
ಕೊಪ್ಪಳ : 04.09.2026 ರಂದು ಭಾಗ್ಯನಗರದ ಕೀರ್ತಿಕಾಲೋನಿಯ ಶಾಂತಗಿರಿ ಸಭಾಂಗಣದಲ್ಲಿ ಶ್ರೀ ಕೃಷ್ಣ ಜನ್ಮಾಷ್ಠಮಿಯ ನಿಮಿತ್ಯ ಸಂಗೀತ ಕಾರ್ಯಕ್ರಮ ಜರುಗಿತು.

ಆರಂಭದಲ್ಲಿ ಶ್ರೀ ಶಿವನಗೌಡ ಎಲ್. ಶಾಂತಗಿರಿಯವರು ಸಂಗೀತ ಸೇವೆಗೈದರು, ನಂತರ ಕುಕನೂರಿನ ವಿದ್ಯಾನಂದ ಗುರುಕುಲ ವಿಶ್ವಸ್ತ ಮಂಡಳಿಯ ಶ್ರೀ ಜಿ ಎಸ್. ಮೇಲುಕೋಟೆ ಪಾಲಿಟೆಕ್ನಿಕ್ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಶ್ರೀ ಎನ್. ಆರ್. ಕುಕನೂರ್ ಅವರು ಶ್ರೀ ಕೃಷ್ಣನ ಕುರಿತಾದ ವಿಶೇಷ ಹಾಡುಗಳನ್ನು ಹಾಡಿ ಪ್ರೇಕ್ಷಕ ಬಂಧುಗಳು ಹಾಡು ಮತ್ತು ಭಜನ್ಸ್ ನಲ್ಲಿ ತಲ್ಲಿನರಾಗುವಂತೆ ಮಾಡಿದರು. ಸುಮಾರು ಎರಡು ಗಂಟೆಗೂ ಹೆಚ್ಚು ಕಾಲ ಸಂಗೀತ ಕಾರ್ಯಕ್ರಮ ಜರುಗಿತು.
ತಬಲಾ ವಾದಕರಾಗಿ ಶ್ರೀ ಶೇಖರ್ ಮಹಾಂತ್ ಹಾಗೂ ಹಾರ್ಮೋನಿಯಂ ಸಾಥ್ ನ್ನು ಶ್ರೀ ಪರಶುರಾಮ್ ದಲಬಂಜನ್ ಸಾ. ಭಾಗ್ಯನಗರ ಮತ್ತು ಭಜನೆಯಲ್ಲಿ ಶ್ರೀ ಕೃಷ್ಣ ಸೊರಟೂರ್ ಭಾಗವಹಿಸಿದ್ದರು.
ಇದೆ ಸಂದರ್ಭದಲ್ಲಿ ಶ್ರೀ ಏಕನಾಥ್ ಭಾವಿಕಟ್ಟಿ, ಆರ್. ಎಸ್. ಎಸ್. ನ ಕಾರ್ಯ ನಿರ್ವಾಹಕರು ಮತ್ತು ನಿವೃತ್ತ ನೌಕರರಾದ ಶ್ರೀ ಸುದೀoದ್ರ ಮತ್ತು ಶ್ರೀ ಶ್ರೀ ನಿವಾಸ, ಸಂಸ್ಕಾರ ಭಾರತಿ ತಂಡದ ಉಪಾಧ್ಯಕ್ಷರು, ಶರಣೆ ವಿಜಯಲಕ್ಷ್ಮಿ ಮುರುಗೋಡ್, ಸೇರಿದಂತೆ ಇರಕಲ್ಗಡಾದ ಸ. ಪ. ಪೂ. ಕಾಲೇಜಿನ ಸಮಾಜಶಾಸ್ತ್ರ ಉಪನ್ಯಾಸಕಿ ಶ್ರೀ ಮತಿ ಇರಬಸಮ್ಮ (ನವ್ಯಾ )ಎಂ. ನೆಲಾಗಣಿ, ಭಾಗ್ಯನಗರದ ಪ್ರೇರಣಾ ಶಾಲೆಯ ಶಿಕ್ಷಕಿಯರಾದ ಗಾಯತ್ರಿ ಪಿ. ಹಳ್ಳಿ, ಶ್ರೀಮತಿ ಪೂರ್ಣಿಮಾ ರವಿ ಗೋನಾಳ್ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಕು. ಬನಶ್ರೀ, ಭವಿಷ್, ಪ್ರತೀಕ್ಷಾ, ಭೂಮಿ, ಖುಷಿ, ಮಾನಸಾ, ಸಮರ್ಥ, ಶ್ರೇಯಾ, ಆರಾಧ್ಯ ಸೇರಿದಂತೆ ಹಲವಾರು ವಿದ್ಯಾರ್ಥಿಗಳು ಕೃಷ್ಣ ಮತ್ತು ರಾಧೇಯರ ವೇಷಭೂಷಣ ಧರಿಸಿದ್ದು ಪ್ರೇಕ್ಷಕರ ಗಮನಸೆಳೆಯಿತು.
ಶ್ರೀ ಸುದೀOದ್ರ ಅವರು ಸಂಗೀತ ಕಲಾವಿದರಿಗೆ ಗೌರವ ಸನ್ಮಾನ ಮಾಡಿದರು.
ಕಾರ್ಯಕ್ರಮದ ನಿರ್ವಹಣೆಯನ್ನು ಕೊಪ್ಪಳದ ಸರಕಾರಿ ಪ್ರಥಮದರ್ಜೆ ಕಾಲೇಜಿನ ಕನ್ನಡ ಉಪನ್ಯಾಸಕರಾದ ಡಾ. ಮಹಾಂತೇಶ ಬಿ. ನೆಲಾಗಣಿಯವರು ನಿರ್ವಹಿಸಿದರು.
- ಕರುನಾಡ ಕಂದ ಸುದ್ದಿ



















