ಬೀದರ್ ಜಿಲ್ಲೆ ಬಸವಕಲ್ಯಾಣ ತಾಲೂಕಿನ ಸುಕ್ಷೇತ್ರ ಕಾಂಬಳೆವಾಡಿ ಗ್ರಾಮದಲ್ಲಿ ನಿನ್ನೆ ದಿನಾಂಕ 04/09/2026 ರಂದು ಸಾಯಂಕಾಲ 04:00 ಗಂಟೆಗೆ ಶ್ರೀಕೃಷ್ಣ ಜನ್ಮಾಷ್ಟಮಿಯು ಬಹು ವಿಜೃಂಬಣೆಯಿಂದ ಜರುಗಿತು.
ಕಾರ್ಯಕ್ರಮದಲ್ಲಿ ಮೊದಲು ಪಾರ್ಥನೆ ಗೀತೆ,
ನಂತರ ಸ್ವಾಗತ ಭಾಷಣ, ಅತಿಥಿ ಸತ್ಕಾರದ ನಂತರ PUC ಮತ್ತು SSLC ಪರೀಕ್ಷೆಯಲ್ಲಿ ಪ್ರಥಮ ಮತ್ತು ದ್ವಿತೀಯ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಿ, ತದ ನಂತರ ಗ್ರಾಮದ ಮುದ್ದು ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಅತೀ ಸುಂದರವಾಗಿ ನಡೆಸಲಾಯಿತು.
ಸರಕಾರಿ ವೃತ್ತಿಯಲ್ಲಿ ಮುಂಬಡ್ತಿ ಮತ್ತು ವಿಶೇಷ AEE ನೌಕರಿದಾರರಿಗೆ ವಿಶೇಷ ಸನ್ಮಾನ ಮಾಡಲಾಯಿತು. ಸದರಿ ಕಾರ್ಯಕ್ರಮದಲ್ಲಿ ಬಸವಕಲ್ಯಾಣ ಶಾಸಕರಾದ ಸನ್ಮಾನ್ಯ ಶ್ರೀ ಶರಣು ಸಲಗರ, ಕಾಂಬಳೆವಾಡಿ ಗ್ರಾಮದ ಸರಕಾರಿ ನೌಕರರ ಅಧ್ಯಕ್ಷರಾದ ಶ್ರೀ ಶಾಹುರಾಜ್ ಪಾಶೇಮೆ, ಶಿವು ಶೇಟಗಾರ್, ಗೀರಿಶ್ ತಾಂಬೋಳೆ, ದತ್ತು ಪದ್ಮೇ, ಮಂಠಾಳ ಠಾಣೆಯ ಪಿ.ಎಸ್. ಐ. ಶ್ರೀಮತಿ ಸುವರ್ಣಾ ಮಲ್ಲಶೆಟ್ಟಿ, ಪುಂಡಲೀಕ ಪಿಲಂಗೋಲೆ, ಹರಿಕಿಶನ್ ಪಾಶೇಮೆ, ಅನೀಲ್ ಪುಣೆಕರ್, ರಾಘವೇಂದ್ರ ಬೋದ್ದೆ, ಭೀಮಾಶಂಕರ್ ಬೋಯನೇ, ಶ್ರೀನಿವಾಸ್ ಪಿಲಂಗೋಲೆ, ಭಗವತ್ ಬೋದ್ದೆ, ಭೀಮಾಶಂಕರ್ ಬೋದ್ದೆ, ಬಳಿರಾಮ ಪಾಶೇಮೆ, ಹಣಮಂತ ಪಾಶೇಮೆ, ಜಾಲಿಂದ್ರ ಗೊರ್ಲೆ, ದಶರಥ ಗೊರ್ಲೆ, ಆದಿನಾಥ್ ಪಾಶೇಮೆ ಸೇರಿದಂತೆ ಸಮಸ್ತ ಕಾಂಬಳೆವಾಡಿ ಗ್ರಾಮಸ್ಥರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ವರದಿ : ಶ್ರೀನಿವಾಸ ಬಿರಾದಾರ




















