ತಿಗೆಯ ಆಧಾರದ ಮೇಲೆ ವೈದ್ಯರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಡಾ. ಸುಲೋಚನಾ ಇವರು ಪ್ರತೀ ದಿನ ಕರ್ತವ್ಯಕ್ಕೆ ತಡವಾಗಿ ಬರುವುದು ಬಡ ರೋಗಿಗಳು ಮತ್ತು ಸಾರ್ವಜನಿಕರಿಂದ ಹಣ ವಸೂಲಿ ಮಾಡುವುದು, ಇವರ ಕರ್ತವ್ಯ, ಸಮಯ ಬೆಳಿಗ್ಗೆ 9:30 ಇದ್ದು ಆದರೆ ಇವರು ಪ್ರತಿದಿನವೂ 11:30 ರಿಂದ 12:00 ಗಂಟೆಗೆ ಕರ್ತವ್ಯಕ್ಕೆ ತಡವಾಗಿ ಬರುವುದಲ್ಲದೇ ಕರ್ತವ್ಯಕ್ಕೆ ಬಂದ ನಂತರ ಆಸ್ಪತ್ರೆಗೆ ಬಂದಿರುವ ರೋಗಿಗಳ ಜೊತೆ ಏರು ಧ್ವನಿಯಲ್ಲಿ ಮಾತನಾಡುವುದು, ರೋಗಿಗಳನ್ನು ಗದರಿಸುವುದು ಹಾಗೂ ರೋಗಿಗಳಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸುವುದನ್ನು ಮಾಡುತ್ತಾರೆ, ಇವರು
ಕೆಲವು ವೈದ್ಯಕೀಯ ದೃಡೀಕರಣ ಪತ್ರಗಳಿಗೆ ಸಾರ್ವಜನಿಕರಿಂದ ಹಣ ವಸೂಲಿ ಮಾಡುತ್ತಾರೆ ಎಂದು ಹನುಮಂತಪ್ಪ ವಕೀಲರವರು ತನಿಖಾಧಿಕಾರಿಗಳಿಗೆ ಆಗ್ರಹಿಸಿದರು. ಒಂದು ವೇಳೆ ಇವರನ್ನು ಕರ್ತವ್ಯದಿಂದ ವಜಾ ಮಾಡದೇ ಹೋದಲ್ಲಿ ಮುಂದಿನ ದಿನಗಳಲ್ಲಿ ಸಮುದಾಯ ಆರೋಗ್ಯ ಕೇಂದ್ರದ ಮುಂದೆ ಧರಣಿ ಕೂಡಲಾಗುವದೆಂದು ಅಧಿಕಾರಿಗಳಿಗೆ ಎಚ್ಚರಿಸಿದರು.
ನಂತರ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುಡಿಯಾರ ಮಲ್ಲಿಕಾರ್ಜುನ ಮಾತನಾಡಿ ತಾಲೂಕು ಸಮುದಾಯದ ಆರೋಗ್ಯ ಕೇಂದ್ರದಲ್ಲಿ ಸ್ಟಾಫ್ ನರ್ಸ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಕಿರಣ್ ಕುಮಾರ್ ಇವರು, ಸಮುಧಾಯ ಆರೋಗ್ಯ ಕೇಂದ್ರಕ್ಕೆ ಬಂದ ರೋಗಿಗಳ ಜೊತೆ ಸೌಜನ್ಯವಾಗಿ ನಡೆದುಕೊಳ್ಳದೆ ಮಾನಸಿಕ ಅಸ್ವಸ್ಥನೇನೋ ಎನ್ನುವ ರೀತಿಯಲ್ಲಿ ರೋಗಿಗಳ ಜೊತೆಗೆ ವರ್ತಿಸುತ್ತಾನೆ, ಮೊದಲು ಈತನ ಮನಸ್ಥಿತಿ ಸರಿ ಇದೆಯೋ ಇಲ್ಲವೋ ಎಂದು ಪರೀಕ್ಷಿಸಿ, ಖಚಿತಪಡಿಸಿಕೊಳ್ಳಿ ಜೊತೆಗೆ ಇಂತಹ ನಾಲಾಯಕ್ ಸಿಬ್ಬಂದಿಗಳು ನಮ್ಮ ತಾಲೂಕಿನ ಆಸ್ಪತ್ರೆಯಲ್ಲಿ ಬೇಡವೇ ಬೇಡ , ಈತನ ವಿರುದ್ದ ಸಾಕಷ್ಟು ಭಾರಿ ಹಿಂದಿನ ದಿನಗಳಲ್ಲಿ ಡಿ ಹೆಚ್ ಓ ಆದ ಡಾ. ಶಂಕರನಾಯ್ಕ್ ರವರಿಗೂ ಪತ್ರಗಳ ಮೂಲಕ, ಫೋನ್ ಗಳ ಮೂಲಕ, ಪತ್ರಿಕೆಗಳ ಮೂಲಕ, ತಿಳಿಸಿದ್ದರೂ ಕೂಡಾ ಈತನ ಮೇಲೆ ಯಾವುದೇ ರೀತಿಯ ಕರ್ತವ್ಯದ ಮೇಲೆ ಕ್ರಮ ತೆಗೆದುಕೊಳ್ಳದಿರುವುದನ್ನು ನೋಡಿದರೆ ನಮಗೆ ಸೋಜಿಗೆ ಆಗುತ್ತದೆ, ಮೊದಲು ಇಂಥವರನ್ನು ಈ ಸಮುಧಾಯ ಅರೋಗ್ಯ ಕೇಂದ್ರದಿಂದ , ಡಾ.ಸುಲೋಚನಾ ಮತ್ತು ಸ್ಟಾಫ್ ನರ್ಸ್ ಕಿರಣ್ ಕುಮಾರ್ ಅವರನ್ನು ಕೂಡಲೇ ಕರ್ತವ್ಯದಿಂದ ವಜಾಗೊಳಿಸಬೇಕೆಂದು ತನಿಖಾಧಿಕಾರಿಗಳಿಗೆ ಇವರ ವಿರುದ್ಧ ದೂರು ನೀಡಿ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಸಂಘಟನೆಗಳ ಪಧಾದಿಕಾರಿಗಳು ಸದಸ್ಯರು ಇತರರು ಇದ್ದರು.
ವರದಿ: ಕೆ. ಗೋಣೆಪ್ಪ




















