ಮೈಸೂರು : ನಂಜನಗೂಡು ಪಟ್ಟಣದ ಉನ್ನತೀಕರಿಸಿದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ ಅಂಗವಾಗಿ ಬಡ್ತಿ ಮುಖ್ಯ ಶಿಕ್ಷಕರಾದ ಲೀಲಾವತಿ ಹಾಗೂ ಸಹ ಶಿಕ್ಷಕ ಬಂಧುಗಳಿಗೆ ಮಕ್ಕಳಿಂದ ಅಕ್ಷರವನ್ನು ಕಲಿಸಿದ ಮತ್ತು ಜೀವನದ ಮೌಲ್ಯಗಳನ್ನು ತಿಳಿಸಿದ ಗುರುಗಳಿಗೆ ಗುರುವಂದನಾ ಕಾರ್ಯಕ್ರಮದಲ್ಲಿ ಸಿಹಿ ಹಾಗೂ ಹೂಗುಚ್ಛ ನೀಡಿ, ಪ್ರೀತಿಪೂರ್ವಕವಾಗಿ, ಆತ್ಮೀಯವಾಗಿ , ಅಭಿನಂದನೆಗಳನ್ನು ನೀಡಿ ಗೌರವಿಸುವುದರ ಮೂಲಕ ಶಿಕ್ಷಕ ದಿನಾಚರಣೆಯಲ್ಲಿ ಶುಭಾಶಯಗಳನ್ನು ಕೋರಿದರು.




















