ಬೀದರ್ ಜಿಲ್ಲೆ ಔರಾದ ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸುವಂತೆ ಆಗ್ರಹಿಸಿ ಪಟ್ಟಣದಲ್ಲಿ ಶಾಸಕ ಪ್ರಭು ಚೌವ್ಹಾ ಣ್ ಅವರ ನೇತೃತ್ವದಲ್ಲಿ ರೈತರು ಮತ್ತು ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿದರು. ಬಸವೇಶ್ವರ ವೃತ್ತದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ ಬಸ್ ನಿಲ್ದಾಣ, ತಾಲೂಕ ಪಂಚಾಯತ್, ಕನ್ನಡಾಂಬೆ ವೃತ್ತಮಾರ್ಗವಾಗಿ ಎಪಿಎಂಸಿ ವೃತ್ತದವರೆಗೆ ಸಾಗಿತು. ನೂರಾರು ರೈತರು ನಾಶವಾದ ಬೆಳೆಗಳನ್ನು ಕೈಯಲ್ಲಿ ಹಿಡಿದು ಮೆರವಣಿಗೆಯಲ್ಲಿ ಭಾಗವಹಿಸಿದರು.
ಶಾಸಕ ಪ್ರಭು ಚೌವ್ಹಾ ಣ್ ಅವರು ತಲೆಯ ಮೇಲೆ ಒಣಗಿದ ಬೆಳೆ ಹೊತ್ತು ಪ್ರತಿಭಟನೆಯಲ್ಲಿ ಪಾಲ್ಗೊಂಡು ಏಕತೆ ವ್ಯಕ್ತಿ ಪಡಿಸಿದರು. ಮೆರವಣಿಗೆಯುದ್ದಕ್ಕೂ ಪ್ರತಿಭಟನಾಕಾರರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು ಬಳಿಕ ನಾಶವಾದ ಬೆಳೆಗಳನ್ನು ಹೆದ್ದಾರಿಯಲ್ಲಿ ಸುರಿದು ಆಕ್ರೋಶ ವ್ಯಕ್ತಪಡಿಸಿ ಕೆಲ ಕಾಲ ರಸ್ತೆ ತಡೆ ನಡೆಸಿದರು.
ಈ ವೇಳೆ ಮಾತನಾಡಿದ ಶಾಸಕ ಪ್ರಭು ಚೌವ್ಹಾ ಣ್ ಸರ್ಕಾರ ಯಾರದೇ ಆಗಿರಲಿ ರೈತರಿಗೆ ನ್ಯಾಯ ದೊರಯ ಬೇಕು ಔರಾದ್ ತಾಲೂಕನ್ನು ಕೂಡಲೇ ಬರಪೀಡಿತ ಪ್ರದೇಶವೆಂದು ಘೋಷಿಸಬೇಕೆಂದು ಒತ್ತಾಯಿಸಿದರು.
10 ದಿನದ ಒಳಗೆ ಬರಗಾಲ ಘೋಷಣೆ ಮಾಡದಿದ್ದರೆ ಮುಖ್ಯಮಂತ್ರಿ ಅವರ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಹಾಗೂ ಔರಾದ ನಿಂದ ಬೀದರ್ ಚಲೋ ಪಾದಯಾತ್ರೆ ಹಮ್ಮಿಕೊಳ್ಳಲಾಗುವುದೆಂದು ಎಚ್ಚರಿಕೆ ನೀಡಿದರು.
ಬೀದರ್ ಜಿಲ್ಲೆಯ ಇತರ ಎಲ್ಲಾ ತಾಲೂಕುಗಳನ್ನು ಬರೆಪೀಡಿತ ಎಂದು ಘೋಷಿಸುವ ಸರಕಾರ ಔರಾದ
ತಾಲೂಕನ್ನು ಮಾತ್ರ ಕಡೆಗಣಿಸದೆ ತಾರತಮ್ಯವನ್ನು ಕೂಡಲೇ ಸರಿಪಡಿಸಬೇಕು ಎಂದು ಅವರು ಆಗ್ರಹಿಸಿದರು ಪ್ರತಿ ಎಕರೆಗೆ 50,000 ರೂ. ಪರಿಹಾರ ನೀಡಬೇಕು, ರೈತರ ಬೆಳೆ ಸಾಲ ಮನ್ನಾ ಮಾಡಬೇಕು ಹಾಗೂ ಔರಾದ್ ತಾಲೂಕಿನ ತಕ್ಷಣವೇ ಒತ್ತಾಯಿಸಿ ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ್ ಪಾಟೀಲ್ ಬಿಜೆಪಿ ಮಂಡಲ ಅಧ್ಯಕ್ಷ ರಾಮ್ ಶೆಟ್ಟಿ ಪ ನ್ನಾಳೆ ಮುಖಂಡರಾದ ಕಿರಣ್ ಪಾಟೀಲ್ ಅರದoತ್ ಸವಳೇ ಚಂದು ಪಾಟೀಲ್ ವಿಜಯಲಕ್ಷ್ಮಿ ಕೌಟ್ಗೆ ವಸಂತ ಬಿರಾದಾರ್ ಶಿವರಾಜ್ ಅಲ್ಮಾಜೆ ಪ್ರಕಾಶ್ ಆಲ್ಮಜಿ ಬಸವರಾಜ ಪಾಟೀಲ್ , ಪ್ರದೀಪ್ ಪವಾರ್ ಪ್ರಕಾಶ್ ಮೇತ್ರಿ ಹಾಗೂ ಆನಂದ್ ಸೇರಿದಂತೆ ಕಾರ್ಯಕರ್ತರು ಮುಖಂಡರು ಹಾಗೂ ರೈತರು ಉಪಸ್ಥಿತರಿದ್ದರು.
ವರದಿ ಸಂಗಮೇಶ ಚಿದ್ರೆ




















