ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ವಿದ್ಯಾರ್ಥಿಗಳ ಮೂರು ಪುಸ್ತಕ ಬಿಡುಗಡೆ

ಸರಕಾರಿ ಪ್ರೌಢಶಾಲೆ ಮಾವಿನಕಟ್ಟಿ, ಬೆಳಗಾವಿ ಗ್ರಾಮೀಣ ಪ್ರದೇಶದಲ್ಲಿ 10ನೇ ತರಗತಿಯಲ್ಲಿ ಓದುತ್ತಿರುವ ಕು. ಲಕ್ಷ್ಮಿ ರುದ್ರಗೌಡ ಪಾಟೀಲ ಬರೆದ ‘ವೀರ ಹೃದಯಗಳು’, ಕು. ವೈಷ್ಣವಿ ರಮೇಶ ಇಟಗಿ ಬರೆದ ‘ಮುಗ್ಧ ಮನದ ಹೂದೋಟ’ ಹಾಗೂ ಕು. ಸಂಜೀವಿನಿ ಸಂಜೀವ ಕೋಲಕಾರ ಬರೆದ ‘ಚಿಣ್ಣರ ಚಿತ್ತಾರ’ ಈ ಮೂರು ಕೃತಿಗಳನ್ನು ಘೋಡಗೇರಿಯಲ್ಲಿ ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಆಯೋಜಿಸಿದ ದ್ವಿತೀಯ ಮಕ್ಕಳ ಸಾಹಿತ್ಯ ಸಮ್ಮೇಳನದಲ್ಲಿ ಬಿಡುಗಡೆಗೊಳಿಸಿ ಆ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಹಿರಿಯ ಮಕ್ಕಳ ಸಾಹಿತಿಗಳಾದ ಸಮ್ಮೇಳನದ ಸರ್ವಾಧ್ಯಕ್ಷರು ಡಾ. ಸೊನೊಳ್ಳಿಯವರು ಕೃತಿ ಬಿಡುಗಡೆಗೊಳಿಸಿ, ಇಂತಹ ವಿದ್ಯಾರ್ಥಿಗಳಿಂದ ಮಕ್ಕಳ ಸಾಹಿತ್ಯವು ಬೆಳೆಯುತ್ತಿರುವುದು ಅತ್ಯಂತ ಸಂತೋಷದ ಸಂಗತಿಯಾಗಿದೆ, ಇದೇ ರೀತಿ ಮಕ್ಕಳಿಗೆ ಮಾರ್ಗದರ್ಶನವನ್ನು ಮಾಡುತ್ತಾ ಅವರನ್ನು ಮೇಲೆತ್ತರಕ್ಕೆ ಏರಿಸಬೇಕು ಎಂದರು, ಅವರು ಮಕ್ಕಳ ಕೃತಿಗಳನ್ನು ಮೆಚ್ಚಿ ಆ ಮಕ್ಕಳನ್ನು ಸನ್ಮಾನಿಸಿದರು.

ಕಿರಿಯ ಸರ್ವಾಧ್ಯಕ್ಷೆ ಕು. ಭಾರತಿ ಚಪ್ಪಲ್ಕಟ್ಟಿ ಗುರು ಹಿರಿಯರ ಮಾರ್ಗದರ್ಶನದಲ್ಲಿ ನಾವೆಲ್ಲರೂ ಈ ರೀತಿಯ ಕೃತಿಗಳನ್ನು ರಚಿಸಿ ಸಾಹಿತ್ಯವನ್ನು ಸಮೃದ್ಧಗೊಳಿಸೋಣ ಎಂದು ಹೇಳಿದರು. ಸಮ್ಮೇಳನದಲ್ಲಿ ಶಿವಾನಂದ್ ಮಠದ ಪ. ಪೂ. ಶ್ರೀ ಮಲ್ಲಯ್ಯ ಮಹಾಸ್ವಾಮಿಜಿಗಳು, ಶ್ರೀ ಚಂದ್ರಶೇಖರ್ ಶಿವಾಚಾರ್ಯ ಮಹಾಸ್ವಾಮಿಗಳು, ಶ್ರೀ ಅಭಿನಯ ಮಂಜುನಾಥ್ ಮಹಾಸ್ವಾಮಿಗಳು, ಜಿಲ್ಲಾಧ್ಯಕ್ಷರು ಸಿದ್ರಾಮ ನಿಲಜಗಿ, ಡಾ. ಪ್ರಕಾಶ ಹೊಸಮನಿ, ಹಿರಿಯ ಮಕ್ಕಳ ಸಾಹಿತಿಗಳು ಎಸ್.ಎಂ. ಶಿರೂರ, ಎಂ. ವ್ಯ. ಮೆಣಸಿನಕಾಯಿ, ವಿಜಯ ಬಡಿಗೇರ, ಸುರೇಶ ಸಕ್ರೆನ್ನವರ, ಹನುಮಂತರಾವ್ ನಾಗಪ್ಪಗೋಳ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು ಹಾಗೂ ಸಾವಿರಾರು ಶಾಲಾ ಮಕ್ಕಳು, ಸಾಹಿತ್ಯಾಸಕ್ತರು ಕನ್ನಡ ಅಭಿಮಾನಿಗಳು ಕಾರ್ಯಕ್ರಮದಲ್ಲಿದ್ದರು.
ಆ ವಿದ್ಯಾರ್ಥಿಗಳಿಗೆ ಡಾ. ಸುನೀಲ ಪರೀಟ ಅವರು ಮಾರ್ಗದರ್ಶನ ನೀಡಿದ್ದಾರೆ.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!