ಹುನಗುಂದ: ‘ಕವಿ ಸಮಯ ವೇದಿಕೆ’ಯ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿರುವ ‘ಕನ್ನಡ ನಾಡಿನ ಹೆಮ್ಮೆಯ ಸಾಹಿತಿಗಳ ಬದುಕು-ಬರಹ’ ಸರಣಿ ಉಪನ್ಯಾಸ ಮಾಲಿಕೆ-೬ ಕಾರ್ಯಕ್ರಮವು ಅಕ್ಟೋಬರ್ 25ರ ಭಾನುವಾರ ಸಂಜೆ 7:00 ಗಂಟೆಗೆ ವರ್ಚುವಲ್ (ಝೂಮ್/ಗೂಗಲ್ ಮೀಟ್) ಮಾಧ್ಯಮದ ಮೂಲಕ ಜರುಗಲಿದೆ.
ಸದರಿ ಕಾರ್ಯಕ್ರಮದಲ್ಲಿ ಬಾಗಲಕೋಟೆಯ ಬಸವೇಶ್ವರ ವಿದ್ಯಾವರ್ಧಕ ಸಂಘದ ಸಹಾಯಕ ಪ್ರಾಧ್ಯಾಪಕರಾದ ಡಾ. ಬಸವರಾಜ ಕುಂಬಾರ ಅವರು ‘ಯು.ಆರ್. ಅನಂತಮೂರ್ತಿಯವರ ಬದುಕು ಮತ್ತು ಬರಹ’ ಎಂಬ ವಿಷಯದ ಕುರಿತು ಪ್ರಧಾನ ಉಪನ್ಯಾಸ ನೀಡಲಿದ್ದಾರೆ.
ಕಾರ್ಯಕ್ರಮದ ಆರಂಭದಲ್ಲಿ ಹುನಗುಂದದ ಬಿ.ಆರ್.ಪಿ ಶ್ರೀಮತಿ ವಿಜಯಲಕ್ಷ್ಮೀ ನಾಗಲೋಟಿ ಅವರ ಪ್ರಾರ್ಥನೆಯೊಂದಿಗೆ ಸಭೆ ಪ್ರಾರಂಭವಾಗಲಿದ್ದು, ಕಮತಗಿಯ ಸಾಹಿತಿ ಶ್ರೀ ಶ್ರೇಯಾಂಶ ಕೋಲಾರ ಅವರು ಎಲ್ಲರನ್ನೂ ಸ್ವಾಗತಿಸಲಿದ್ದಾರೆ. ಉಪನ್ಯಾಸದ ನಂತರ ವಿಷಯದ ಕುರಿತು ಇಬ್ಬರು ಸಾಹಿತ್ಯಾಸಕ್ತರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಲಿದ್ದಾರೆ.
ಸೂಳೇಭಾವಿಯ ಸಾಹಿತಿ ಶ್ರೀ ಅಶೋಕ ಬಳ್ಳಾ ಕಾರ್ಯಕ್ರಮ ನಿರೂಪಿಸಲಿದ್ದು, ಇಳಕಲ್ಲಿನ ಸಾಹಿತಿ ಶ್ರೀ ಬಸವರಾಜ ಬಲಕುಂದಿ ವಂದನಾರ್ಪಣೆ ನೆರವೇರಿಸಲಿದ್ದಾರೆ.
ಸರ್ವ ಕನ್ನಡ ಕವಿ ಮನಸ್ಸುಗಳು ಹಾಗೂ ಸಾಹಿತ್ಯ ಪ್ರೇಮಿಗಳು ಸಂಜೆ 6:55ಕ್ಕೆ ಸಭೆಗೆ ಜಾಯಿನ್ ಆಗುವ ಮೂಲಕ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕಾಗಿ ಸಂಘಟಕರು ಕೋರಿದ್ದಾರೆ.
ಕಾರ್ಯಕ್ರಮದ ಲಿಂಕ್ : https://meet.google.com/xnk-eest-vmu




















