
ಕಾಳಗಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ
ಸಾಹಿತ್ಯ ಓದುವ ಅಭಿರುಚಿ ಬೆಳೆಯಲಿ
ಕನ್ನಡ ಭಾಷೆ ಸಾವಿರಾರು ವರ್ಷದ ಇತಿಹಾಸ ಹೊಂದಿದ್ದು, ಯುವ ಪೀಳಿಗೆ ಕನ್ನಡ ಸಾಹಿತ್ಯ ಓದುವ ಅಭಿರುಚಿ ಬೆಳೆಸಿಕೊಳ್ಳಬೇಕು ಎಂದು ಭರತನೂರಿನ ಶ್ರೀ ಚಿಕ್ಕಗುರು ನಂಜೇಶ್ವರ ಶಿವಯೋಗಿ ಸಲಹೆ ನೀಡಿದರು.
ದಿನಾಂಕ 17/11/2026 ಮಂಗಳವಾರ ರಂದು ಕಾಳಗಿ ಪಟ್ಟಣದಲ್ಲಿ ನಡೆದ 2ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು ಕನ್ನಡ ಸಾಹಿತ್ಯ ಶ್ರೀಮಂತ ಪರಂಪರೆ ಮತ್ತು ಸಾಂಸ್ಕೃತಿಕ ವೈಭವ ಹೊಂದಿದೆ ಮತ್ತು ನಾಡಿನ ಸುಂದರ ಸಂಸ್ಕೃತಿ ಉಳುವಿಗೆ ಸಮ್ಮೇಳನಗಳು ದಾರಿ ದೀಪಾವಗಿವೆ ಎಂದು ಹೇಳಿದರು.
ಕಸಾಪ ಜಿಲ್ಲಾ ಅಧ್ಯಕ್ಷರು ವಿಜಯಕುಮಾರ ತೆಗಲತಿಪ್ಪಿ ಮಾತನಾಡಿ ಕನ್ನಡ ಉಳಿಸಿ ಬೆಳೆಸುವದು ಪ್ರತಿಯೊಬ್ಬ ಕನ್ನಡಿಗನ ಕರ್ತವ್ಯವಾಗಿದೆ ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ಜಗದೇವ ಗುತ್ತೇದಾರ, ಸೂಗುರಿನ ಶ್ರೀ ಡಾ. ಚನ್ನರುದ್ರಮುನಿ ಶಿವಾಚಾರ್ಯ ಮಾತನಾಡಿದರು.
ಕಸಾಪ ತಾಲೂಕು ಅಧ್ಯಕ್ಷ ಸಂತೋಷ ಪ್ರಾಸ್ತಾವಿಕ ಮಾತನಾಡಿದರು. ಸಮ್ಮೇಳನ ದ ಸರ್ವಾದ್ಯಕ್ಷ ಗಣಪತರಾವ್ ಶಿಂಗಶೆಟ್ಟಿ, ಪಟ್ಟಣ ಪಂಚಾಯತಿ ಅಧ್ಯಕ್ಷರು ಆದ ಸಾಲಿಯಾ ಬೇಗಂ, ಬಿಇಒ ಶಶಿಧರ ಬಿರಾದಾರ, ಪ್ರಮುಖ ರಾದ ಮಲ್ಲಿಕಾರ್ಜುನ ಗಾಜರೆ, ಮೂಡಬಿ ಗುಂಡೆರಾವ್, ಶಿವಶರಣಪ್ಪ ಕಮಲಾಪುರ್, ವಿಶ್ವನಾಥ್ ವನಮಾಲಿ, ರಾಜಕುಮಾರ ರಾಜಾಪುರ, ಶಿವರಾಜ್ ಅಂಗಡಿ, ಶಿವಲೀಲಾ ಕಲಗೂರ್ತಿ, ಸುರೇಶ್ ದೇಶಪಾಂಡೆ ಹಾಗೂ ಕಾಳಗಿ ಪಟ್ಟಣದ ಜನರು ಉಪಸ್ಥಿತರಿದ್ದರು.
ಶಿಕ್ಷಕಿ ಶ್ರೀದೇವಿ ಕಾಪ್ಸೆ ಪ್ರಾರ್ಥಿಸಿದರು, ವೃಷಬೆಂದ್ರ ಹಿರೇಮಠ್ ಸ್ವಾಗತಿಸಿದರು, ಶಶಿವುಕುಮಾರ್ ಶಾಸ್ತ್ರೀ ನಿರೂಪಣೆ ಮಾಡಿದರು.
ವರದಿಗಾರರು ಶ್ರೀಕಾಂತ




















