ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಸ್ವಾರ್ಥವಿಲ್ಲದ ಭಕ್ತಿ ಮಾಡಿದಾಗ ಮುಕ್ತಿ ಹೊಂದಲು ಸಾಧ್ಯ -ಶರಣಬಸವ ಶಾಸ್ತ್ರಿಗಳು

ಬಾಗಲಕೋಟೆ/ ಮುಧೋಳ : ಗುರುವಿನಲ್ಲಿ ಶರಣಾಗತಿಯನ್ನು ಹೊಂದಿ ಮನದಲ್ಲಿರುವ ಅಹಂಕಾರವನ್ನ ತ್ಯಾಗ ಮಾಡಿ ಗುರು ಆಜ್ಞೆಯನ್ನು ಪಾಲನೆ ಮಾಡುವುದರೊಂದಿಗೆ ಗುರುಸೇವೆಯಲ್ಲಿ ಸ್ವಾರ್ಥವಿಲ್ಲದ ಭಕ್ತಿ ಮಾಡಿದಾಗ ಮಾತ್ರ ಮುಕ್ತಿ ಹೊಂದಲು ಸಾಧ್ಯ ಎಂದು ಮುಗಳಖೋಡದ            ಶ್ರೀಸಿದ್ಧಾರೂಢ ಭಾರತಿ ಆಶ್ರಮದ ಪೂಜ್ಯರಾದ ಶರಣಬಸವ ಶಾಸ್ತ್ರಿಗಳು ಅಭಿಪ್ರಾಯ ಪಟ್ಟರು.
ಅವರು ಮುಧೋಳ ತಾಲೂಕಿನ ಆಲಗುಂಡಿ ಬಿಕೆ ಗ್ರಾಮದಲ್ಲಿ ರಾಷ್ಟ್ರೀಯ ಬಸವ ಚಿಂತನ ಬಳಗವು ಆಯೋಜಿಸಿದ 33ನೇ ಶಿವಾನುಭವ ಕಾರ್ಯಕ್ರಮದಲ್ಲಿ “ಗುರುಪೂರ್ಣಿಮೆ” ವಿಷಯವನ್ನು ಆಧಾರವಾಗಿಟ್ಟುಕೊಂಡು ಮಾತನಾಡುತ್ತಾ ಗುರುವಿನ ವಾಕ್ಯವನ್ನು ಶ್ರದ್ಧಾ ಭಕ್ತಿಯಿಂದ ಶ್ರವಣ ಮಾಡಿದಾಗ ಜ್ಞಾನವು ಪ್ರಾಪ್ತಿಯಾಗುತ್ತದೆ. ಗುರು ಕರಣೆ ಸಂಪಾದಿಸದವನಿಗೆ ಏನು ಮಾಡಿದರೂ ಜ್ಞಾನ ದೊರೆಯಲಾರದು ಎಂದರು.
ಸದ್ಗುರು ಶಿವಲಿಂಗೇಶ್ವರ ಮಠದ ಪೂಜ್ಯರಾದ ಸಿದ್ದಯ್ಯ ಸ್ವಾಮಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಬಸವ ಚಿಂತನ ಬಳಗದ ಮುಖ್ಯಸ್ಥರಾದ ಸದುಗೌಡ ಸೈಯಪ್ಪಗೋಳ .ಸುಹಾಸಿನಿ ಮುರನಾಳ. ಗಿರಿಜಮ್ಮ ತೊರಲಿ. ವಿವೇಕಾನಂದ ಹಿರೇಮಠ. ಮುಂತಾದವರು ಸೇರಿದಂತೆ ನೂರಾರು ಜನ ಪಾಲ್ಗೊಂಡಿದ್ದರು.
ಬಸವ ಬಳಗದ ಮುಖಂಡರಾದ ಹನುಮಂತ ಕಲಬಿ ಸ್ವಾಗತಿಸಿ ವಂದಿಸಿದರು.

– ಕರುನಾಡ ಕಂದ ಸುದ್ದಿ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!