ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

“ರಾಮ ಹುಟ್ಟುವ ಮುನ್ನವೇ ರಾಮಾಯಣ ಬರೆದ ಮಹರ್ಷಿ ವಾಲ್ಮೀಕಿ” — ಶರಣಬಸವ ಶಾಸ್ತ್ರಿಗಳು

ಮುಧೋಳ / ಬಾಗಲಕೋಟೆ: “ಪಾಪದ ಫಲವೇ ದುಃಖ, ಪುಣ್ಯದ ಫಲವೇ ಸುಖ. ಪಾಪದ ಕರ್ಮಗಳಿಂದ ಮನುಷ್ಯ ಅನೇಕ ಅನರ್ಥಗಳನ್ನು ಅನುಭವಿಸುತ್ತಾನೆ. ಪುಣ್ಯದ ಬಲದಿಂದ ದೈವತ್ವದ ಶಕ್ತಿಯನ್ನು ಹೊಂದಲು ಸಾಧ್ಯವಾಗುತ್ತದೆ” ಎಂದು ಮುಗಳಖೋಡದ ಶ್ರೀ ಸಿದ್ಧಾರೂಢ ಭಾರತಿ ಆಶ್ರಮದ ಪೂಜ್ಯರಾದ ಶ್ರೀ ಶರಣಬಸವ ಶಾಸ್ತ್ರಿಗಳು ಅಭಿಪ್ರಾಯಪಟ್ಟರು.

ಮುಧೋಳ ತಾಲೂಕಿನ ಸುಕ್ಷೇತ್ರ ಮುಗಳಖೋಡದ ಶ್ರೀ ಸಿದ್ಧಾರೂಢ ಭಾರತಿ ಆಶ್ರಮದಲ್ಲಿ ಆಯೋಜಿಸಿದ್ದ ಸಂತಶ್ರೀ ಐ.ಎಸ್. ಮಂಟೂರ ಮಹಾರಾಜರ 12ನೇ ವರ್ಷದ ಸ್ಮರಣೋತ್ಸವ ಹಾಗೂ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಸಂತ ಶ್ರೀ ಐ.ಎಸ್. ಮಂಟೂರ ಮಹಾರಾಜರ ಜೀವನಶೈಲಿ ಜನಾಕರ್ಷಣೀಯವಾಗಿತ್ತು. ಸಮಾಜಮುಖಿ ಕಾರ್ಯಗಳಲ್ಲಿ ಸದಾ ತೊಡಗಿಸಿಕೊಂಡಿದ್ದ ಅವರು ದೀನದಲಿತರ ಧ್ವನಿಯಾಗಿದ್ದರು. ಸಮಾಜದ ಒಳಿತಿಗಾಗಿ ಅವರು ಸಲ್ಲಿಸಿದ ಸೇವೆ ಹಾಗೂ ಅವರ ಕಾರ್ಯವೈಖರಿ ಸ್ತುತ್ಯಾರ್ಹವಾಗಿವೆ ಎಂದು ಶರಣಬಸವ ಶಾಸ್ತ್ರಿಗಳು ಸ್ಮರಿಸಿದರು.

ಮುಂದುವರಿದು ಮಾತನಾಡಿದ ಅವರು, ಮಹರ್ಷಿ ವಾಲ್ಮೀಕಿಯವರ ಜೀವನ ಇಡೀ ಮಾನವಕುಲಕ್ಕೆ ಸಾರ್ವಕಾಲಿಕ ಸಂದೇಶವನ್ನು ನೀಡುತ್ತದೆ. ತಮ್ಮ ತಪಸ್ಸು, ಜ್ಞಾನ ಮತ್ತು ಸಾಧನೆಯ ಮೂಲಕ “ಶ್ರೀರಾಮನ ಜನನಕ್ಕೂ ಮುನ್ನವೇ ರಾಮಾಯಣವನ್ನು ರಚಿಸಿದ” ಮಹರ್ಷಿ ವಾಲ್ಮೀಕಿಯವರ ಸಾಧನೆ ಅಪಾರವಾದುದು. ಅವರ ಜೀವನ ಪ್ರತಿಯೊಬ್ಬರಿಗೂ ಸ್ಫೂರ್ತಿದಾಯಕವಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಸಂತಶ್ರೀ ಐ.ಎಸ್. ಮಂಟೂರ ಮಹಾರಾಜರ ಭಾವಚಿತ್ರಕ್ಕೆ ಶರಣರು, ಸಂತರು ಹಾಗೂ ಕಲಾವಿದರು ಪುಷ್ಪಾರ್ಚನೆ ಸಲ್ಲಿಸಿ ಗೌರವ ನಮನಗಳನ್ನು ಅರ್ಪಿಸಿದರು.

ಈ ಸಂದರ್ಭದಲ್ಲಿ ಬೆಳಗಲಿಯ ಯಮನಪ್ಪ ಆಲಗೂರ, ಕುಳಲಿಯ ಮುತ್ತಣ್ಣ ಬನಾಜಗೋಳ, ಕೋಲೂರಿನ ಗೋಪಾಲ ಕೋಲೂರ, ಮುತ್ತಣ್ಣ ಪೋಳ, ರಮೇಶ್ ಸೋಲೋನಿ, ಸಂಗಪ್ಪ ಜೋಗಿ ಸೇರಿದಂತೆ ವಿವಿಧ ಕಲಾವಿದರು ಜನಪದ ಸಂಗೀತ ಸೇವೆ ಸಲ್ಲಿಸಿದರು. ಖ್ಯಾತ ತಬಲಾ ವಾದಕ ಕೋಲೂರಿನ ವೆಂಕಣ್ಣ ಹೂಗಾರ್ ಹಾಗೂ ಮರೆಗುದ್ದಿಯ ಚಿತ್ರಕಲಾವಿದ ನಾಗರಾಜ ಪತ್ತಾರ್ ಅವರನ್ನು ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಹಿರಿಯ ಕಲಾವಿದ ರಾಮಣ್ಣ ಖೋತ, ಲೋಕನಾಯಕಿ ಸಾಂಸ್ಕೃತಿಕ ಸಂಸ್ಥೆಯ ಅಧ್ಯಕ್ಷೆ ಶ್ರೀಮತಿ ಎಲ್. ಶಾಮಲಾ, ಶಿವಲಿಂಗವ್ವ, ಪೊಲೀಸ್ ಅಣ್ಣವ್ವ ಡಂಗಿ ಸೇರಿದಂತೆ ಅನೇಕ ಗಣ್ಯರು ಹಾಗೂ ಭಕ್ತರು ಉಪಸ್ಥಿತರಿದ್ದರು.

ಎಲ್. ಶ್ರೀನಿವಾಸಪ್ರಸಾದ್ ಸ್ವಾಗತಿಸಿದರು. ಕುಮಾರ್ ಗುರುಪ್ರಸಾದ್ ಸ್ವಾಮೀಜಿ ಪ್ರಾಸ್ತಾವಿಕವಾಗಿ ಮಾತನಾಡಿ, ವಂದಿಸಿದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!