ಕೊಟ್ಟೂರು: ಪಟ್ಟಣದ ಆಂಜನೇಯ ಬಡವಾಣೆಯ ಶ್ರೀ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಶ್ರಾವಣ ಮಾಸದ ಶನಿವಾರರಂದು ಶ್ರೀ ಸ್ವಾಮಿಗೆ ವಿಶೇಷ ಬುತ್ತಿ ಪೂಜೆ ಅಲಂಕಾರವನ್ನು ಅರ್ಚಕರಾದ ವಿನಯ್ ಕುಲಕರ್ಣಿ ಅವರು ದೇವಾಲಯದಲ್ಲಿ ಶ್ರೀ ಸ್ವಾಮಿಗೆ ಪಂಚಾಮೃತ ಅಭಿಷೇಕ, ಪುಷ್ಪಾರ್ಚನೆ, ಮಹಾ ಮಂಗಳಾರತಿ ಮತ್ತಿತರ ಧಾರ್ಮಿಕ ವಿಧಿ ವಿಧಾನಗಳಿಂದ ವಿಶೇಷ ಪೂಜೆ ಕೈಗೊಂಡರು. ಶ್ರೀಆಂಜನೇಯ ಸ್ವಾಮಿಗೆ ಬುತ್ತಿ ಅಲಂಕಾರಕ್ಕೆ ಅಕ್ಕಿ, ಹಾಲು, ಮೊಸರು, ದ್ರಾಕ್ಷಿ, ಯಾಲಕ್ಕಿ, ಬಾದಮಿ, ಚರಿ, ಬೆಟ್ಟ ಅಡಿಕೆ ಮತ್ತಿತರ ಬಗೆ ಬಗೆಯ ಧಾನ್ಯಗಳನ್ನು ಬಳಸಲಾಗಿತ್ತು. ಭಕ್ತರು ನಸುಕಿನಿಂದಲೇ ದೇವಾಲಯಕ್ಕೆ ತಂಡಗಳು ಆಗಮಿಸಿ ಸರತಿ ಸಾಲಿನಲ್ಲಿ ನಿಂತು ಭಕ್ತರು ಶ್ರೀ ಸ್ವಾಮಿ ದರ್ಶನ ಆಶೀರ್ವಾದ ಪಡೆದರು. ಭಕ್ತಾದಿಗಳಿಗೆ
ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿತ್ತು. ಸುಮಾರು ಇಪ್ಪತ್ತುಮೂರು ವರ್ಷಗಳಿಂದ ಬುತ್ತಿ ಅಲಾಂಕರ ಪೊಜೆಯನ್ನು ಮಾಡಲು ಇಲ್ಲಿನ ಭಕ್ತರು ಸಹಕಾರದಿಂದ ಆಗಿರುವುದು ಎಂದು ಅರ್ಚಕರು ತಿಳಿಸಿದರು.
ವರದಿ: ಕೆ. ಗೋಣೆಪ್ಪ



















