ಬೀದರ್ ಜಿಲ್ಲೆ ಔರಾದ್ ತಾಲೂಕಿನ ಔರಾದ್ ಪಟ್ಟಣದ ಬಸವೇಶ್ವರ ವೃತದಲ್ಲಿ ಸೆಪ್ಟೆಂಬರ್ 4ರಂದು ಅದ್ದೂರಿಯಾಗಿ ನಡೆಯಲಿರುವ ಉದ್ಭವ ಲಿಂಗ ಶ್ರೀ ಅಮರೇಶ್ವರ ದಹಿ ಹಂಡಿ ಉತ್ಸವದ ಕಾರ್ಯಕ್ರಮ ಪ್ರಚಾರವಾಗಿ ಶುಕ್ರವಾರ ಶ್ರೀ ಅಮರೇಶ್ವರ ದೇವಸ್ಥಾನದ ಪ್ರಚಾರ ರಥಕ್ಕೆ ಚಾಲನೆ ನೀಡಲಾಯಿತು. ಅಮರೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಪ್ರಚಾರದ ರಥಕ್ಕೆ ಚಾಲನೆ ನೀಡಲಾಗಿದ್ದು ರಥವು ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಸಂಚರಿಸಿ ದಹಿ ಹಂಡಿ ಉತ್ಸವ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಿದೆ.
ಶಾಸಕ ಪ್ರಭು ಚೌಹಾಣ್ ಅವರ ಸಾರಥ್ಯದಲ್ಲಿ ದಹಿ ಹಂಡಿ ಉತ್ಸವ ಪ್ರತಿ ವರ್ಷ ಭಕ್ತ ಸಂಭ್ರಮ ಹಾಗೂ ಸಾಂಸ್ಕೃತಿಕ ವೈಭವದೊಂದಿಗೆ ನಡೆಯುತ್ತದೆ ಈ ಬಾರಿ ಸಾವಿರಾರು ಭಕ್ತರು ಹಾಗೂ ಸಾರ್ವಜನಿಕ ಪಾಲ್ಗೊಳ್ಳುವ ನಿರೀಕ್ಷೆ ಇದೆ ಉತ್ಸವವನ್ನು ಯಶಸ್ವಿಗೊಳಿಸಲು ಭಕ್ತರು ಯುವಕರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮಕ್ಕೆ ಶೋಭೆ ತರಬೇಕೆಂದು ಪ್ರಚಾರ ಸಮಿತಿ ಪ್ರಮುಖ ಆನಂದ್ ಪಿದ್ಯಾಡೆ ಮನವಿ ಮಾಡಿದರು.
ಹಿರಿಯರಾದ ಧೋಡಿ ಬಾ ನೊರಾಟೆ ಶಿವರಾಜ್ ಆಲ್ಮಜೆ ಶ್ರೀನಿವಾಸ್ ದಯಾನಂದ್ ರಾಜಕುಮಾರ್ ಪಟ್ನೆ ಪ್ರಕಾಶ್ ಅವರಾದ್ಕರ್ ಸಂತೋಷ್ ಪುಲಾರಿ ಅಮರ್ ಸ್ವಾಮಿ ಸಚಿನ್ ಹ ವರಿಗೆ ವಿಶಾಲ ಪಾಟೀಲ್ ಯಾದಾರಾವ್ ಮೈತ್ರಿ ರಾಜಪ್ಪ ಮೈಲಾರಿ ಲಕ್ಷ್ಮಣ ರಾಠೋಡ್ ಸೇರಿದಂತಹ ಅನೇಕರು ಪಾಲ್ಗೊಂಡಿದ್ದರು.
ವರದಿ ಸಂಗಮೇಶ ಚಿದ್ರೆ




















