
ಪುಣೆ: ಶಿಕ್ಷಕರ ದಿನಾಚರಣೆಯ ಅಂಗವಾಗಿ ದಿನಾಂಕ 05 ಸೆಪ್ಟೆಂಬರ್ 2026ರಂದು ತಳೆಗಾಂವ್ ದಾಭಾಡೆಯಲ್ಲಿ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಈ ಸಂದರ್ಭದಲ್ಲಿ ಗ್ರಾಮೀಣ ಕೌಶಲ್ಯಾಭಿವೃದ್ಧಿ, ಸ್ವಯಂ ಉದ್ಯೋಗ ಸೃಷ್ಟಿ ಹಾಗೂ ಯುವಜನರ ಸಬಲೀಕರಣ ಕ್ಷೇತ್ರದಲ್ಲಿ ಕೆನರಾ ಬ್ಯಾಂಕ್ RUDSETI ತಳೆಗಾಂವ್ ದಾಭಾಡೆ ಸಂಸ್ಥೆಯು ಸಲ್ಲಿಸುತ್ತಿರುವ ಗಮನಾರ್ಹ ಸೇವೆಯನ್ನು ಗುರುತಿಸಿ, ರೋಟರಿ ಕ್ಲಬ್, ತಳೆಗಾಂವ್ ದಾಭಾಡೆ ವತಿಯಿಂದ ಪ್ರತಿಷ್ಠಿತ “ರೋಟರಿ ವೃತ್ತಿಪರ ಶ್ರೇಷ್ಠತಾ ಪ್ರಶಸ್ತಿ” ನೀಡಿ ಗೌರವಿಸಲಾಯಿತು.

ಕೆನರಾ ಬ್ಯಾಂಕ್ RUDSETI ಸಂಸ್ಥೆಯು ಗ್ರಾಮೀಣ ಪ್ರದೇಶದ ಯುವಜನರಿಗೆ ವಿವಿಧ ಕೌಶಲ್ಯಾಧಾರಿತ ತರಬೇತಿಗಳನ್ನು ನೀಡುವ ಮೂಲಕ ಸ್ವಯಂ ಉದ್ಯೋಗ ಮತ್ತು ಉದ್ಯಮಶೀಲತೆಗೆ ಉತ್ತೇಜನ ನೀಡುತ್ತಿದೆ. ಯುವಜನರು ತಮ್ಮ ಸ್ವಂತ ಉದ್ಯೋಗವನ್ನು ಆರಂಭಿಸಿ ಆರ್ಥಿಕವಾಗಿ ಸ್ವಾವಲಂಬಿಗಳಾಗಲು ಅಗತ್ಯವಾದ ತರಬೇತಿ, ಮಾರ್ಗದರ್ಶನ ಹಾಗೂ ಪ್ರೋತ್ಸಾಹವನ್ನು ನೀಡುತ್ತಿರುವ ಸಂಸ್ಥೆಯ ಕಾರ್ಯವನ್ನು ರೋಟರಿ ಕ್ಲಬ್ ಶ್ಲಾಘಿಸಿತು.
ಈ ಸಂದರ್ಭದಲ್ಲಿ ನೀಡಲಾದ ರೋಟರಿ ವೃತ್ತಿಪರ ಶ್ರೇಷ್ಠತಾ ಪ್ರಶಸ್ತಿಯನ್ನು ಕೆನರಾ ಬ್ಯಾಂಕ್ RUDSETI ತಳೆಗಾಂವ್ ದಾಭಾಡೆಯ ನಿರ್ದೇಶಕರಾದ ಶ್ರೀ ರಾಜಕುಮಾರ್ ಬಿರಾದಾರ್ ಅವರು ಸಂಸ್ಥೆಯ ಪರವಾಗಿ ಸ್ವೀಕರಿಸಿದರು.
ಈ ಪ್ರಶಸ್ತಿಯು ಕೆನರಾ ಬ್ಯಾಂಕ್ RUDSETI ಸಂಸ್ಥೆಯ ಗ್ರಾಮೀಣ ಕೌಶಲ್ಯಾಭಿವೃದ್ಧಿ ಮತ್ತು ಯುವಜನ ಸಬಲೀಕರಣ ಕ್ಷೇತ್ರದಲ್ಲಿನ ಸೇವೆಗೆ ದೊರೆತ ಮಹತ್ವದ ಮಾನ್ಯತೆಯಾಗಿದೆ. ಪ್ರಶಸ್ತಿ ಪ್ರದಾನವು ಸಂಸ್ಥೆಯ ಸಿಬ್ಬಂದಿ ಹಾಗೂ ತರಬೇತುದಾರರಿಗೆ ಮತ್ತಷ್ಟು ಉತ್ಸಾಹ ಮತ್ತು ಪ್ರೇರಣೆಯನ್ನು ನೀಡಿದ್ದು, ಗ್ರಾಮೀಣ ಯುವಜನರ ಅಭಿವೃದ್ಧಿಗಾಗಿ ಸಂಸ್ಥೆಯ ಸೇವಾ ಕಾರ್ಯಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಮುಂದುವರಿಸಲು ಉತ್ತೇಜನ ನೀಡಿದೆ.
ಕಾರ್ಯಕ್ರಮವು ಯಶಸ್ವಿಯಾಗಿ ನೆರವೇರಿತಲ್ಲದೆ ಕೆನರಾ ಬ್ಯಾಂಕ್ ರುಡ್ ಸೆಟ್ ಗೆ ಬಂದು ಈ ಗೌರವವು ಸಂಸ್ಥೆಯ ಕಾರ್ಯಚಟುವಟಿಕೆಗಳಿಗೆ ಮತ್ತಷ್ಟು ಮೌಲ್ಯ ಮತ್ತು ಪ್ರೇರಣೆಯನ್ನು ನೀಡಿದೆ ಎಂದು ಶ್ರೀ ಕೊಡಕ್ಕಲ್ ಶಿವಪ್ರಸಾದ್, ಅಧ್ಯಕ್ಷರು, ಇಂಡಿಯನ್ ದಿವ್ಯಾಂಗ ಎಂಪವರ್ಮೆಂಟ್ ಅಸೋಸಿಯೇಷನ್ (ರಿ.) ಇವರು ಅಭಿನಂದಿಸಿದ್ದಾರೆ.




















