ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಧೂಮಪಾನ ಎಲ್ಲಾ ರೋಗಗಳಿಗೆ ಆಹ್ವಾನ- ಡಾ. ಕೆ. ಪ್ರಜ್ವಲ್ ಚಂದ್ರ

ಶಿರಸಿ: ತಾಯಿಯ ಗರ್ಭದಿಂದ ಹೃದಯ ತನ್ನ ಕೆಲಸವನ್ನು ಆರಂಭಿಸಿ ಮರಣದವರೆಗೂ ನಿರಂತರವಾಗಿ ಕೆಲಸ ನಿರ್ವಹಿಸುತ್ತಿರುತ್ತದೆ. ಇಂತಹ ಅಮೂಲ್ಯವಾದ ಅಂಗವನ್ನು ಕಾಳಜಿಯಿಂದ ಸಂರಕ್ಷಿಸುವುದು ಮುಖ್ಯ; ಸಕ್ಕರೆ ಕಾಯಿಲೆ, ಬೊಜ್ಜು, ಆಲಸ್ಯ ಹೃದಯಕ್ಕೆ ಅಪಾಯಕಾರಿಯಾಗಿದ್ದು, ಧೂಮಪಾನ ಎಲ್ಲ ಕಾಯಿಲೆಗಳಿಗೂ ಹೆಚ್ಚು ಅಪಾಯಕಾರಿ ಎಂದು ನಗರದ ವೆಲ್ನೆಸ್ಟ್ ಆಸ್ಪತ್ರೆ ಹೃದ್ರೋಗ ತಜ್ಞ ಡಾಕ್ಟರ್ ಕೆ ಪ್ರಜ್ವಲ್ ಚಂದ್ರ ನುಡಿದರು.
ಅವರು ಶಿರಸಿಯ ಗಾಯತ್ರಿ ಗೆಳೆಯರ ಬಳಗದಲ್ಲಿ ಜರುಗಿದ ಆರೋಗ್ಯ ಸಲಹೆ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡುತ್ತಿದ್ದರು. ಮುಂದುವರಿದ ಅವರು ಹೃದಯದ ನಿರ್ವಹಣೆ, ಹೃದಯದ ಸಂರಕ್ಷಣೆ, ವಹಿಸಬೇಕಾದ ಕಾಳಜಿ ಕುರಿತು ಹಾಗೂ ಆಂಜಿಯೋ ಪ್ಲಾಸ್ಟಿ ಆಂಜಿಯೋಗ್ರಾಮ ಕುರಿತು ವಿಸ್ತಾರವಾಗಿ ತಿಳಿಸಿ ಸಭಿಕರ ಅನೇಕ ಸಂದೇಹಗಳಿಗೆ ಪರಿಹಾರ ನೀಡಿದರು.

ಇದೇ ಆಸ್ಪತ್ರೆಯ ಎಲಬು ಮೂಳೆ ತಜ್ಞರಾದ ಡಾಕ್ಟರ್ ಯೋಗೇಶ್ ಪಡುವಾಣಿಯವರು ಮೂಳೆ ಸವೆತ ಹೇಗೆ ಬರುತ್ತದೆ? ಇದರಿಂದ ಆಗುವ ತೊಂದರೆಗಳೇನು? ಮೂಳೆ ಸವೆತ ತಡೆಯಲು ಏನೇನು ಮಾಡಬಹುದಾಗಿದೆ? ಎಂಬ ಬಗ್ಗೆ ವಿಸ್ತಾರವಾಗಿ ತಿಳಿಸಿ, ಉತ್ತಮವಾದ ಸಲಹೆಯನ್ನು ನೀಡಿ, ಸಭಿಕರ ಅನೇಕ ಪ್ರಶ್ನೆಗಳಿಗೆ ಉತ್ತರ ನೀಡಿದರು.

ಕಾರ್ಯಕ್ರಮದಲ್ಲಿ ಸಾಹಿತಿ ವಿಮರ್ಶಕ ಡಿ ಎಸ್ ನಾಯ್ಕ್ ಅವರು, ಮುಪ್ಪು ಮಾನವನಿಗೆ ಸಹಜ, ಆರೋಗ್ಯದ ಬಗ್ಗೆ ಕಾಳಜಿ ಇರಲಿ, ಆಹಾರ ಮಿತವಾಗಿರಲಿ, ಹೆಚ್ಚಿಗೆ ಓಡಾಡಬೇಡಿ ಮುಂತಾದ ಸಲಹೆಗಳನ್ನು ಆಲಿಸಬೇಕು ನಿಜ, ಆದರೂ ಇಂತಹ ಅತಿಯಾದ ಸಲಹೆಗಳಿಂದ ಹಿರಿಯ ನಾಗರಿಕರ ಆತ್ಮವಿಶ್ವಾಸ ಕುಗ್ಗುವ ಸಂಭವವಿದೆ. ಆದ್ದರಿಂದ ಹಿರಿಯರು ಅತಿಯಾದ ಆತಂಕಕ್ಕೆ ಒಳಗಾಗದೆ ಜೀವನೋತ್ಸಾಹದಿಂದ, ನೆಮ್ಮದಿಯಿಂದ ಇರಬೇಕೆಂದು ನುಡಿದರು. ಬಂದಿದ್ದೆಲ್ಲ ಬರಲಿ, ದೇವರ ದಯೆಯೊಂದಿರಲಿ ಎನ್ನುವುದೇ ಅವರ ಮಾತಿನ ಸಾರಾಂಶವಾಗಿತ್ತು.
ಪ್ರೊ. ಕೆ ಎನ್ ಹೊಸಮನಿ, ಡಾ. ಆರ್ ಎನ್ ಹೆಗಡೆ ಬಂಡಿಮನೆ, ಇಂದಿರಾ ಬೈಲಕೇರಿ ಅವರು ಗಣ್ಯರ ಪರಿಚಯ ನೆರವೇರಿಸಿದರು.

ತ್ರಿವೇಣಿ ಹೆಗಡೆ ಅವರ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮವನ್ನು ಬಳಗದ ಎಸ್ ಮಂಜುನಾಥ ಅಚ್ಚುಕಟ್ಟಾಗಿ ನಿರ್ವಹಿಸಿ, ಗಣ್ಯರಿಗೆ ಗೌರವಾರ್ಪಣೆ ಮಾಡಿದರು. ಬಳಗದ ಮುಖ್ಯಸ್ಥ ಎಂ ಎಸ್ ಹೆಗಡೆಯವರು ವಂದಿಸಿದರು.

ಈ ಸಂದರ್ಭದಲ್ಲಿ ಗಣ್ಯರಾದ ವಾಸುದೇವ ಶಾನಭಾಗ, ಅಂತೋನಿ ಹೊರ್ಟಾ, ಪ್ರಕಾಶ ನಾಯ್ಕ್, ಎಸ್ ಎಸ್ ಹೆಗಡೆ, ಪಿ ಎನ್ ಭಟ್, ವಿ ಜಿ ಹೆಗಡೆ, ಶಾಂತರಾಮ ಬಂಡಿಮನೆ, ರಾಮಕೃಷ್ಣ ಬೈಲಕೇರಿ, ಲಕ್ಷ್ಮಣ ಶಾನಭಾಗ, ದಿನೇಶ ಪಾಲೇಕರ್, ಸುಧಾ ಎಸ್ ಹೆಗಡೆ, ಆಶಾ ಸಭಾಹಿತ , ಪದ್ಮಾವತಿ ಆರ್ ಹೆಗಡೆ, ಪಿ ಆರ್ ಹೆಗಡೆ, ಡಿ ಜಿ ಹೆಗಡೆ, ಗುರುಪಾದ ಹೆಗಡೆ, ರವಿ ಗಡಿಹಳ್ಳಿ ಮುಂತಾದವರು ಉಪಸ್ಥಿತರಿದ್ದರು.

ವರದಿ: ಕೊಡಕ್ಕಲ್ ಶಿವಪ್ರಸಾದ್ ಶಿವಮೊಗ್ಗ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!