ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಶ್ರೀ ಚಿತ್ರಲಿಂಗೇಶ್ವರ ಮತ್ತು ಶ್ರೀ ಕ್ಯಾತಲಿಂಗೇಶ್ವರ ಸ್ವಾಮಿಯ ಪುನರ್ ಪ್ರತಿಷ್ಠಾಪನ ಮಹೋತ್ಸವ.

ಹೊಸಕೋಟೆ ಗ್ರಾಮದಲ್ಲಿ ಕಾಡುಗೊಲ್ಲ ಭಕ್ತರ ಆರಾಧ್ಯ ದೇವರುಗಳಾದ ಶ್ರೀ ಚಿತ್ರಲಿಂಗೇಶ್ವರ ಮತ್ತು ಶ್ರೀಕ್ಯಾತಲಿಂಗೇಶ್ವರ ಸ್ವಾಮಿಯ ಪುನರ್ ಪ್ರತಿಷ್ಠಾಪನ ಮಹೋತ್ಸವ ಅತ್ಯಂತ ಸಡಗರ ಸಂಭ್ರಮ ಮತ್ತು ಶ್ರದ್ಧಾಭಕ್ತಿಯಿಂದ ಗುರುವಾರ ನಡೆಯಿತು.

ಕೊರಟಗೆರೆ. ತಾಲ್ಲೂಕಿನ ಹೊಸಕೋಟೆ ಗ್ರಾಮದಲ್ಲಿ ಗ್ರಾಮಸ್ಥರು ಹಾಗೂ ಶ್ರೀ ಮತಿಪ್ರೇಮ ಮಹಾಲಿಂಗಪ್ಪನವರ ನೇತೃತ್ವದಲ್ಲಿ ದೇವಾಲಯಗಳ ಪುನರ್ ಪ್ರತಿಷ್ಠಾಪನ ಮಹೋತ್ಸವ ಗಂಗಾಪೂಜೆ, ಗಣಪತಿ ಪೂಜೆ, ರಕ್ಷಾ ಸೂತ್ರ, ಪುಣ್ಯ, ಕಳಶ ಪ್ರತಿಷ್ಠಾಪನೆ, ಪ್ರಾಣ ಪ್ರತಿಷ್ಠಾಪನೆ,ವಿಶೇಷ ಅಲಂಕಾರ, ಕುಂಕುಮಾರ್ಚನೆ ,ಹೋಮ, ಮಹಾಮಂಗಳಾರತಿ ಸೇರಿದಂತೆ ನಾನಾ ದೇವತಾ ಧಾರ್ಮಿಕ ಕಾರ್ಯಕ್ರಮಗಳು ಶಾಸ್ತ್ರೋಕ್ತವಾಗಿ ಅದ್ದೂರಿಯಿಂದ ನೆರವೇರಿದವು.

ಕಾರ್ಯಕ್ರಮವು ಜಿಲ್ಲಾ ಪಂಚಾಯತ್ ಸದಸ್ಯರಾದ ಶ್ರೀಮತಿ ಪ್ರೇಮ ಮಹಾಲಿಂಗಪ್ಪನವರ ಅಧ್ಯಕ್ಷತೆಯಲ್ಲಿ ವಿಶೇಷ ಪೂಜೆ ಸಲ್ಲಿಸಿ ದೇವರ ಕಾರ್ಯಗಳಿಗೆ ಚಾಲನೆ ನೀಡಿ. ನಮ್ಮ ಗ್ರಾಮದಲ್ಲಿ ದೇವಾಲಯಗಳ ಅಭಿವೃದ್ಧಿಯು ನಮ್ಮೆಲ್ಲರ ಸಹಬಾಳ್ವೆಯ ಗುಣಗಳನ್ನು ನಾಡಿಗೆ ತೋರಿಸುವ ಮಾದರಿಯಾಗಿದೆ. ಮನುಷ್ಯನಿಗೆ ಸಂಪತ್ತು, ಅಧಿಕಾರ, ಸ್ಥಾನಮಾನಗಳು, ಶಾಶ್ವತವಲ್ಲ ಆದರೆ ಆತ ಮಾಡಿದ ಒಳ್ಳೆಯ ಕಾರ್ಯಗಳು ಸಮಾಜಕ್ಕೆ ನೀಡಿದ ಕೊಡುಗೆ ಹಾಗೂ ಮಾನವೀಯ ಮೌಲ್ಯಗಳು ಮಾತ್ರ ಆತನನ್ನು ಶಾಶ್ವತವಾಗಿ ನೆನಪಾಗಿ ಉಳಿಯುತ್ತದೆ ಎಂದು ಅನ್ನ ಸಂರ್ಪಣೆ ಸೇವೆಗೆ ಸಹಕರಿಸಿದ ಪ್ರೇಮ ಮಹಾಲಿಂಗಪ್ಪನವರ ಹಾಗೂ ಕುಟುಂಬದವರು ಭಾಗಿಯಾಗಿ ಸದ್ಭಕ್ತರಲ್ಲಿ ಇರುವ ಭಕ್ತಿ ಮತ್ತು ಪ್ರೀತಿಯನ್ನು ಕಂಡು ಗ್ರಾಮಸ್ಥರಿಗೆ ಅಭಿನಂದಿಸಿದರು.

ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಶ್ರೀ ಶ್ರೀ ಶ್ರೀ ಯಾದವನಂದ ಮಹಾಸ್ವಾಮಿಗಳು, ಶ್ರೀ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿಗಳು, ಶ್ರೀ ಶ್ರೀ ಡಾ. ಹನುಮಂತನಾಥ ಸ್ವಾಮೀಜಿ ಹಾಗೂ ಶ್ರೀ ಶ್ರೀ ಬಸವರಮಾನಂದ ಸ್ವಾಮೀಜಿಗಳು ಭಾಗವಹಿಸಿ ಗ್ರಾಮದ ಭಕ್ತರಲ್ಲಿ ಇರುವ ಭಕ್ತಿಯನ್ನು ಕಂಡು ಪೂಜೆ ಪುನಸ್ಕಾರಗಳು ಮನುಷ್ಯ ಹೇಗೆ ಬದುಕಬೇಕು ಸಮಾಜದೊಂದಿಗೆ ಹೇಗೆ ತಿಳಿದುಕೊಳ್ಳಬೇಕು, ಯಾವುದು ಒಳ್ಳೆಯದು ಯಾವುದಕ್ಕೆ ಎಂಬುದನ್ನು ತಿಳಿಸುವುದು ಅಷ್ಟೇ ಮುಖ್ಯ. ದೇವರಗಳು ಕಲ್ಲಿನ ರೂಪದಲ್ಲಿರುವ ಹೂವಿನಂತ ಮನಸ್ಸಿನ ದೇವರುಗಳು ಭಕ್ತರಿಗೆ ಒಳ್ಳೆಯ ಆಶೀರ್ವಾದ ಮಾಡಲಿ ಎಂದು ಆಶಿಸುತ್ತಾ ಇಷ್ಟಾರ್ಥಗಳು ಪ್ರಾಪ್ತಿಯಾಗಲೆಂದು ಬೇಡಿಕೊಂಡರು.
ಶ್ರೀ ಹನುಮಂತನಾಥ ಸ್ವಾಮೀಜಿ ಅವರು ಗೊಲ್ಲರಹಟ್ಟಿ ಗ್ರಾಮಗಳು ಮುಂದೆ ಕಂದಾಯ ಗ್ರಾಮಗಳಾಗಿ ಪರಿವರ್ತನೆಯಾಗಬೇಕು. ಅವರ ಕಟ್ಟುನ ನಿಯಮಗಳನ್ನು ನಾಗರಿಕತೆ ಅನುಗುಣವಾಗಿ ಬದಲಾಯಿಸಿ ಮುಂದೆ ಸಾಗಬೇಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಗ್ರಾಮದ ಗೊಲ್ಲರಟ್ಟಿ ಗೌಡರು, ಯಜಮಾನರು, ಪೂಜಾರ್ , ಕಾಡುಗೊಲ್ಲರು,ಹಾಗೂ ಅಕ್ಕಪಕ್ಕದ ಸಮಸ್ತ ಭಕ್ತರು ,ಗೊಲ್ಲರ ಸಮುದಾಯದ ಕುಲಬಾಂಧವರು ಎಲ್ಲರೂ ಭಾಗಿಯಾಗಿ ಮೂರು ದಿನಗಳ ಕಾಲ ದೇವಾಲಯಗಳ ಪುನರ್ ಚೇತನ ಹಾಗೂ ದೇವರುಗಳ ಜಾತ್ರಾ ಮಹೋತ್ಸವವನ್ನು ಸಂಭ್ರಮದಿಂದ ನೆರವೇರಿಸಿದರು.

ವರದಿ ಪ್ರಸನ್ನಕುಮಾರ್ . ಎಸ್.ಕೊರಟಗೆರೆ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!